‘ಪ್ರಧಾನಿ ಮೋದಿ ಹಿಂದೂ ಪರಂಪರೆಯ ಪ್ರತಿನಿಧಿ’
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರ ಸಂಬಂಧಿಸಿ ಉಡುಪಿಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಮಾತನಾಡಿದ್ದಾರೆ. ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹ ಹಿರಿಯರ ಕನಸಾಗಿತ್ತು, ಇಂತಹ ಎಲ್ಲ ಮಹಾನುಭಾವರು ಒಳಗೊಂಡು ಟ್ರಸ್ಟ್ ನಿರ್ಮಿಸಲಿ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕಜ್ಞಾನ ಪರಂಪರೆ ಪ್ರತೀಕವಾಗಲಿ. ವ್ಯಾಟಿಕನ್, ಮೆಕ್ಕಾದಂತೆ ರಾಮಮಂದಿರ ರೂಪುಗೊಳ್ಳಬೇಕು. ಅದು ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಎಂಬುವುದು ನನ್ನ ಬಯಕೆಯಾಗಿದೆ. ಅಯೋಧ್ಯೆ ಜ್ಞಾನತೀರ್ಥವಾಗಲಿ, ವಿದ್ಯಾಪರಂಪರೆ ಪ್ರತೀಕವಾಗ ಬೇಕು ಎಂದು ರಾಮ ಜನ್ಮಭೂಮಿ ನ್ಯಾಸ್ […]
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರ ಸಂಬಂಧಿಸಿ ಉಡುಪಿಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಮಾತನಾಡಿದ್ದಾರೆ. ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹ ಹಿರಿಯರ ಕನಸಾಗಿತ್ತು, ಇಂತಹ ಎಲ್ಲ ಮಹಾನುಭಾವರು ಒಳಗೊಂಡು ಟ್ರಸ್ಟ್ ನಿರ್ಮಿಸಲಿ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕಜ್ಞಾನ ಪರಂಪರೆ ಪ್ರತೀಕವಾಗಲಿ. ವ್ಯಾಟಿಕನ್, ಮೆಕ್ಕಾದಂತೆ ರಾಮಮಂದಿರ ರೂಪುಗೊಳ್ಳಬೇಕು. ಅದು ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಎಂಬುವುದು ನನ್ನ ಬಯಕೆಯಾಗಿದೆ.
ಅಯೋಧ್ಯೆ ಜ್ಞಾನತೀರ್ಥವಾಗಲಿ, ವಿದ್ಯಾಪರಂಪರೆ ಪ್ರತೀಕವಾಗ ಬೇಕು ಎಂದು ರಾಮ ಜನ್ಮಭೂಮಿ ನ್ಯಾಸ್ ಗೆ ರಾಮ್ ದೇವ್ ಸಲಹೆ ನೀಡಿದ್ದಾರೆ. ರಾಮನವಮಿ ದಿನವೇ ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿ, ಮಂದಿರದ ಶಿಲಾನ್ಯಾಸ ಪ್ರಧಾನಿಯವರೇ ಮಾಡಲಿ ಎಂದಿದ್ದಾರೆ.
ಪ್ರಧಾನಿ ಹಿಂದೂ ಪರಂಪರೆಯ ಪ್ರತಿನಿಧಿ: ಕೇವಲ ಸರ್ಕಾರವೇ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ಪ್ರಧಾನಮಂತ್ರಿ ಶಿಲಾನ್ಯಾಸ ಮಾಡಲು ಅಡ್ಡಿಯಿಲ್ಲ. ಪ್ರಧಾನಿ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಕೆಲಸ ಮಾಡಲಿ, ಮಂದಿರದ 67 ಎಕರೆ ಬಿಟ್ಟು ಬೇರೆ ಜಾಗದಲ್ಲಿ ಅಯೋಧ್ಯೆಯಲ್ಲೇ ಮಸೀದಿಯೂ ದಿವ್ಯವಾಗಿ ನಿರ್ಮಾಣವಾಗಲಿ ಎಂದು ರಾಮಮಂದಿರದ ನಿರ್ಮಾಣಕ್ಕೆ ಸಲಹೆಗಳನ್ನು ನೀಡಿದ್ದಾರೆ.
ಹಿಂದೂ ಮುಸ್ಲಿಮರ ಡಿಎನ್‌ಎ ಒಂದೇ: ಇನ್ನು ಮಸೀದಿ ನಿರ್ಮಾಣಕ್ಕೆ 5 ಎಕರೆ ಭಿಕ್ಷೆ ಬೇಡ ಎಂಬ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಬಾಬಾರಾಮ್ ದೇವ್ ತಿರುಗೇಟು ನೀಡಿದ್ದಾರೆ. ನಮ್ಮ ದೇಶದಲ್ಲಿರುವ ಹಿಂದೂ ಮುಸ್ಲಿಮರ ಡಿಎನ್‌ಎ ಒಂದೇ, ಹಿಂದೂ ಮುಸ್ಲಿಮರಲ್ಲಿ ಸಂಘರ್ಷ ಉಂಟುಮಾಡುವ ಪ್ರಯತ್ನ ನಡಿಯುತ್ತಿದೆ. ಸಂಸದ ಅಸಾದುದ್ದೀನ್ ಓವೈಸಿ ತಲೆಕೆಟ್ಟ ಮನಸ್ಥಿತಿಯವರು. ಅವರ ಮನಸ್ಸಿನಲ್ಲಿ ವಿಷವೇ ತುಂಬಿದೆ.
ಆಗಿ ಹೋಗಿರುವ ಸಂಘರ್ಷಗಳ ಬಗ್ಗೆ ಚಿಂತಿಸಿ ಫಲವಿಲ್ಲ. ಸೌಹಾರ್ದ ಮತ್ತು ಸಮಾನತೆಯೇ ನಮ್ಮ ಆದ್ಯತೆಯಾಗಲಿ, ಓವೈಸಿ ಎರಡನೇ ಜಿನ್ನಾ ಆಗಲು ಪ್ರಯತ್ನ ಮಾಡುತ್ತಿದ್ದಾರೆ ಆದರೆ ಈ ಕಾರ್ಯದಲ್ಲಿ ಅಸಾದುದ್ದೀನ್ ಯಶಸ್ವಿಯಾಗಲ್ಲ ಎಂದು ಉಡುಪಿಯಲ್ಲಿ ಬಾಬಾ ರಾಮ್ ದೇವ್ ಹೇಳಿದ್ದಾರೆ.
Published On - 9:59 pm, Fri, 15 November 19