ಮಾರುದ್ದ ಬಿದ್ದಿರುವ ಗುಂಡಿಗಳು, ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರೋ ವಾಹನ ಸವಾರರು; ಕೂಡಲೇ ರಸ್ತೆ ಸರಿಪಡಿಸುವಂತೆ ಸ್ಥಳೀಯರ ಆಗ್ರಹ
ಅದು ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ. ಆ ರಸ್ತೆಯನ್ನೊಮ್ಮೆ ನೀವು ನೋಡಿದ್ರೆ, ಬೆಚ್ಚಿ ಬೀಳುತ್ತಿರಾ. ಕಿಲೋಮೀಟರ್ ಗಟ್ಟಲೇ ಗುಂಡಿ ಬಿದ್ದಿರೋ ರಸ್ತೆಯಲ್ಲಿಯೇ ವಾಹನ ಸವಾರರು ಪ್ರಾಣವನ್ನ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಗರ: ರಸ್ತೆಯಲ್ಲಿ ಬಿದ್ದಿರುವ ಮಾರುದ್ದ ಗುಂಡಿಗಳು. ದೂಳಿನಿಂದ ಆವೃತ್ತಿಯಾಗಿರೋ ರಸ್ತೆಗಳು. ಗುಂಡಿ ಬಿದ್ದಿರುವ ರಸ್ತೆಯಲ್ಲಿಯೇ ಪ್ರತಿನಿತ್ಯ ವಾಹನ ಸವಾರರ ಪರದಾಟ. ಪ್ರಾಣವನ್ನ ಕೈಯಲ್ಲಿ ಹಿಡಿದು ಸಂಚರಿಸುತ್ತಿರೋ ವಾಹನ ಸವಾರರು. ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ರಾಮನಗರ(Ramanagara) ಜಿಲ್ಲೆಯ ನೂತನ ಐದನೇ ತಾಲೂಕು ಹಾರೋಹಳ್ಳಿಯಲ್ಲಿ. ಹೌದು ಹಾರೋಹಳ್ಳಿ(Harohalli) ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪ್ರತಿನಿತ್ಯ ಗುಂಡಿ ಬಿದ್ದಿರೋ ರಸ್ತೆಯಲ್ಲಿ ಸಂಚರಿಸಬೇಕು. ಯಾವಾಗ ಏನು ಆಗುತ್ತದೆ ಎಂಬುದು ಸಹ ಇವರಿಗೆ ತಿಳಿದಿಲ್ಲ. ಮಾರುದ್ದ ಬಿದ್ದ ಗುಂಡಿಗಳಲ್ಲಿ ಪ್ರಯಾಣಿಕರು ಸಂಚಾರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ದೂಳಿನಿಂದ ತಿರುಗಾಡಲು ಸಹ ಸಾಧ್ಯವಾಗುತ್ತಿಲ್ಲ. ಇನ್ನು ರಾಮನಗರ ಜಿಲ್ಲಾಕೇಂದ್ರದಿಂದ ಹಾರೋಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೇಡಮಾರನಹಳ್ಳಿ ಗ್ರಾಮದ ಬಳಿ ಸುಮಾರು 5 ಕಿಲೋ ಮೀಟರ್ ರಸ್ತೆ ಕಿತ್ತು ಹೋಗಿದ್ದು, ತಿರುಗಾಡಲು ಸಾಧ್ಯವಿಲ್ಲದಂತಾಗಿದೆ. ಆದರೂ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಇದೀಗ ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.
ಅಂದಹಾಗೆ ಹಾರೋಹಳ್ಳಿ, ಫೆಬ್ರವರಿ 21ರಂದು ರಾಮನಗರ ಜಿಲ್ಲೆಯ ನೂತನ ತಾಲೂಕಾಗಿ ಉದ್ಘಾಟನೆ ಸಹ ಗೊಂಡಿದೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಪಟ್ಟಣದಲ್ಲಿ ರಸ್ತೆಗಳ ಸ್ಥಿತಿಯನ್ನ ಕೇಳುವವರು ಇಲ್ಲದಂತೆ ಆಗಿದೆ. ಇನ್ನು ಹಾರೋಹಳ್ಳಿಯಿಂದ ಜಿಲ್ಲಾ ಕೇಂದ್ರ ರಾಮನಗರಕ್ಕೆ ಬರಬೇಕು ಎಂದರೇ ಇದೇ ಒಂದೇ ಮಾರ್ಗ. ಈ ರಸ್ತೆಯಲ್ಲಿ ಗರ್ಭಿಣಿಯರು ಅಪ್ಪಿ ತಪ್ಪಿ ಬಂದರೇ ವಾಹನದಲ್ಲಿಯೇ ಡಿಲೇವರಿಯಾಗುತ್ತದೆ. ಆ ಮಟ್ಟಿಗೆ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇನ್ನು ರಸ್ತೆ ದುರಸ್ಥಿ ಮಾಡುವಂತೆ ಮನವಿ ಮಾಡಿದ್ರು, ಯಾರೊಬ್ಬರು ತಲೆ ಕೆಡಿಸಿಕೊಂಡಿಲ್ಲ.
ಒಟ್ಟಾರೆ ನೂತನ ತಾಲೂಕು ಕೇಂದ್ರಕ್ಕೆ ಜಿಲ್ಲಾ ಕೇಂದ್ರದಿಂದ ಹೋಗಬೇಕು ಎಂದರೇ ಉತ್ತಮವಾದ ರಸ್ತೆಯಿಲ್ಲ. ಹೀಗಾಗಿ ವಾಹನ ಸವಾರರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದ್ರು ಸಂಬಂಧಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ