ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಇನ್ನಷ್ಟು ಬ್ಲ್ಯಾಕ್​ಮೇಲ್ ವಿಡಿಯೊ ಇರಬಹುದಾದ ಶಂಕೆ, ಆರೋಪಿಗಳನ್ನು ವಶಕ್ಕೆ ಕೇಳಲು ಪೊಲೀಸರ ಸಿದ್ಧತೆ

ನೀಲಾಂಬಿಕೆ ಚಿಕ್ಕವಯಸ್ಸಿನಿಂದಲೂ ಸಿದ್ದಗಂಗಾ ಮಠದ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಸಿದ್ದಗಂಗಾ ಮಠಕ್ಕೆ ಬರುವ ಹಲವು ಸ್ವಾಮೀಜಿಗಳನ್ನ ಪರಿಚಯ ಮಾಡಿಕೊಂಡಿದ್ದರು.

ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಇನ್ನಷ್ಟು ಬ್ಲ್ಯಾಕ್​ಮೇಲ್ ವಿಡಿಯೊ ಇರಬಹುದಾದ ಶಂಕೆ, ಆರೋಪಿಗಳನ್ನು ವಶಕ್ಕೆ ಕೇಳಲು ಪೊಲೀಸರ ಸಿದ್ಧತೆ
ಆರೋಪಿ ನೀಲಾಂಬಿಕೆ (ಎಡಚಿತ್ರ), ಮೃತ ಬಸವಲಿಂಗ ಸ್ವಾಮೀಜಿ ಮತ್ತು ಆರೋಪಿ ಮೃತ್ಯುಂಜಯ ಸ್ವಾಮೀಜಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 31, 2022 | 11:28 AM

ರಾಮನಗರ: ತಾಲ್ಲೂಕಿನ ಕಂಚುಗಲ್​ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಹನಿಟ್ರ್ಯಾಪ್ ಸಂಚು ರೂಪಿಸಿದ ಮುಖ್ಯ ಆರೋಪಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ, ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಯುವತಿ ದೊಡ್ಡಬಳ್ಳಾಪುರದ ನೀಲಾಂಬಿಕೆ (ಚಂದು) ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ. ಮೂವರೂ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲು ನ್ಯಾಯಾಧೀಶರಿಗೆ ಪೊಲೀಸರು ಮನವಿ ಮಾಡಲಿದ್ದಾರೆ.

ಪ್ರಸ್ತುತ ಈ ಮೂವರೂ ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ‌ರಾಮನಗರ ಜೈಲಿಗೆ ಸ್ಥಳಾಂತರಿಸಲಾಗಿದೆ. ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ನ್ಯಾಯಾಲಯವು ಈ ಆರೋಪಿಗಳನ್ನು ಪೊಲೀಸರ ವಶಕ್ಕೆ ಕೊಟ್ಟು, ಪೊಲೀಸ್ ವಿಚಾರಣೆ ಮುಂದುವರಿದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಯಾವ ಕೇಸ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ತನಿಖೆಯ ಬಗ್ಗೆ ಗೌಪ್ಯತೆ ಏನೂ ಇಲ್ಲ’ ಎಂದರು.

ಮತ್ತಷ್ಟು ಹನಿಟ್ರ್ಯಾಪ್ ಸಾಧ್ಯತೆ

ಬಂಡೇಮಠದ ಬಸವಲಿಂಗ ‌ಸ್ವಾಮೀಜಿ‌ ಆತ್ಮಹತ್ಯೆಗೆ ಕಾರಣವಾದ ಬ್ಲ್ಯಾಕ್​ಮೇಲ್ ‌ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಆರೋಪಿಗಳು ರೂಪಿಸಿರುವ ಸಂಚಿನ ವಿವರಗಳನ್ನು ಒಂದೊಂದಾಗಿ ಅರಿಯುತ್ತಿದ್ದಾರೆ. ಈ ವೇಳೆ ನೀಲಾಂಬಿಕೆ ಮತ್ತು ಇತರರು ಇನ್ನಷ್ಟು ಸನ್ಯಾಸಿಗಳನ್ನು ಇದೇ ರೀತಿ ಹನಿಟ್ರ್ಯಾಪ್​ ಬಲೆಗೆ ಕೆಡವಿರುವ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ನೀಲಾಂಬಿಕೆ ಹಲವು ಸ್ವಾಮೀಜಿಗಳ ಜೊತೆ ಅನ್ಯೋನ್ಯವಾಗಿದ್ದರು. ದೊಡ್ಡಬಳ್ಳಾಪುರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ನೀಲಾಂಬಿಕೆ, ಚಿಕ್ಕವಯಸ್ಸಿನಿಂದಲೂ ಸಿದ್ದಗಂಗಾ ಮಠದ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಸಿದ್ದಗಂಗಾ ಮಠಕ್ಕೆ ಬರುವ ಹಲವು ಸ್ವಾಮೀಜಿಗಳನ್ನ ಪರಿಚಯ ಮಾಡಿಕೊಂಡಿದ್ದರು.

ನೀಲಾಂಬಿಕೆಯ ಮಾವ ಸಿದ್ದಗಂಗಾ ‌ಮಠದಲ್ಲಿ‌ ಕೆಲಸ ಮಾಡುತ್ತಿದ್ದ ಕಾರಣ ಮಠಕ್ಕೆ ಹೋಗಿ-ಬಂದು ಮಾಡುವುದು ಸುಲಭವಾಗಿತ್ತು. ತನ್ನೊಂದಿಗೆ ಸಲುಗೆಯಿಂದ ಇದ್ದ ಮತ್ತಷ್ಟು ಸ್ವಾಮೀಜಿಗಳ ವಿಡಿಯೊ ಮಾಡಿ ಕಣ್ಣೂರು ಶ್ರೀಗಳಿಗೆ ಈಕೆ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ. ಇದೇ ರೀತಿಯ ವಿಡಿಯೊಗಳನ್ನು ಕೈಲಿಟ್ಟುಕೊಂಡು ಇನ್ನಷ್ಟು ಸ್ವಾಮಿಗಳನ್ನು ಈ ತಂಡ ಬ್ಲ್ಯಾಕ್​ಮೇಲ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ: ಹನಿಟ್ರ್ಯಾಪ್ ಬಲೆ ಬೀಸಿದ್ದ ಯುವತಿಯೊಂದಿಗೆ ಕಣ್ಣೂರು ಮಠದ ಸ್ವಾಮೀಜಿ, ವಕೀಲ ಬಂಧನ

Published On - 11:21 am, Mon, 31 October 22

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ