Bengaluru Mysuru Highway: ಎಕ್ಸ್‌ಪ್ರೆಸ್ ವೇನಲ್ಲೂ ಶುರುವಾಯ್ತು ವ್ಹೀಲಿಂಗ್, ಪುಂಡರ ಹೆಡೆಮುರಿ ಕಟ್ಟಿದ ಪೊಲೀಸ್ರು
ಯುವಕರು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ವ್ಹೀಲಿಂಗ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಮನಗರ: ಉದ್ಘಾಟನೆಯಾದ ಕೆಲವೇ ತಿಂಗಳಿಗೆ ಸಾವಿನ ಹೆದ್ದಾರಿ ಎಂಬ ಹಣೆಪಟ್ಟಿಯನ್ನು ಪಡೆದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru highway) ಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚು. ಆದ್ರೆ ಇದೇ ಹೆದ್ದಾರಿಯಲ್ಲಿ ಸಾವಿನ ಜೊತೆ ಆಟ ಆಡುತ್ತ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕರು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ವ್ಹೀಲಿಂಗ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋಗಳು ಸುಮಾರು 5-6 ತಿಂಗಳು ಹಳೆಯವು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಯುವಕ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ತನ್ನ ಗಾಡಿ ಮೇಲೆ ಯುವತಿಯೊಬ್ಬಳನ್ನು ಹಿಂದೆ ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ್ದಾನೆ. ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ, ಎಕ್ಸ್‌ಪ್ರೆಸ್‌ವೇನಲ್ಲಿ ಹುಡುಗಿಯನ್ನು ಹಿಂದೆ ಕೂಗಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದವನನ್ನು ಹಾಗೂ ಆತನ ಸ್ನೇಹಿತನನ್ನು ರಾಮನಗರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ವಿವಿಧ ಆರೋಪಗಳಿಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋಗಳು 5-6 ತಿಂಗಳು ಹಳೆಯವು. ಎಸ್ಪಿ ರಾಮನಗರ ಮತ್ತು ಅವರ ತಂಡದ ಕ್ಷಿಪ್ರ ಕ್ರಮವನ್ನು ಶ್ಲಾಘಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
The guy wheeling with a girl as pillion and wheeling on Expressway, has been nabbed along with his associate by Ramanagara District Police
Action being taken against them for various charges
Videos are 5-6 months old
Appreciate the swift action by SP Ramnagar & his team? pic.twitter.com/iEgLlowCvU
— alok kumar (@alokkumar6994) July 6, 2023
ಇದನ್ನೂ ಓದಿ: Bengaluru-Mysore Expressway: ವಾಹನಗಳ ವೇಗಕ್ಕೆ ಬ್ರೇಕ್: ನಿಯಮ ಮುರಿದರೆ ದಂಡ ಅಷ್ಟೇ ಅಲ್ಲ, ಡ್ರೈವಿಂಗ್ ಲೈಸೆನ್ಸ್ ರದ್ದು
ಬುಧವಾರ 3rd eye ಎಂಬ ಚಾನೆಲ್ನ ನಡೆಸುತ್ತಿರುವ ಯೂಟ್ಯೂಬರ್ ಕೂಡ ಬಂಧಿತನ ಸ್ಟಂಟ್‌ನ ವಿಡಿಯೋವನ್ನು ಹಂಚಿಕೊಂಡಿದ್ದು ಟ್ವೀಟ್ ಮಾಡಿದ್ದಾರೆ, ಎಕ್ಸ್‌ಪ್ರೆಸ್‌ವೇಯಲ್ಲಿ ರಾಂಗ್ ಸೈಡ್ ವೀಲಿಂಗ್ ಆಗಿದೆ. ಈ ವ್ಯಕ್ತಿ ಅನೇಕ ಬೈಕ್‌ಗಳಲ್ಲಿ ವೀಲಿಂಗ್ ಮಾಡುತ್ತಿರುವ ಹಲವಾರು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅವರ ವಿಡಿಯೊವೊಂದರಲ್ಲಿ, ಅವರು ಎಕ್ಸ್‌ಪ್ರೆಸ್‌ವೇಯಲ್ಲಿ ರಾಂಗ ರೋಟ್ನಲ್ಲಿ ವೀಲಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ರಾಮನಗರ ಪೊಲೀಸರು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದಿದ್ದಾರೆ.
Wheeling wrong side on Expressway- This guy uploads several videos of him Wheeling on different bikes on Instagram (Shoaibu_46_). In one of his videos, it appears as he rode on the wrong side Wheeling on express way (Is it BLR-MYS expressway?) @alokkumar6994 @blrcitytraffic pic.twitter.com/nsRj6QVEVA
— ThirdEye (@3rdEyeDude) July 5, 2023
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಬಳಿಕ ಈಗ ರಾಮನಗರ ಪೊಲೀಸರು ವೇಗ ತಪಾಸಣೆ ನಡೆಸುತ್ತಿದ್ದಾರೆ. ವೇಗದ ಲಿಮಿಟ್ ಕ್ರಾಸ್ ಮಾಡಿದ ವಾಹನ ಸವಾರರಿಗೆ 1000 ರೂ. ದಂಡ ಹಾಕುತ್ತಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:13 am, Fri, 7 July 23