ರಾಮೋತ್ಸವ ರಾಜಕೀಯೇತರ, ಅದ್ದೂರಿ ಮತ್ತು ಇತಿಹಾಸದಲ್ಲಿ ದಾಖಲಾಗಬಹುದಾದ ಕಾರ್ಯಕ್ರಮವಾಗಲಿದೆ: ಇಕ್ಬಾಲ್ ಹುಸೇನ್

ರಾಮನಗರ ರಾಮನ ಪಾದಸ್ಪರ್ಶವಾಗಿರುವ ನೆಲವಾಗಿರುವುದರಿಂದ ಇಲ್ಲಿ ಒಂದು ಭವ್ಯ ಮತ್ತು ಅದ್ಭುತವಾದ ರಾಮಮಂದಿರ ನಿರ್ಮಿಸಲು ತಮ್ಮ ನಾಯಕರಾದ ಡಿಕೆ ಸುರೇಶ್ ಯೋಜನೆ ರೂಪಿಸುತ್ತಿದ್ದಾರೆ, ಅವರು ಮತ್ತು ತಾನು ಪ್ರವಾಸೋದ್ಯಮ ಸಚಿವರೊಂದಿಗೆ ವಿಷಯ ಚರ್ಚಿಸಿದ್ದು, ಬಜೆಟ್ ನಲ್ಲಿ ಅದಕ್ಕಾಗಿ ಅನುದಾನ ತೆಗೆದಿರಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಭರವಸೆ ಅವರು ನೀಡಿದ್ದಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ರಾಮನಗರ: ಕಳೆದ ಕೆಲವು ದಿನಗಳಿಂದ ರಾಮನಗರದಲ್ಲಿ (Ramanagara) ಅದ್ದೂರಿಯಾಗಿ, ವಿಜೃಂಭಣೆಯಿಂದ ಮತ್ತು ಭಾರೀ ಪ್ರಮಾಣದಲ್ಲಿ ರಾಮೋತ್ಸವ (Ramotsava) ಮಾಡಬೇಕೆಂಬ ಮಾತು ಕಾಂಗ್ರೆಸ್ ನಾಯಕರ ಬಾಯಲ್ಲಿ ಬರುತ್ತಿದೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ರಾಮನಗರದಲ್ಲಿ ರಾಮೋತ್ಸವ ಆಯೋಜಿಸುವುದು ನಿಶ್ಚಿತ, ಇದು ಸಾಮಾನ್ಯಮಟ್ಟದ ಕಾರ್ಯಕ್ರಮವಲ್ಲ, ಇತಿಹಾಸದ ಪುಟಗಳಲ್ಲಿ ದಾಖಲಾಗಬಹುದಾದ ಉತ್ಸವ ಆಗಲಿದೆ ಎಂದು ಹೇಳಿದರು. ರಾಮೋತ್ಸವ ಯಾವ ಕಾರಣಕ್ಕೂ ಒಂದು ರಾಜಕೀಯ ಕಾರ್ಯಕ್ರಮವಲ್ಲ, ಇದರ ಅಯೋಜನೆಯಲ್ಲಿ ಎಲ್ಲ ಧರ್ಮ ಮತ್ತು ಎಲ್ಲ ವರ್ಗಗಳ ಜನ ಭಾಗಿಯಾಗಲಿದ್ದಾರೆ, ಉತ್ಸವಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರೆಲ್ಲರ ಜೊತೆ ಚರ್ಚೆ, ವಿಚಾರ ವಿನಿಮಯ ನಡೆಯುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು. ರಾಮನಗರ ರಾಮನ ಪಾದಸ್ಪರ್ಶವಾಗಿರುವ ನೆಲವಾಗಿರುವುದರಿಂದ ಇಲ್ಲಿ ಒಂದು ಭವ್ಯ ಮತ್ತು ಅದ್ಭುತವಾದ ರಾಮಮಂದಿರ ನಿರ್ಮಿಸಲು ತಮ್ಮ ನಾಯಕರಾದ ಡಿಕೆ ಸುರೇಶ್ ಯೋಜನೆ ರೂಪಿಸುತ್ತಿದ್ದಾರೆ, ಅವರು ಮತ್ತು ತಾನು ಪ್ರವಾಸೋದ್ಯಮ ಸಚಿವರೊಂದಿಗೆ ವಿಷಯ ಚರ್ಚಿಸಿದ್ದು, ಬಜೆಟ್ ನಲ್ಲಿ ಅದಕ್ಕಾಗಿ ಅನುದಾನ ತೆಗೆದಿರಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಭರವಸೆ ಅವರು ನೀಡಿದ್ದಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

 

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us