AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಯರ ಮೊಬೈಲ್​ ನಂಬರ್​​ ಕೇಳಿದ್ದಕ್ಕೆ ಫೈಟ್​​: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪಬ್​​ ಗಲಾಟೆ

ಹುಡುಗಿಯರ ಬಳಿ ಮೊಬೈಲ್​ ನಂಬರ್​​ ಕೇಳಿದ ವಿಚಾರಕ್ಕೆ ಶುರುವಾದ ಕಿರಿಕ್​​ ಫೈಟ್​​ ಹಂತಕ್ಕೆ ಹೋಗಿರುವ ಘಟನೆ ಬೆಂಗಳೂರಿನ ನಾಗರಭಾವಿ ರಸ್ತೆಯಲ್ಲಿರುವ ಪಬ್ನಲ್ಲಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ದೊಡ್ಡ ಗಲಾಟೆ ಹಂತಕ್ಕೆ ಹೋಗಿದ್ದ ಸಂದರ್ಭ ಪಬ್​​ ಸಿಬ್ಬಂದಿ ಮತ್ತು ಪೊಲೀಸರು ಎಲ್ಲವನ್ನು ತಿಳಿಗೊಳಿಸುವ ಯತ್ನ ಮಾಡಿದ್ದಾರೆ. ಬಳಿಕ ಘಟನೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದು, ದೂರು-ಪ್ರತಿದೂರುಗಳು ದಾಖಲಾಗಿವೆ.

ಹುಡುಗಿಯರ ಮೊಬೈಲ್​ ನಂಬರ್​​ ಕೇಳಿದ್ದಕ್ಕೆ ಫೈಟ್​​: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪಬ್​​ ಗಲಾಟೆ
ಪಬ್​​ ಬಳಿ ಗಲಾಟೆ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Dec 18, 2025 | 7:13 PM

Share

ಬೆಂಗಳೂರು, ಡಿಸೆಂಬರ್​​ 18: ಹುಡುಗಿಯರ ಮೊಬೈಲ್​​ ನಂಬರ್​ ಕೇಳಿದ ಆರೋಪ ವಿಚಾರವಾಗಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಪಬ್​​ನಲ್ಲಿ ನಡೆದ ಗಲಾಟೆ ಪೊಲೀಸ್​​ ಠಾಣೆ ಮೆಟ್ಟಿಲೆರಿದ್ದು, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ನಾಗರಬಾವಿ ರಸ್ತೆಯಲ್ಲಿರುವ ಪಬ್​ನಲ್ಲಿ ನಡೆದ ಘಟನೆ ಸಂಬಂಧ ಎರಡೂ ಕಡೆಯವರ ದೂರು ಪಡೆದಿರುವ ಪೊಲೀಸರು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಘಟನೆ ಏನು?

ಪಬ್​​ನಲ್ಲಿ ಹೇಮಂತ್ ಜೊತೆಗಿದ್ದ ಯುವತಿಯರ ಫೋನ್ ನಂಬರ್ ಅನ್ನು ಉಮೇಶ್​​ ಎಂಬವರು ಕೇಳಿದ್ದಾರೆ. ಈ ವೇಳೆ ಯುವತಿಯರು ಮೊಬೈಲ್​​ ನಂಬರ್​​ ನೀಡಲು ನಿರಾಕರಿಸಿರುವ ಕಾರಣಕ್ಕೆ ಅವರ ಜೊತೆಗೆ ಉಮೇಶ್​​ ಅಸಭ್ಯವರ್ತನೆ ತೋರಿದ್ದಾರೆ. ಘಟನೆ ಬಗ್ಗೆ ಪಬ್​​ ಸಿಬ್ಬಂದಿಗೆ ಹೇಮಂತ್​​ ದೂರು ನೀಡಿದ್ದು, ಆ ಬಳಿಕ ಉಮೆಶ್​​ ಟೇಬಲ್​​ನ ಪಬ್​​ನವರು ಬೇರೆಡೆಗೆ ಶಿಫ್ಟ್​​ ಮಾಡುವ ಮೂಲಕ ಪರಿಸ್ಥಿತಿ ಶಾಂತಗೊಳಿಸಿದ್ದರು. ಆದ್ರೆ ಪಾರ್ಟಿ ಮುಗಿಸಿ ಪಬ್​​ನಿಂದ ಹೊರಬರುವಾಗ ಉಮೆಶ್​ ಮತ್ತೆ ಹೇಮಂತ್​​​ಗೆ ಬೈದಿದ್ದು ರಾದ್ಧಾಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​; ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್​​

ಉಮೇಶ್​​ ಮಾತಿನಿಂದ ಹೇಮಂತ್​​ ಕೂಡ ಸಿಟ್ಟಾಗಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿದೆ. ಆಕ್ರೋಶಭರಿತರಾಗಿದ್ದ ಹೇಮಂತ್​​ ಉಮೇಶ್​​ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಪಬ್ ಬಳಿಗೆ ಕೆಲ ಹುಡುಗರನ್ನು ಕರೆಸಿ ಮತ್ತೆ ಅಟ್ಯಾಕ್​​ಗೆ ಮುಂದಾಗಿದ್ದಾರೆ. ಈ ವೇಳೆ ದೊಡ್ಡ ಗಲಾಟೆ ನಡೆಯದಂತೆ ಪಬ್ ಸಿಬ್ಬಂದಿ ಮತ್ತು ಸ್ಥಳಕ್ಕೆ ಬಂದ ಜ್ಞಾನಭಾರತಿ ಪೊಲೀಸರು ತಡೆದಿದ್ದಾರೆ. ಬಳಿಕ ಹೇಮಂತ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಉಮೇಶ್ ದೂರು ನೀಡಿದ್ದರೆ, ಅಸಭ್ಯ ವರ್ತನೆ ಆರೋಪದಡಿ ಉಮೇಶ್ ವಿರುದ್ಧ ಹೇಮಂತ್​​ ಜೊತೆಗಿದ್ದ ಯುವತಿಯರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಇಬ್ಬರ ದೂರಿನ ಅನ್ವಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ