AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಡಿ ಲೇಡಿ’ ಗ್ರಾಮಕ್ಕೆ ಖಾಕಿ ಭೇಟಿ: ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಡಿಯೋದಲ್ಲಿರುವ ಸಂತ್ರಸ್ತೆಯ ಗ್ರಾಮಕ್ಕೆ ಕಬ್ಬನ್​ಪಾರ್ಕ್ ಪೊಲೀಸರು ಭೇಟಿಕೊಟ್ಟರು. ಬಾಗಲಕೋಟೆ ‌ಜಿಲ್ಲೆಯ ಸಂತ್ರಸ್ತೆಯ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದರು.

‘ಸಿಡಿ ಲೇಡಿ’ ಗ್ರಾಮಕ್ಕೆ ಖಾಕಿ ಭೇಟಿ: ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್
‘ಸಿಡಿ ಲೇಡಿ’ ಗ್ರಾಮಕ್ಕೆ ಖಾಕಿ ಭೇಟಿ
KUSHAL V
|

Updated on: Mar 14, 2021 | 9:48 PM

Share

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಡಿಯೋದಲ್ಲಿರುವ ಸಂತ್ರಸ್ತೆಯ ಗ್ರಾಮಕ್ಕೆ ಕಬ್ಬನ್​ಪಾರ್ಕ್ ಪೊಲೀಸರು ಭೇಟಿಕೊಟ್ಟರು. ಬಾಗಲಕೋಟೆ ‌ಜಿಲ್ಲೆಯ ಸಂತ್ರಸ್ತೆಯ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದರು. ಯುವತಿಯ ಗ್ರಾಮಕ್ಕೆ ಇಬ್ಬರು ಪೊಲೀಸರು ಭೇಟಿ ನೀಡಿದರು. ಪೊಲೀಸರು ಗ್ರಾಮದಲ್ಲಿ ಕೆಲವರನ್ನ ಮಾತಾಡಿಸಿ ಮಾಹಿತಿ ಸಂಗ್ರಹಿಸಿದರು. ಸದ್ಯ, ಕಳೆದ 25 ವರ್ಷದಿಂದ ಊರು ಬಿಟ್ಟಿರುವ ಯುವತಿ ತಂದೆ ಆಗಾಗ ಊರಿಗೆ ಬಂದು ಹೋಗುತ್ತಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿದೆ.

BGK GIRL NOTICE

ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್

ಹೀಗಾಗಿ, ಮನೆ ಪರಿಶೀಲಿಸಿ ನೋಟಿಸ್ ಅಂಟಿಸಿ ಪೊಲೀಸರು ತೆರಳಿದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ಅಂಟಿಸಿದರು. ನೋಟಿಸ್ ನೋಡಿದ ತಕ್ಷಣ ವಿಚಾರಣೆಗೆ ಹಾಜರಾಗಬೇಕು ಎಂದು ಕಬ್ಬನ್​ಪಾರ್ಕ್​​ ಠಾಣೆ ಪೊಲೀಸರಿಂದ ಯುವತಿಗೆ ಸೂಚನೆ ನೀಡಲಾಗಿದೆ.

‘ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ’ ಇತ್ತ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿ ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ ಎಂದು ರಮೇಶ್ ಸಹೋದರ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಯಾರ ಮೇಲೆ ಯಾರೂ ದ್ವೇಷ ಮಾಡುವ ಅಗತ್ಯವಿಲ್ಲ. ಪೊಲೀಸ್ ಇಲಾಖೆಯಿದೆ, ಪೊಲೀಸರು ತನಿಖೆ ಮಾಡುತ್ತಾರೆ. ನಿನ್ನೆಯಷ್ಟೇ ಪೊಲೀಸ್ ತನಿಖೆ ಆರಂಭವಾಗಿದೆ, ಕಾಯೋಣ. ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ ಎಂದು ಹೇಳಿದರು.

VIJ SATISH JARKIHOLI 1

ಸತೀಶ್ ಜಾರಕಿಹೊಳಿ

ಸಿಡಿ ಕೇಸ್‌ನ ತನಿಖೆ ಸಿಬಿಐಗೆ ವಹಿಸಲು ನಾವು ಆಗ್ರಹಿಸಲ್ಲ ಎಂದು ಶಾಸಕ ಯತ್ನಾಳ್‌ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಇಂಥ ಘಟನೆ ನಡೆಯಬಾರದೆಂದು ಎಲ್ಲರ ಅಭಿಪ್ರಾಯವಿದೆ. ಪೊಲೀಸರು ಯಾವ ತನಿಖೆ ಬೇಕಾದ್ರೂ ಮಾಡಲಿ ಎಂದು ರಮೇಶ್ ಸಹೋದರ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.

VIJ SATISH JARKIHOLI 2

ಸ್ಮಶಾನ ವಾಸ್ತವ್ಯ ಕಾರ್ಯಕ್ರಮ

ಮೌಢ್ಯ ನಿವಾರಣೆಗೆ ಸ್ಮಶಾನ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ಜುಮನಾಳದಲ್ಲಿ ತೆರೆದ ವಾಹನದಲ್ಲಿ ಸತೀಶ್ ಅವ​ರನ್ನು ಮೆರವಣಿಗೆ ಮುಖಾಂತರ ಕಾರ್ಯಕ್ರಮಕ್ಕೆ ಕರೆತರಲಾಯಿತು. ವಿಜಯಪುರ ಜಿ.ಪಂ ಅಧ್ಯಕ್ಷೆ ಸುಜಾತಾರಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Darshan | ಹಾಸನದಲ್ಲಿ D ಬಾಸ್​ ಹವಾ.. ‘ಐರಾವತ’ನ ನೋಡಲು ಮುಗಿಬಿದ್ದ ಅಭಿಮಾನಿಗಳು

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ