ಬೆಳಗಾವಿ, ಜೂನ್ 20: ಬೆಳಗಾವಿ ಹಾಗೂ ಬಾಗಲಕೋಟೆಗೆ ವರದಾನವಾಗಬೇಕಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಾಗಾರಿಯನ್ನು ಈಗಿನ ನೀರಾವರಿ ಸಚಿವರು ಕ್ಯಾನ್ಸಲ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರು ಈವರೆಗೂ ಯೋಜನೆ ಕ್ಯಾನ್ಸಲ್ ಮಾಡಿಲ್ಲ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ವಾಗ್ದಾಳಿ ಮಾಡಿದ್ದಾರೆ. ಗೋಕಾಕ್ನಲ್ಲಿ ನಡೆದ ಜಗದೀಶ್ ಶೆಟ್ಟರ್ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಅವನು ಕ್ಯಾನ್ಸಲ್ ಮಾಡಿದ್ದರೆ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಹಾಗೂ ನಾನು ದೆಹಲಿಗೆ ಹೋಗಿ ಕೇಂದ್ರ ಅರಣ್ಯ ಸಚಿವರಿಗೆ ಭೇಟಿ ಆಗುತ್ತೇವೆ. ಅವರನ್ನು ಭೇಟಿ ಮಾಡಿ ಮಾತನಾಡಿ ಪರವಾನಗಿ ಪಡೆದುಕೊಂಡು ಬರುತ್ತೇವೆ. ಮಹಾನಾಯಕನ ಕಣ್ಣು ಗಟ್ಟಿ ಬಸವಣ್ಣ ಯೋಜನೆಯ ಮೇಲಿದೆ. ನಾನು ಸತೀಶ್ ಜಾರಕಿಹೊಳಿಯವರನ್ನೂ ಈ ಕುರಿತು ಕೇಳಿದೆ. ಆದರೆ ಸತೀಶ್ ಜಾರಕಿಹೊಳಿ ಹೆಗಲ ಮೇಲೆ ಬಂದುಕು ಇಡುವ ಹುನ್ನಾರ ಡಿಕೆ ಶಿವಕುಮಾರ್ ಮಾಡಿದ್ದರು ಎಂದಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಸತೀಶ್ ಕ್ಯಾನ್ಸಲ್ ಮಾಡಿದ್ದಾರೆ ಅಂತ ಬಿಂಬಿಸಲು ಡಿಕೆ ಶಿವಕುಮಾರ್ ತಯಾರಾಗಿದ್ದರು. ನಾನು ಸತೀಶ್ಗೆ ಕೇಳಿದಾಗ ನಾನು ಏನು ಹೇಳಿಲ್ಲ ಅಂದರು. ಈ ಯೋಜನೆ ಕಾಮಗಾರಿ ಮುಗಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದರು.
ಮತ್ತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ಮಾಡಿದ್ದು, ಕಳೆದ ವಿಧಾನಸಭೆಯಲ್ಲಿ ನನಗೆ ಹಿನ್ನಡೆಯಾಗಿತ್ತು. ಕಳೆದ ಒಂದು ವರ್ಷದಿಂದ ನಾನು ಅಸಹಾಯಕನಾಗಿದ್ದೆ. ಅದನ್ನ ಮನಗಂಡು ನಮ್ಮ ಕಾರ್ಯಕರ್ತರು ಈ ಚುನಾವಣೆಯಲ್ಲಿ ಕೆಲಸ ಮಾಡಿದರು.
ಮಹಾನಾಯಕ, ವಿಷಕನ್ಯೆ ಸೊಕ್ಕಿನ ರಾಜಕಾರಣದ ದರ್ಪ ಜೋರಾಗಿತ್ತು. ಸಿದ್ದರಾಮಯ್ಯ ಬಗ್ಗೆ ನಾನು ಏನು ಮಾತನಾಡೋಲ್ಲ. ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ. ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದೆ. ಪದೇ ಪದೇ ಸೋತರೆ ನಮಗೆ ತಡೆದುಕೊಳ್ಳಲು ಆಗುವುದಿಲ್ಲ. ಪದೇ ಪದೇ ಸೋತರೆ ನಾವು ಲೀಡರ್ಸ್ ಅಲ್ಲ ನಾಲಾಯಕ್. ಆ ಉದ್ದೆಶದಿಂದ ಎಲ್ಲ ಒರೆಗೆ ಹಚ್ಚಿ ಚುನಾವಣೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಬಿಜೆಪಿಯಿಂದ ಪಕ್ಷಕ್ಕೆ ಬಂದವರಿಂದ ಕೊನೆಯ ವರೆಗೂ ಸಮಸ್ಯೆ: ಸವದಿ ವಿರುದ್ಧ ಸತೀಶ್ ಜಾರಕಿಹೊಳಿ ಬಹಿರಂಗ ಅಸಮಾಧಾನ
ಬಿಜೆಪಿ ಕಾರ್ಯಕರ್ತರು ದುಡ್ಡು ನೋಡಲಿಲ್ಲ, ಒಂದು ಕಪ್ ಚಹಾ ನೋಡಲಿಲ್ಲ. ತಾವೇ ಬೈಕ್ ಏರಿ ಮೂಲೇ ಮೂಲೇ ಓಡಾಡಿ ಪ್ರಚಾರ ಮಾಡಿದ್ದರು. ಅವರು (ಲಕ್ಷ್ಮಿ ಹೆಬ್ಬಾಳ್ಕರ್) ದುಡ್ಡು ತೂರಾಡಿದರು. ಆದರೆ ನಮ್ಮ ಕಡೆಗೆ ದುಡ್ಡು ಇರಲಿಲ್ಲ. ಕಾಂಗ್ರೆಸ್ನವರು ಜೀಪು, ಹೂವು ಅವರೇ ಕೊಟ್ಟು ಕಳಿಸ್ತಿದ್ರು. ನಂತರ ಅವರೇ ಹೂವು ಹಾಕಿಸಿಕೊಳ್ತಿದ್ರು. ಮತ ಹಾಕಿ ಬಂದು ಸಂಜೆ ನಾನು ಅಮೆರಿಕಾಗೆ ಹೋಗಿಬಿಟ್ಟೆ. ಮೂರನೇ ತಾರೀಖು ಸಂಜೆ ನಾನು ವಾಪಸ್ ಬಂದೆ. ಇದನ್ನೆಲ್ಲ ನೋಡಿ ಬಿಪಿ ಶುಗರ್ ಹೆಚ್ಚಾದರೆ ಎನ್ ಮಾಡೋದು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.