AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯೋ ಬೆಂಗಳೂರಲ್ಲಿ ಇಷ್ಟೊಂದು ಗುಂಡಿಗಳಾ! ಜನ ಓಡಾಡೋದಾದ್ರೂ ಹೇಗೆ ಎಂದ ಯುರೋಪ್‌ ದಂಪತಿ

ಬೆಂಗಳೂರಿನ ಕಳಪೆ ರಸ್ತೆಗಳು, ಗುಂಡಿಗಳು ಮತ್ತು ದಟ್ಟಣೆಯು ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಯೂರೋಪ್‌ನಿಂದ ಹಿಂದಿರುಗಿದ ಎನ್‌ಆರ್‌ಐ ದಂಪತಿ ವೈಟ್‌ಫೀಲ್ಡ್‌ನಲ್ಲಿನ ರಸ್ತೆಗಳ ದುಸ್ಥಿತಿ ಕಂಡು ನಿರಾಶೆ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಸುಧಾರಣೆ ಭರವಸೆ ನೀಡಿದ್ದರೂ, ಯಾವುದೇ ಕೆಲಸ ಆರಂಭವಾಗಿಲ್ಲ, ಇದು ಬೆಂಗಳೂರಿನ ಮೂಲಸೌಕರ್ಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.

ಅಯ್ಯೋ ಬೆಂಗಳೂರಲ್ಲಿ ಇಷ್ಟೊಂದು ಗುಂಡಿಗಳಾ! ಜನ ಓಡಾಡೋದಾದ್ರೂ ಹೇಗೆ ಎಂದ ಯುರೋಪ್‌ ದಂಪತಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Dec 15, 2025 | 12:51 PM

Share

ಬೆಂಗಳೂರು, ಡಿ.15: ಬೆಂಗಳೂರಿನಲ್ಲಿ ರಸ್ತೆ (Bangalore road) ಸಮಸ್ಯೆಗಳ ಬಗ್ಗೆ ಉದ್ಯಮಿಗಳು, ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು, ವಿದೇಶಿಗರು ಕೂಡ ಪೋಸ್ಟ್​​ ಮಾಡಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಆದ್ರೂ ಇನ್ನು ಕೂಡ ಬೆಂಗಳೂರು ರಸ್ತೆ ಸುಧಾರಿಸಿಲ್ಲ. ಈ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿಗಳನ್ನು ಮಾಡುತ್ತೇವೆ. ವೈಟ್ ಟ್ಯಾಪಿಂಗ್ ಕಾಮಗಾರಿಗಳು ಜೂನ್ 2026ರೊಳಗೆ ಮುಕ್ತಾಯಗೊಳ್ಳಲಿದ್ದು, ನಗರದ ಮುಖ್ಯ ರಸ್ತೆಗಳು ಸುಧಾರಣೆಗೊಳ್ಳಲಿವೆ ಎಂದೆಲ್ಲ ಹೇಳಿದರು. ಆದರೆ ಇನ್ನು ಯಾವುದೇ ಕೆಲಸ ಆರಂಭವಾಗಿರುವಂತೆ ಕಾಣುತ್ತಿಲ್ಲ. ಇದೀಗ ಬೆಂಗಳೂರಿನ ರಸ್ತೆಯ ಬಗ್ಗೆ ಯೂರೋಪನಲ್ಲಿದ್ದ ಭಾರತೀಯ ಮೂಲದ ದಂಪತಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ವೊಂದು ಹಂಚಿಕೊಂಡಿದ್ದಾರೆ. ಯುರೋಪಿಯನ್ ರಾಜಧಾನಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ ದಂಪತಿಗಳು ಭಾರತಕ್ಕೆ ಬಂದಿದ್ದಾರೆ, ಹೊಸ ಜೀವನ ಕಟ್ಟಿಕೊಳ್ಳಲು ಕರ್ನಾಟಕ  ರಾಜಧಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಬೆಂಗಳೂರಿನ ರಸ್ತೆಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.

ನಮಗೆ ಬೆಂಗಳೂರಿನ ರಸ್ತೆಯ ಬಗ್ಗೆ ತುಂಬಾ ನಿರಾಸೆ ಉಂಟು ಮಾಡಿದೆ ಎಂದು ಪೋಸ್ಟ್​​ಗೆ ಶೀರ್ಷಿಕೆಯೊಂದನ್ನು ನೀಡಿದ್ದಾರೆ. 30 ದಶಕದ ನಂತರ ಈ ದಂಪತಿ ಭಾರತಕ್ಕೆ ಬಂದಿದ್ದಾರೆ. ಮುಂಬರುವ ವರ್ಷಗಳಲ್ಲಿ ತಮ್ಮ ಕುಟುಂಬದ ಜತೆ ಬೆಂಗಳೂರಿನಲ್ಲಿ ಜೀವನ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಭಾರತದ ಇತರ ಸಿಟಿಗಳಿಂತ ಬೆಂಗಳೂರು ಉತ್ತಮ ಎಂದುಕೊಂಡಿದ್ದರು, ಆದರೆ ಇದೀಗ ಇಲ್ಲಿನ ರಸ್ತೆಗಳನ್ನು ನೋಡಿ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್​​​​ನಲ್ಲಿ ತಂಗಿದ್ದ ದಂಪತಿಗಳು, ಅಲ್ಲಿನ ಕೆಲವು ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ಹೊರ ವರ್ತುಲ ರಸ್ತೆಯ ಉದ್ದಕ್ಕೂ ಐಟಿ ಕಂಪನಿಗಳು ಇರುವ ಕಾರಣ, ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದು ದಾಖಲೆಗಳಲ್ಲಿ ಮಾತ್ರ ಸರಿಯಾಗಿದೆ. ನೇರವಾಗಿ ನೋಡಿದಾಗ, ತುಂಬಾ ಕೆಟ್ಟ ಅನುಭವವನ್ನು ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗಿಂತ ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ ಕಳಪೆ

ಈ ಪ್ರದೇಶವು ವಾರಾಂತ್ಯಗಳಲ್ಲಿಯೂ ಸಹ ತುಂಬಾ ಜನನಿಬಿಡ ಮತ್ತು ಗದ್ದಲದಿಂದ ಕೂಡಿರುತ್ತದೆ. ನಿರಂತರ ಸಂಚಾರ ಇರುತ್ತದೆ. ಇಲ್ಲಿ ಯಾವುದೇ ಗಲಾಟೆ ಇಲ್ಲದೆ, ಶಾಂತಿಯೂತವಾಗಿ ಬದುಕಲು ಸಾಧ್ಯವಿಲ್ಲ. ಇನ್ನು ಅಲ್ಲಿನ ಇತರ ಪ್ರದೇಶದಲ್ಲಿ ಮನೆ ನೋಡಿದ್ರೆ,  ರಸ್ತೆಗಳು ಗುಂಡಿ ಬಿದ್ದಿದೆ. ಆ ರಸ್ತೆಯಲ್ಲಿ ನಾವು ಸುಮಾರು 3-4 ಬಾರಿ ಎಡವಿ ಬಿದ್ದಿದ್ದೇವೆ. ತುಂಬಾ ಎಚ್ಚರಿಕೆಯಿಂದ ನಡೆಯಬೇಕಾದ ಪರಿಸ್ಥಿತಿ ಇದೆ. ಅದರೂ ಬೇರೆ ಬೇರೆ ಕಡೆ ಮನೆಗಳನ್ನು ಹುಡುಕಿದ್ದೇವೆ. ಆದರೆ ಅಲ್ಲಿ ಕೂಡ ಕೆಲವೊಂದು ಸಮಸ್ಯೆಗಳು ಕಂಡು ಬಂದಿದೆ. ಕೆಲವೊಂದು ಕಡೆ ಕಾರ್​​​ ಪಾರ್ಕಿಂಗ್​ ಇಲ್ಲ. ಮೆಟ್ರೋ ಸಂಪರ್ಕ ಕೂಡ ತುಂಬಾ ದೂರು ಇದೆ. ಪ್ರಮುಖ ನ್ಯೂನತೆಗಳು ಇಲ್ಲಿದೆ.  ಇನ್ನು ಈ ಪ್ರದೇಶದಲ್ಲಿ ರಸ್ತೆಯಲ್ಲಿ ಪ್ರಯಾಣಿಸುವ ಎಂದರೆ 1 ಗಂಟೆಗಿಂತ ಹೆಚ್ಚಿನ ಸಮಯ ಬೇಕು ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​ :

Shocked on our exploratory trip to Bangalore – how to adjust for RTI? byu/devilman123 inreturnToIndia

ಮಾರತ್ತಹಳ್ಳಿಗೆ ಬಳಿ ವಾಸಿಸಲು ಸ್ವಲ್ಪ ಯೋಗ್ಯವಾದ ಪ್ರದೇಶಗಳು ಇತ್ತು. ಆದರೆ ಅಲ್ಲಿ ಸಮಸ್ಯೆ ಬಂದದ್ದು, ಮನೆಯ ಬಾಡಿಗೆ. ಕೊಳೆಗೇರಿಗಳ ಬಳಿ ವಾಸಿಸಲು 4 ಕೋಟಿ ರೂ. ಪಾವತಿಸಬೇಕು ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್​​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೆಲವೊಂದು ಸಲಹೆಗಳನ್ನು ಈ ದಂಪತಿ ನೀಡಿದ್ದಾರೆ. ಇದರಲ್ಲಿ ಒಬ್ಬರು ಬೆಂಗಳೂರಿನ ಇತರ ಪ್ರದೇಶದಲ್ಲಿ ಹುಡುಕಿ ಎಂದು ಸಲಹೆ ನೀಡಿದ್ದಾರೆ. ನೀವು ಭಾರತಕ್ಕೆ ಬಂದಾಗ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ನಿಮಗೆ ನೇರ ಅನುಭವ ಸಿಕ್ಕಿರುವುದು ಒಳ್ಳೆಯದು. ಅಲ್ಲದೆ, ನೀವೇ ವಾಹನ ಚಾಲನೆ ಮಾಡುವ ಅನುಭವವನ್ನು ಪಡೆದಿರಬಹದು. ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಾಗ ಯಾವಾಗಲೂ ವಿನಿಮಯ ಇರುತ್ತದೆ. ಇದರಿಂದ ನೀವು ಏನನ್ನಾದರೂ ಗಳಿಸುತ್ತೀರಿ ಮತ್ತು ಏನನ್ನಾದರೂ ಕಳೆದುಕೊಳ್ಳುತ್ತೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ