‘ಶಿವಕುಮಾರ್ ಭ್ರಷ್ಟಾಚಾರದಿಂದ ಸರ್ಕಾರ ಪತನಕ್ಕೆ 14ತಿಂಗಳ ಹಿಂದೆಯೇ ಪ್ಲಾನ್’
ಬೆಳಗಾವಿ: ಮೇ 15 ರಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ರೂಪಿಸಿದ್ದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಕುರಿತು ಸ್ಫೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸೈಡ್ ಲೈನ್ ಆಗಿದ್ರು: ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತ ರಮೇಶ್ ಜಾರಕಿಹೊಳಿ, 14 ತಿಂಗಳ ಹಿಂದೆಯೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ಮಾಡಲಾಗಿತ್ತು, ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ನವರು ಸೈಡ್ ಲೈನ್ ಆಗಿದ್ರು. ಡಿ.ಕೆ.ಶಿವಕುಮಾರ್ […]
ಬೆಳಗಾವಿ: ಮೇ 15 ರಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ರೂಪಿಸಿದ್ದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಕುರಿತು ಸ್ಫೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಸೈಡ್ ಲೈನ್ ಆಗಿದ್ರು: ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತ ರಮೇಶ್ ಜಾರಕಿಹೊಳಿ, 14 ತಿಂಗಳ ಹಿಂದೆಯೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ಮಾಡಲಾಗಿತ್ತು, ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ನವರು ಸೈಡ್ ಲೈನ್ ಆಗಿದ್ರು. ಡಿ.ಕೆ.ಶಿವಕುಮಾರ್ ಅವರ ಕೈಯಲ್ಲಿ ಕಾಂಗ್ರೆಸ್ ಕೈಗೊಂಬೆಯಂತಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದಿಂದ ನಾವು ಬೇಸತ್ತು ಹೋಗಿದ್ದೆವು. ಹೀಗಾಗಿ ಮೇ 15 ರಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ಲಾನ್ ರೂಪಿಸಿದ್ದಿವಿ.
ಪ್ರಮಾಣ ವಚನ ಸ್ವೀಕಾರ ದಿನವೇ ಸಮ್ಮಿಶ್ರ ಸರ್ಕಾರಕ್ಕೆ ಮುಹೂರ್ತ: ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನವೇ ಪ್ಲಾನ್ ಮಾಡಿದ್ದೆ. ಈ ಕಾರಣಕ್ಕಾಗಿ ಯಡಿಯೂರಪ್ಪ ಮತ್ತು ಅಮಿತ್ ಶಾ ಅವರ ಭೇಟಿ ಮಾಡಿ ಯಡಿಯೂರಪ್ಪ ಅವರನ್ನ ಸಿಎಂ ಮಾಡಿದ್ರೆ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಮನವೊಲಿಸಿದ್ದೆವು. ಏಳೆಂಟು ಬಾರಿ ವಿಫಲವಾದ್ರೂ ಕೊನೆಗೂ ಸರ್ಕಾರ ಪತನಗೊಳಿಸಿದ್ದೇವೆ ಎಂದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಸಂಗತಿಗಳನ್ನು ಅವರು ಹೊರಹಾಕಿದ್ದಾರೆ.
Published On - 4:50 pm, Fri, 15 November 19