ರೈತರನ್ನು ಅಟ್ಟಾಡಿಸಿಕೊಂಡು ಹೋದ 30 ಕಾಡಾನೆಗಳ ಹಿಂಡು: ಅನ್ನದಾತ ಬಚಾವ್

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮದ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ರೈತರಿಬ್ಬರನ್ನು ಸುಮಾರು 30 ಆನೆಗಳ ಹಿಂಡು ಹಿಂಬಾಲಿಸಿದ್ದು, ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ರೈತರಿಬ್ಬರು ಬೈಕ್ ಬಿಟ್ಟು ಬೆಟ್ಟದ ಕಡೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇತ್ತ ಸಿಟ್ಟಿನಲ್ಲಿ ಕಾಡಾನೆಗಳ ಹಿಂಡು ಬೈಕ್ ಪುಡಿಗಟ್ಟಿದೆ.

ರೈತರನ್ನು ಅಟ್ಟಾಡಿಸಿಕೊಂಡು ಹೋದ 30 ಕಾಡಾನೆಗಳ ಹಿಂಡು: ಅನ್ನದಾತ ಬಚಾವ್
ಕಾಡಾನೆ ದಾಳಿಗೆ ಬೈಕ್​ ಪುಡಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By:

Updated on: Dec 29, 2023 | 10:24 PM

ರಾಮನಗರ, ಡಿಸೆಂಬರ್​ 29: ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮದ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ರೈತರಿಬ್ಬರನ್ನು ಸುಮಾರು 30 ಆನೆಗಳ (elephant) ಹಿಂಡು ಹಿಂಬಾಲಿಸಿದ್ದು, ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಹೊಲದಲ್ಲಾದ ಹಾನಿ ನೋಡಲು ರೈತರು ತೆರಳಿದ್ದಾರೆ. ಈ ವೇಳೆ ಕಾಡಾನೆಗಳ ಹಿಂಡು ಏಕಾಏಕಿ ನುಗಿದೆ. ರೈತರಿಬ್ಬರು ಬೈಕ್ ಬಿಟ್ಟು ಬೆಟ್ಟದ ಕಡೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇತ್ತ ಸಿಟ್ಟಿನಲ್ಲಿ ಕಾಡಾನೆಗಳ ಹಿಂಡು ಬೈಕ್ ಪುಡಿಗಟ್ಟಿದೆ.

ಬನ್ನೇರುಘಟ್ಟದ ಬಿಳಿಕಲ್ ಅರಣ್ಯ ಕಡೆಯಿಂದ ಕಾಡಾನೆ ಗುಂಪು ಬಂದಿದ್ದು, ಹಲವು ಆನೆಗಳ ಪೈಕಿ ಮರಿಗಳೇ ಹೆಚ್ಚಿದ್ದವು. ಕನಕಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆ ನಾಶ ಮಾಡುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿನೆಡೆಗೆ ಓಡಿಸಿದ್ದಾರೆ.

ಇದನ್ನೂ ಓದಿ: ರಾಮನಗರ: ಆನೆ ಪಳಗಿಸುತ್ತೇನೆ ಎಂದು ಕಾಡಿಗೆ ಹೋದವನು ಕಾಡಾನೆಗೆ ಬಲಿ

ಕಳೆದ ವಾರ ಕಾಡಾನೆಗಳ ಹಿಂಡು ಬೆಳೆ ನಾಶಪಡಿಸುತ್ತಿರುವ ಬಗ್ಗೆ ರೈತರು ಹಲವು ಬಾರಿ ದೂರು ನೀಡಿದ್ದರು. ಹಿಗಾಗಿ ಅರಣ್ಯ ಇಲಾಖೆ ಬೆಟ್ಟೇಗೌಡನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿತ್ತು.

ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ರಾಜ್ಯದಲ್ಲಿ ಆನೆ ಕಾರ್ಯಪಡೆಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ವರ್ಷ ಆನೆಗಳು ಮಾನವ ವಾಸಸ್ಥಳಕ್ಕೆ ನುಗ್ಗಿದ ಹಲವಾರು ನಿದರ್ಶನಗಳು ವರದಿಯಾಗಿವೆ. ರಾಜ್ಯಾದ್ಯಂತ ಕಳೆದ ಮೂರು ತಿಂಗಳಲ್ಲಿ ಆನೆ ದಾಳಿಗೆ ಕನಿಷ್ಠ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಕುರಿ ಕಾಯಲು ತೆರಳಿದ್ದ ರೈತನ ತುಳಿದು ಹಾಕಿದ ಕಾಡಾನೆ

ಜಿಲ್ಲೆಯ ಕನಕಪುರ ಹೊರವಲಯ ಹಾಗೂ ಹಾರೋಹಳ್ಳಿ ಭಾಗದ ರೈತರು ಆನೆಗಳ ದಾಳಿಗೆ ತತ್ತಿರಿಸಿದ್ದು ತಮ್ಮ ಬೆಳೆ ಉಳಿಸಿಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಬದುಕುತ್ತಿದ್ದಾರೆ. ಕನಕಪುರ ಹೊರವಲಯದ ಬನ್ನಿಮೂಡ್ಲು ಗ್ರಾಮದ ಐವತ್ತು ಐದು‌ ವರ್ಷದ ಚಂದ್ರಣ್ಣ ಕುರಿ ಮೇಯಿಸಲು ಕಾಡಿನೆಡೆಗೆ ಹೊರಟಿದ್ದ, ಅರಣ್ಯದೊಳಗೆ ಹೋಗಬೇಡ ಅಲ್ಲಿ ಕಾಡಾನೆ ಗುಂಪಿದೆ ಅಂತ ಗ್ರಾಮಸ್ಥರು ಎಚ್ಚಸಿದ್ದಾರೆ.‌

ಇದನ್ನೂ ಓದಿ: ರಾಮನಗರ: ತೋಟಕ್ಕೆ ತೆರಳಿದ ರೈತನ ಮೇಲೆ ಒಂಟಿ ಸಲಗ ದಾಳಿ; ಸ್ಥಳದಲ್ಲೇ ಸಾವು

ಇದ್ಯಾವುದನ್ನು ಲೆಕ್ಕಿಸದ ಚಂದ್ರಣ್ಣ, ನಾನು ಆನೆ‌ ಪಳಗಿಸುತ್ತೇನೆ ನನಗೇನು ಆಗಲ್ಲ ಅಂತ ಸೋಮವಾರ ಕಾಡಿಗೆ ನುಗ್ಗಿದ್ದಾನೆ.‌ ಕುರಿಗಳೆಲ್ಲವೂ‌ ಮೇಯ್ದು ಗ್ರಾಮಕ್ಕೆ ವಾಪಾಸ್ ಆದರೂ ಚಂದ್ರಣ್ಣ ಮನೆಗೆ ವಾಪಾಸ್ ಬರಲೇ ಇಲ್ಲ. ಅನುಮಾನಗೊಂಡು ಅರಣ್ಯ ಇಲಾಖೆ‌ ಸಿಬ್ಬಂದಿಗೆ ವಿಚಾರ ತಿಳಿಸಿದಾಗ ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ‌ಮಾಡಿದಾಗ ಚಂದ್ರಣ್ಣ ಶವ ಪತ್ತೆಯಾಗಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 pm, Fri, 29 December 23

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us