ಅತ್ಯಾಚಾರ ಪ್ರಕರಣ: ನನ್ನ ವಿರುದ್ಧ ದೂರು ಕೊಟ್ಟವರು ಯಾರು, SITಗೆ ಪ್ರಜ್ವಲ್ ಮರು ಪ್ರಶ್ನೆ
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಅತ್ಯಾಚಾರ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು, ಜೂ.01: ಅತ್ಯಾಚಾರ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೆ, ಎಸ್ಐಟಿ (SIT) ಅಧಿಕಾರಿಗಳಿಗೆ ಮರು ಪ್ರಶ್ನೆ ಹಾಕುತಿದ್ದಾರೆ. ನನ್ನ ವಿರುದ್ಧ ದೂರು ಕೊಟ್ಟ ಮಹಿಳೆ ಯಾರು ಅನ್ನೊದೆ ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ ಎನ್ನುವುದೂ ನನಗೆ ಗೊತ್ತಿಲ್ಲ. ತೋಟದ ಮನೆ, ಊರು, ಬೆಂಗಳೂರಿನಲ್ಲಿ ಕೆಲಸದವರಿದ್ದಾರೆ. ಈ ವೇಳೆ ಮನೆಯಲ್ಲಿರುವ ಕೆಲಸದವರು ಯಾರು ಅನ್ನೊದು ಗೊತ್ತಿಲ್ಲ. ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದು ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡಿದರು.
ಎಸ್ಐಟಿ: ಸಂತ್ರಸ್ತೆಯ ಫೋಟೊ ಮುಂದಿಟ್ಟು ಇವರು ಯಾರು ಗೊತ್ತಾ?
ಪ್ರಜ್ವಲ್ ರೇವಣ್ಣ: ಈಕೆ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಇವರನ್ನು ನಾನು ನೋಡಿಯೇ ಇಲ್ಲ. ನಾನು ಬೆಂಗಳೂರು, ಹಾಸನ, ದೆಹಲಿಯಲ್ಲಿರುತ್ತೇನೆ. ನನಗೆ ಇವರು ಯಾರು ಅನ್ನೊದು ಗೊತ್ತಿಲ್ಲ. ಇವರು ನನ್ನ ಬಗ್ಗೆ ಏನೆಂದು ದೂರು ಕೊಟ್ಟಿದ್ದಾರೆ ಎಂದು ಮರು ಪ್ರಶ್ನಿಸಿದರು.
ಎಸ್ಐಟಿ: ಸಂತ್ರಸ್ತೆ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿದ ಅಧಿಕಾರಿಗಳು
ಪ್ರಜ್ವಲ್: ಹೌದಾ, ಅವರಿಗೆ ಹಾಗೆ ಆಗಿದೆಯಂತಾ. ಈ ವಿಚಾರಗಳು ನನಗೇನು ಗೊತ್ತಿಲ್ಲ. ಅವರಿಗೆಲ್ಲ ನಾನು ಯಾಕೆ ಹಾಗೆ ಮಾಡಲು ಹೊಗಲಿ. ನನಗೆ ಅವರು ಯಾರು ಎನ್ನುವುದೇ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ನಡೆದಿದೆ ಅಂತಾರೆ. ನನಗೆ ಅವರು ಯಾರು ಅನ್ನೊದು ಗೊತ್ತಿಲ್ಲ. ಯಾಕೆ ಆಗ ಅವರು ದೂರು ಕೊಟ್ಟಿರಲಿಲ್ಲ. ದೂರು ಕೊಡದೇ ಇಲ್ಲಿವರೆಗೂ ಏನು ಮಾಡುತಿದ್ದರಂತೆ. ನಾನು ಯಾರ ಜೊತೆಯೂ ಮಾತನಾಡಲ್ಲ. ಇವರು ಯಾರೆಂಬುದೇ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ನಾಪತ್ತೆಯಾಗಿರುವ ಭವಾನಿ ರೇವಣ್ಣ ಹಾಗೂ ಕಾರು ಚಾಲಕನಿಗಾಗಿ ಎಸ್ಐಟಿ ಹುಡುಕಾಟ
ಇದೆಲ್ಲದರ ಹಿಂದೆ ಕಾರ್ತಿಕನ ಕೆಲಸವಿದೆ. ಅವನನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿ. ಆಗ ಇದಕ್ಕೆಲ್ಲ ಸರಿಯಾದ ಉತ್ತರ ಸಿಗತ್ತೆ. ಎಷ್ಟು ದುಡ್ಡು ಕೊಟ್ಟು ಇವರನ್ನು ಕರೆತಂದಿದ್ದಾನೆ ಅಂತ. ಆಗ ಎಲ್ಲ ಉತ್ತರ ನಿಮಗೆ ಸಿಗತ್ತೆ ಎಂದು ಪ್ರಜ್ವಲ್ ಹೇಳಿದರು.
ಪ್ರಜ್ವಲ್ ಮೊಬೈಲ್ ಬಗ್ಗೆ ಪ್ರಶ್ನೆ ಕೇಳಿದ ಎಸ್ಐಟಿ
ನಾನು ಬಳಸುವ ಮೊಬೈಲ್ ನನ್ನ ಬಳಿ ಇತ್ತು. ಅದು ಈಗ ನಿಮ್ಮ ಬಳಿ ಇದೆ. ಅದನ್ನು ಬಿಟ್ಟು ಬೇರೆ ಮೊಬೈಲ್ ಸಹ ಇಲ್ಲ. ಈ ವೇಳೆ ಮೊಬೈಲ್ ಸಂಖ್ಯೆ ಆಧರಿಸಿ ಆ ಫೋನ್ ಎಲ್ಲಿದೆ ಎಂದ ಎಸ್ಐಟಿ. ನನಗೆ ಗೊತ್ತಿಲ್ಲ ಬಹುಶಃ ಅದು ಕಳೆದು ಹೊಗಿರಬೇಕು. ಆ ಮೊಬೈಲ್ ನಾನು ಬಳಸುತ್ತಲೇ ಇರಲಿಲ್ಲ. ನನ್ನ ಮೊಬೈಲ್ಗಳು ಪಿಎ ಬಳಿ ಇರುತ್ತವೆ. ಅವರೇನೊ ಕಳೆದು ಹೊಗಿದೆ ಎನ್ನುತಿದ್ದರು. ಕಳೆದ ವರ್ಷ ಅದರ ಬಗ್ಗೆ ದೂರು ಸಹ ದಾಖಲಾಗಿರಬೇಕು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:40 am, Sat, 1 June 24