ಸಿಡಿ ಪ್ರಕರಣಕ್ಕೆ ರೋಚಕ ತಿರುವು; ಸಿಡಿ ಬಿಡುಗಡೆಗೂ ಮುನ್ನ ಯುವತಿ ಜತೆ ಹಣಕಾಸು ವ್ಯವಹಾರ ನಡೆಸಿದ್ದ ಮಾಜಿ ಸಚಿವ ಡಿ.ಸುಧಾಕರ್​?

ಸಿಡಿ ಬಿಡುಗಡೆಗೂ ಎರಡು ದಿನ ಮುನ್ನ ಸಿಡಿ ಪ್ರಕರಣದಲ್ಲಿ ಇದ್ದಾಳೆ ಎನ್ನುವ ಯುವತಿ ಬಳಿ ಡಿ.ಸುಧಾಕರ್ ಹಣದ ವ್ಯವಹಾರ ನಡೆಸಿರುವ ಬಗ್ಗೆ ತನಿಖೆ ವೇಳೆ ಸುಳಿವು ದೊರೆತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾಜಿ ಸಚಿವ ಡಿ.ಸುಧಾಕರ್​ಗೆ ನೋಟಿಸ್​​ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಸಿಡಿ ಪ್ರಕರಣಕ್ಕೆ ರೋಚಕ ತಿರುವು; ಸಿಡಿ ಬಿಡುಗಡೆಗೂ ಮುನ್ನ ಯುವತಿ ಜತೆ ಹಣಕಾಸು ವ್ಯವಹಾರ ನಡೆಸಿದ್ದ ಮಾಜಿ ಸಚಿವ ಡಿ.ಸುಧಾಕರ್​?
ಡಿ. ಸುಧಾಕರ್ ಹಾಗೂ ಸಿಡಿಯಲ್ಲಿದ್ದ ಯುವತಿ
Follow us
guruganesh bhat
|

Updated on:Apr 03, 2021 | 7:28 PM

ಬೆಂಗಳೂರು: ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ಮಾಜಿ ಸಚಿವ ಡಿ. ಸುಧಾಕರ್ ಸಿಡಿ ಯುವತಿ ಜತೆ ಅತಿ ಹೆಚ್ಚು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಎಸ್​ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಚಿತ್ರದುರ್ಗ ಮೂಲದ ಡಿ. ಸುಧಾಕರ್ ಈ ಹಿಂದೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಸಿಡಿ ಬಿಡುಗಡೆಗೂ ಎರಡು ದಿನ ಮುನ್ನ ಸಿಡಿ ಪ್ರಕರಣದಲ್ಲಿ ಇದ್ದಾಳೆ ಎನ್ನುವ ಯುವತಿ ಬಳಿ ಡಿ.ಸುಧಾಕರ್ ಹಣದ ವ್ಯವಹಾರ ನಡೆಸಿರುವ ಬಗ್ಗೆ ತನಿಖೆ ವೇಳೆ ಸುಳಿವು ದೊರೆತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾಜಿ ಸಚಿವ ಡಿ.ಸುಧಾಕರ್​ಗೆ ನೋಟಿಸ್​​ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಯಾರಿದು ಡಿ. ಸುಧಾಕರ್? ಮಾಜಿ ಸಚಿವ ಡಿ ಸುಧಾಕರ್ ಚಿತ್ರದುರ್ಗ ಮೂಲದವರು. 2004ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2008 ಮತ್ತು 2013ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲೂ ಗೆದ್ದಿದ್ದರು. ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು. ಸದ್ಯ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿಯೂ ಮಾಜಿ ಸಚಿವ ಡಿ.ಸುಧಾಕರ್​ ಸಿಡಿ ಸಂತ್ರಸ್ತೆಯ ಜತೆ ಕರೆ ಮಾಡಿ ಮಾತನಾಡಿದ್ದರು ಎಂದು ಎಸ್​ಐಟಿಗೆ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ.

ನನಗೆ ಯಾವುದೇ ಸಂಬಂಧ ಇಲ್ಲ ಎಂದ ಮಾಜಿ ಸಚಿವ ಡಿ.ಸುಧಾಕರ್

​ಸಿಡಿ ಸಂತ್ರಸ್ತೆ ಜತೆ​ ನಂಟು ಹೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಟಿವಿ9ಗೆ ಮಾಜಿ ಸಚಿವ ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೂ ಸಿಡಿ ಸಂತ್ರಸ್ತೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ.ಇದನ್ನು ನೋಡಿ ನನಗೆ ಆಶ್ಚರ್ಯ ಆಗಿದೆ. ನಾನು ಯಾವುದೇ ಹಣದ ವ್ಯವಹಾರ ಮಾಡಿಲ್ಲ. ನನಗೆ ದಿನನಿತ್ಯ ನೂರಾರು ಜನರು ಕರೆ ಮಾಡುತ್ತಾರೆನಾನು ಹಣ ವರ್ಗಾಯಿಸಿದ್ದಕ್ಕೆ ಸಾಕ್ಷಿ ಇದೆಯಾ? ಯುವತಿ ಕಾಲ್​ ಲಿಸ್ಟ್​ನಲ್ಲಿ ನನ್ನ ಹೆಸರು ಇರಬಹುದು. ಆದರೆ ನಾನು ಹಣ ನೀಡಿದ್ದೇನೆ ಅನ್ನುವುದು ಸುಳ್ಳು. ನೋಟಿಸ್​ ಬಂದ ಬಳಿಕ ನಾನು ಉತ್ತರ ಕೊಡುತ್ತೇನೆ. ನನ್ನದು ಏನಿದೆ ಎಂದು ನೋಟಿಸ್​ ಕೊಡುತ್ತಾರೆ. ನೋಟಿಸ್​ ಕೊಟ್ಟರೆ ನಾನು ವಿಚಾರಣೆಗೆ ಹೋಗುತ್ತೇನೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನನ್ನು ಯಾರೂ ಅಪಹರಿಸಿರಲಿಲ್ಲ, ಸ್ನೇಹಿತನೊಂದಿಗೆ ನಾನೇ ಗೋವಾ ಹೋಗಿದ್ದೆ ಎಂದ ಸಂತ್ರಸ್ತೆ

ಪೂರ್ವಯೋಜಿತ ರಾಜಕೀಯ ಷಡ್ಯಂತ್ರ ಎಂದು ನಿರೂಪಿಸಲು ಬಲವಾದ ಸಾಕ್ಷ್ಯದ ಬೇಟೆಯಲ್ಲಿ ರಮೇಶ್​ ಜಾರಕಿಹೊಳಿ?

Published On - 7:18 pm, Sat, 3 April 21