‘ಶಿವಕುಮಾರ್​ ಭ್ರಷ್ಟಾಚಾರದಿಂದ ಸರ್ಕಾರ ಪತನಕ್ಕೆ 14ತಿಂಗಳ ಹಿಂದೆಯೇ ಪ್ಲಾನ್’

|

Updated on: Nov 15, 2019 | 5:03 PM

ಬೆಳಗಾವಿ: ಮೇ 15 ರಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್​ ರೂಪಿಸಿದ್ದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. ಗೋಕಾಕ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಆಪರೇಷನ್ ಕಮಲದ ಕುರಿತು ಸ್ಫೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸೈಡ್​ ಲೈನ್​ ಆಗಿದ್ರು: ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತ ರಮೇಶ್ ಜಾರಕಿಹೊಳಿ‌, 14 ತಿಂಗಳ ಹಿಂದೆಯೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ಮಾಡಲಾಗಿತ್ತು, ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ನವರು ಸೈಡ್​ ಲೈನ್​ ಆಗಿದ್ರು. ಡಿ.ಕೆ.ಶಿವಕುಮಾರ್ […]

ಶಿವಕುಮಾರ್​ ಭ್ರಷ್ಟಾಚಾರದಿಂದ ಸರ್ಕಾರ ಪತನಕ್ಕೆ 14ತಿಂಗಳ ಹಿಂದೆಯೇ ಪ್ಲಾನ್
Follow us on

ಬೆಳಗಾವಿ: ಮೇ 15 ರಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್​ ರೂಪಿಸಿದ್ದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. ಗೋಕಾಕ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಆಪರೇಷನ್ ಕಮಲದ ಕುರಿತು ಸ್ಫೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಸೈಡ್​ ಲೈನ್​ ಆಗಿದ್ರು:
ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತ ರಮೇಶ್ ಜಾರಕಿಹೊಳಿ‌, 14 ತಿಂಗಳ ಹಿಂದೆಯೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ಮಾಡಲಾಗಿತ್ತು, ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ನವರು ಸೈಡ್​ ಲೈನ್​ ಆಗಿದ್ರು. ಡಿ.ಕೆ.ಶಿವಕುಮಾರ್ ಅವರ ಕೈಯಲ್ಲಿ ಕಾಂಗ್ರೆಸ್​ ಕೈಗೊಂಬೆಯಂತಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದಿಂದ ನಾವು ಬೇಸತ್ತು ಹೋಗಿದ್ದೆವು. ಹೀಗಾಗಿ ಮೇ 15 ರಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್​ ರೂಪಿಸಿದ್ದಿವಿ.


ಪ್ರಮಾಣ ವಚನ ಸ್ವೀಕಾರ ದಿನವೇ ಸಮ್ಮಿಶ್ರ ಸರ್ಕಾರಕ್ಕೆ ಮುಹೂರ್ತ:

ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನವೇ ಪ್ಲಾನ್​ ಮಾಡಿದ್ದೆ. ಈ ಕಾರಣಕ್ಕಾಗಿ ಯಡಿಯೂರಪ್ಪ ಮತ್ತು ಅಮಿತ್​ ಶಾ ಅವರ ಭೇಟಿ ಮಾಡಿ ಯಡಿಯೂರಪ್ಪ ಅವರನ್ನ ಸಿಎಂ​ ಮಾಡಿದ್ರೆ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಮನವೊಲಿಸಿದ್ದೆವು. ಏಳೆಂಟು ಬಾರಿ ವಿಫಲವಾದ್ರೂ ಕೊನೆಗೂ ಸರ್ಕಾರ ಪತನಗೊಳಿಸಿದ್ದೇವೆ ಎಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಸಂಗತಿಗಳನ್ನು ಅವರು ಹೊರಹಾಕಿದ್ದಾರೆ.

Published On - 4:50 pm, Fri, 15 November 19