ಸಿಡಿ ಯುವತಿ ಪೋಷಕರ ಹೇಳಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ-ಕಚೇರಿಗೆ ಹೆಚ್ಚಿನ ಭದ್ರತೆ

| Updated By: ganapathi bhat

Updated on: Apr 05, 2022 | 1:10 PM

ಸದಾಶಿವನಗರ ಠಾಣೆ ಪೊಲೀಸರಿಂದ ಡಿ.ಕೆ. ಶಿವಕುಮಾರ್ ಕಚೇರಿಗೆ ಹೆಚ್ಚುವರಿ ಬಂದೋಬಸ್ತ್ ಒದಗಿಸಲಾಗಿದೆ. ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ಗಳ ನಿಯೋಜನೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ನಿವಾಸದ ಹಿಂದಿನ ರಸ್ತೆಯಲ್ಲಿ ಡಿ.ಕೆ. ಶಿವಕುಮಾರ್ ನಿವಾಸವಿದೆ.

ಸಿಡಿ ಯುವತಿ ಪೋಷಕರ ಹೇಳಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ-ಕಚೇರಿಗೆ ಹೆಚ್ಚಿನ ಭದ್ರತೆ
ಡಿ.ಕೆ. ಶಿವಕುಮಾರ್
Follow us on

ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೆಸರು ಕೂಡ ಕೇಳಿಬರುತ್ತಿದೆ. ಸಿಡಿಯಲ್ಲಿದ್ದ ಯುವತಿಯ ತಂದೆ-ತಾಯಿ ಎಸ್​ಐಟಿ ತನಿಖೆ ವೇಳೆ ಡಿ.ಕೆ. ಶಿವಕುಮಾರ್ ಹೆಸರನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಚೇರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಸದಾಶಿವನಗರ ಠಾಣೆ ಪೊಲೀಸರಿಂದ ಡಿ.ಕೆ. ಶಿವಕುಮಾರ್ ಕಚೇರಿಗೆ ಹೆಚ್ಚುವರಿ ಬಂದೋಬಸ್ತ್ ಒದಗಿಸಲಾಗಿದೆ. ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ಗಳ ನಿಯೋಜನೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ನಿವಾಸದ ಹಿಂದಿನ ರಸ್ತೆಯಲ್ಲಿ ಡಿ.ಕೆ. ಶಿವಕುಮಾರ್ ನಿವಾಸವಿದೆ.

ಯುವತಿಯ ಪೋಷಕರಿಗೂ ಪೊಲೀಸ್ ಭದ್ರತೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಆಡುಗೋಡಿ ಎಸ್​ಐಟಿ ಟೆಕ್ನಿಕಲ್​ ವಿಂಗ್ ಮುಂದೆಯೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಲ್ಲಿ ಸಿಡಿ ಲೇಡಿ ಪೋಷಕರು ವಿಚಾರಣೆ ಎದುರಿಸುತ್ತಿದ್ದಾರೆ. ಆ ಪ್ರದೇಶದಲ್ಲಿ ಬ್ಯಾರಿಕೇಡ್​ ಹಾಕಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಎಸ್​ಐಟಿ ತನಿಖೆ ಮುಗಿಸಿ ಕೆಲ ಕ್ಷಣಗಳಲ್ಲಿ ಯುವತಿ ಪೋಷಕರು ಹೊರಬರಲಿದ್ದಾರೆ. ಇಬ್ಬರು ಇನ್ಸ್​ಪೆಕ್ಟರ್​ಗಳ ನೇತೃತ್ವದಲ್ಲಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ.

ತನಿಖಾ ತಂಡದ ನೇತೃತ್ವ ವಹಿಸಿರುವ ಸೌಮೇಂದು ಮುಖರ್ಜಿ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ರವಿಕುಮಾರ್, ಎಂ.ಎನ್. ಅನುಚೇತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯುವತಿ ಪೋಷಕರ ವಿಚಾರಣೆ ಬಹುತೇಕ ಅಂತ್ಯವಾಗಿದೆ. ಪೋಷಕರ ಹೇಳಿಕೆ, ಸಹೋದರರ ಹೇಳಿಕೆಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಹಿರಿಯ ಅಧಿಕಾರಿಗಳಿಂದಲೂ ಅಂತಿಮ ಹಂತದ ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ. ಎಸ್​ಐಟಿ ತನಿಖೆ ಮುಕ್ತಾಯದ ಬಳಿಕ ಯುವತಿಯ ಪೋಷಕರು ಸುದ್ದಿಗಾರರೊಂದಿಗೆ ಮಾತನಾಡಲಿದ್ದಾರೆ.

ಇದನ್ನೂ ಓದಿ: ಸಿಡಿ ಗ್ಯಾಂಗ್, ಡಿಕೆ ಶಿವಕುಮಾರ್ ಅವರಿಂದ ನಮ್ಮ ಮಗಳ ರಕ್ಷಿಸಿ; ಮಗಳ ಪ್ರಾಣಕ್ಕೇ ಅಪಾಯವಿದೆ: ಎಸ್​ಐಟಿ ಎದುರು ಕಣ್ಣೀರಾದ ಯುವತಿಯ ತಂದೆ-ತಾಯಿ

Belgavi Lok Sabha By-Election: ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬರೋದು ಬೇಡ ಎನ್ನುತ್ತಿರುವ ಸತೀಶ್​ ಜಾರಕಿಹೊಳಿ ಬೆಂಬಲಿಗರು; ಸೆಕ್ಸ್​ ಸಿಡಿ ಹುಟ್ಟಿಸಿದ ಆತಂಕ ! 

Published On - 4:22 pm, Sat, 27 March 21