ರಾಜಕೀಯ ತಿರುವು ಪಡೆದ ಸಾಹುಕಾರ್ ಸಿಡಿ ಕೇಸ್.. ಕಲಾಪದಲ್ಲಿಂದು ಮತ್ತೆ ಸ್ಫೋಟಿಸಲಿದೆ ಸಿಡಿ ಪ್ರಕರಣ
ಸಾಹುಕಾರ್ ಸಿಡಿಗೆ ಹೊಸ ಬಣ್ಣ ಸಿಗೋ ಎಲ್ಲ ಲಕ್ಷಣಗಳು ಗೋಚರಿಸ್ತಿವೆ. ಸದಾಶಿವನಗರದಲ್ಲೇ ಷಡ್ಯಂತ್ರ ಅಂತಾ ದೂರು ದಾಖಲಾಗ್ತಿದ್ದಂತೆ, ಸಿಡಿ ಸಮರ ರಾಜಕೀಯ ತಿರುವು ಪಡೆದುಕೊಳ್ತಿದೆ. ಸಿಡಿ ಸಮರಕ್ಕೆ ಇಳಿದಿರೋ ಡಿಕೆಶಿ, ನನ್ನ ಸಿಡಿ ಪ್ರಕರಣದಲ್ಲಿ ಸಿಲುಕಿಸೋ ಯತ್ನ ಮಾಡಲಾಗ್ತಿದೆ ಅಂತಾ ಹೇಳಿರೋದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇಂದು ನಡೆಯೋ ಕಲಾಪದಿಂದ್ಲೇ ಪೊಲಿಟಿಕಲ್ ವಾರ್ ಶುರುವಾಗೋ ಸಾಧ್ಯತೆ ಇದೆ.
ಸಿಡಿ ಕೇಸ್ ಹಿಂದೆ ಮಹಾನಾಯಕ.. ರಮೇಶ್ ಜಾರಕಿಹೊಳಿ ಹೊತ್ತಿಸಿದ ಈ ಕಿಡಿ ಈಗ ಜ್ವಾಲೆಯಾಗಿ ಧಗಧಗಿಸ್ತಿದೆ. ಸದಾಶಿವನಗರದಲ್ಲೇ ಷಡ್ಯಂತ್ರ ಎಂಬ ದೂರು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಯಾಕೆಂದ್ರೆ, ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ತಿರೋ ಜಾರಕಿಹೊಳಿ ಸಿಡಿ ಪ್ರಕರಣಕ್ಕೀಗ ನಿಧಾನವಾಗಿ ರಾಜಕೀಯ ಬಣ್ಣ ಮೆತ್ತಿಕೊಳ್ತಿದೆ. ಅಲ್ಲದೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಟಾಕ್ವಾರ್ಗೂ ವೇದಿಕೆಯಾಗಿದೆ.
‘ನನ್ನ ವಿರುದ್ಧ ಷಡ್ಯಂತ್ರ ನಡೀತಿದೆ ಎಂದ ಡಿಕೆಶಿ’ ಡಿಕೆ ಶಿವಕುಮಾರ್ ಆಡಿರೋ ಇದೊಂದೇ ಮಾತು, ಇದೀಗ ಸಿಡಿ ಕೇಸ್‌ಗೆ ಪೊಲಿಟಿಕಲ್ ಟಚ್ ಸಿಕ್ಕಂತಾಗಿದೆ. ರಮೇಶ್ ಜಾರಕಿಹೊಳಿ ಅದ್ಯಾವಾಗ ಸದಾಶಿವನಗರದಲ್ಲೇ ಷಡ್ಯಂತ್ರ ನಡೆದಿದೆ ಅಂತಾ ದೂರು ಕೊಟ್ರೋ, ಆಗಲೇ ಸಿಡಿ ಕೇಸ್ ತಿರುವು ಪಡೆದು ರಾಜಕೀಯ ಜ್ವಾಲೆಯಾಗಿ ಹೊತ್ತಿ ಉರಿಯುತ್ತಿದೆ. ಎಫ್‌ಐಆರ್ ದಾಖಲಾಗ್ತಿದ್ದಂತೆ ಪ್ರತಿಕ್ರಿಯಿಸಿರೋ ಡಿಕೆಶಿ, ಸಿಡಿ ಕೇಸ್‌ನಲ್ಲಿ ನನ್ನ ಸಿಲುಕಿಸೋ ಯತ್ನ ನಡೀತಿದೆ ಅಂತಾ ಕೆಂಡವಾಗಿದ್ದಾರೆ.
‘ಸಿಡಿ’ ಪ್ರಕರಣದಲ್ಲಿ ಯಾರನ್ನೂ ಸಿಲುಕಿಸಲಾಗಲ್ಲ’ ಡಿಕೆಶಿ ನನ್ನ ಮೇಲೆ ಷಡ್ಯಂತ್ರ ನಡೆಸಲಾಗ್ತಿದೆ ಅಂತಾ ಹೇಳ್ತಿದ್ದಂತೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ಸಿಲುಕಿಸುವುದಕ್ಕೆ ಆಗಲ್ಲ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರುತ್ತೆ ಅಂತಾ ಗುಡುಗಿದ್ದಾರೆ. ಸಿಡಿ ಷಡ್ಯಂತ್ರದ ಬಗ್ಗೆ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆ ನೀಡ್ತಿದ್ದಾರೆ. ಆದ್ರೆ, ಇಂದು ಸದನದಲ್ಲಿ ಸಿಡಿ ಕೇಸ್ ಬ್ಲಾಸ್ಟ್ ಆಗೋ ಸಾಧ್ಯತೆ ಇದ್ದು, ರಾಜಕೀಯ ಸಮರವಾಗೋ ಎಲ್ಲ ಮುನ್ಸೂಚನೆ ಸಿಕ್ತಿದೆ.
‘ಮಹಾನಾಯಕ’ ಚರ್ಚೆಗೆ ಹೆಚ್‌ಡಿಕೆ ಮೆಗಾ ಟ್ವಿಸ್ಟ್ ಇನ್ನು ಡಿಕೆಶಿ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರನ್ನು ಯಾರಾದ್ರು ಹೇಳಿದ್ದಾರಾ. ರಾಜ್ಯದಲ್ಲಿ ಮಹಾನಾಯಕರು ಬಹಳ ಜನ ಇದ್ದಾರೆ. ಬಿಜೆಪಿಯೊಳಗೇ ಒಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ. ಡಿಕೆಶಿ ತಮ್ಮ ಹೆಸರನ್ನು ತಾವೇ ಯಾಕೆ ಸಿಲುಕಿಸಿಕೊಂಡ್ರು ಗೊತ್ತಿಲ್ಲ ಎಂದಿದ್ದಾರೆ.
ಇಂದು ಸದನದಲ್ಲಿ ಬ್ಲಾಸ್ಟ್ ಆಗುತ್ತಾ ಸಿಡಿ ಕೇಸ್? ಇನ್ನೂ ಸಿಡಿ ಕೇಸ್ ಇಂದು ಸದನದಲ್ಲಿ ಬ್ಲಾಸ್ಟ್ ಆಗೋ ಸಾಧ್ಯತೆ ಇದೆ. ಬುಧವಾರ ಮಧ್ಯಾಹ್ನ ಮುಂದೂಡಿಕೆಯಾಗಿದ್ದ ಬಜೆಟ್ ಅಧಿವೇಶನ ಇಂದಿನಿಂದ ಮತ್ತೆ ಮುಂದುವರೆಯಲಿದೆ. ಇಂದು ಬಜೆಟ್ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಆರಂಭಿಸಬೇಕಿದೆ. ಆದರೆ ಬಹುತೇಕ ಬಜೆಟ್ ಚರ್ಚೆ ಬದಿಗೆ ಸರಿದು ಸಿಡಿ ಸ್ಫೋಟವೇ ಸದನದೊಳಗೂ ಸದ್ದು ಮಾಡಿ ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿಡಿಯಲ್ಲಿರುವ ಲೇಡಿಯೇ ಹೇಳಿಕೆ ನೀಡಿರುವುದರಿಂದ ಕಲಾಪದಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸದನದಲ್ಲಿ ಮಾತನಾಡ್ತೀನಿ ಎಂದಿದ್ದಾರೆ.
ತನಿಖೆ ತೀವ್ರಗೊಳಿಸಿರೋ ಎಸ್ಐಟಿ ಸಿಡಿ ಶೂರನೊಬ್ಬನಿಗಾಗಿ ತಲಾಶ್ ನಡೆಸ್ತಿದೆ. ಆ ಸಿಡಿ ಶೂರನ ಜೊತೆ ರಾಜಕೀಯ ನಾಯಕರು ತೆಗೆಸಿಕೊಂಡ ಫೋಟೋಗಳಿವೆ ಎನ್ನಲಾಗಿದ್ದು, ಫೋಟೋಗಳು ಬಹಿರಂಗವಾದ್ರೆ, ಸಿಡಿ ಸಮರ ರಾಜಕೀಯ ಯುದ್ಧವಾಗಿ ಬದಲಾಗೋದು ನಿಶ್ಚಿತ.
ಒಂದೆಡೆ ಸಿಡಿ ಪ್ರಕರಣದ ಬಗ್ಗೆ ಎಸ್ಐಟಿ ಟೀಂ ಹಗಲು ರಾತ್ರಿ ತನಿಖೆ ನಡೆಸ್ತಿದ್ರೆ ಇತ್ತ ರಾಜ್ಯದ ಸೆನ್ಸೇಷನಲ್ ಇಶ್ಯೂ ಬಗ್ಗೆ ರಾಜಕೀಯ ನಾಯಕರು ಪರಸ್ಪರರ ವಿರುದ್ಧ ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಇಂದು ಸದನದಲ್ಲಿ ಸಿಡಿ ಕೇಸ್ ಸ್ಫೋಟಕೊಂಡು ಅದ್ಯಾವ ದಿಕ್ಕಿಗೆ ಹೋಗುತ್ತೋ ಅನ್ನೋದು ಕಾದುನೋಡ್ಬೇಕು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ CD ಕೇಸ್; ಮೂವರನ್ನು ವಶಕ್ಕೆ ಪಡೆದ SIT