ಆಂಬುಲೆನ್ಸ್ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಬಾಗಲಕೋಟೆ: ಕಬ್ಬು ಕಡಿಯುವ ಕಾರ್ಮಿಕ ಮಹಿಳೆ ಌಂಬುಲೆನ್ಸ್ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಿರುವ ಘಟನೆ ತಾಲೂಕಿನ ಚೌಡಾಪುರ ಬಳಿ ನಡೆದಿದೆ. ಮಹಾರಾಷ್ಟ್ರ ಮೂಲದ ಪತಿ ಸುಧೀರ್ ಕುಟುಂಬ ಸಮೇತ ಕಬ್ಬು ಕಡಿಯುವ ಕೆಲಸಕ್ಕಾಗಿ ಚೌಡಾಪುರ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ರೈತರ ಹೊಲದಲ್ಲಿ ಗುಡಿಸಲು ಟೆಂಟ್ ಹಾಕಿಕೊಂಡಿದ್ದರು. ಬೆಳ್ಳಂಬೆಳಗ್ಗೆಯೇ ಮನಿಷಾ ಸುಧೀರ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆಯೇ ಮನಿಷಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ. ಆಂಬುಲೆನ್ಸ್ನಲ್ಲೇ ವೈದ್ಯಕೀಯ ಸಿಬ್ಬಂದಿ ತಾಯಿ […]
ಬಾಗಲಕೋಟೆ: ಕಬ್ಬು ಕಡಿಯುವ ಕಾರ್ಮಿಕ ಮಹಿಳೆ ಌಂಬುಲೆನ್ಸ್ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಿರುವ ಘಟನೆ ತಾಲೂಕಿನ ಚೌಡಾಪುರ ಬಳಿ ನಡೆದಿದೆ.
ಮಹಾರಾಷ್ಟ್ರ ಮೂಲದ ಪತಿ ಸುಧೀರ್ ಕುಟುಂಬ ಸಮೇತ ಕಬ್ಬು ಕಡಿಯುವ ಕೆಲಸಕ್ಕಾಗಿ ಚೌಡಾಪುರ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ರೈತರ ಹೊಲದಲ್ಲಿ ಗುಡಿಸಲು ಟೆಂಟ್ ಹಾಕಿಕೊಂಡಿದ್ದರು. ಬೆಳ್ಳಂಬೆಳಗ್ಗೆಯೇ ಮನಿಷಾ ಸುಧೀರ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆಯೇ ಮನಿಷಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ. ಆಂಬುಲೆನ್ಸ್ನಲ್ಲೇ ವೈದ್ಯಕೀಯ ಸಿಬ್ಬಂದಿ ತಾಯಿ ಮತ್ತು ಶಿಶುಗಳ ಆರೈಕೆ ಮಾಡಿದ್ದು, ತಾಯಿ ಹಾಗು ಮಕ್ಕಳು ಆರೋಗ್ಯವಾಗಿದ್ದಾರೆ.