ಬಗೆದಷ್ಟು ಬಯಲಾಗುತ್ತಿದೆ ಆರ್​ಡಿ ಪಾಟೀಲ್ ಅಕ್ರಮ; ಕೆಇಎ ಪರೀಕ್ಷೆಯ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?

| Updated By: ಆಯೇಷಾ ಬಾನು

Updated on: Nov 14, 2023 | 11:52 AM

ಆಪ್ತರ ಮೂಲಕ ಅಕ್ರಮ ಮಾಡಿದ್ದ ಆರೋಪಿ ಆರ್.ಡಿ.ಪಾಟೀಲ್, ಅಕ್ರಮಕ್ಕಾಗಿ ಟೀಂ ರಚನೆ ಮಾಡಿದ್ದ. R.D.ಪಾಟೀಲ್ ಆಪ್ತರಾದ ಸಾಗರ್, ಶಶಿಕುಮಾರ್ ಮೂಲಕ ಡೀಲ್ ಮಾಡುತ್ತಿದ್ದ. R.D.ಪಾಟೀಲ್ ಆಪ್ತ ಸಾಗರ್, ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡ್ತಿದ್ದ. ಲಿಸ್ಟ್​ ಪ್ರಕಾರ ಬ್ಲೂಟೂತ್ ಸಪ್ಲೈ ಮಾಡುತ್ತಿದ್ದ. ಜಾಮರ್‌ನಿಂದ ಮೊಬೈಲ್ ಕೈಕೊಟ್ಟರೆ ವಾಕಿಟಾಕಿಯಿಂದ ಉತ್ತರ ರವಾನಿಸಲು ಅತ್ಯಂತ ಚಿಕ್ಕ ಮಾಡೇಲ್‌ನ ಹಲವು ವಾಕಿಟಾಕಿಗಳನ್ನ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಖರೀದಿಸಿದ್ದ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಬಗೆದಷ್ಟು ಬಯಲಾಗುತ್ತಿದೆ ಆರ್​ಡಿ ಪಾಟೀಲ್ ಅಕ್ರಮ; ಕೆಇಎ ಪರೀಕ್ಷೆಯ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?
ಸಾಗರ್, R.D.ಪಾಟೀಲ್
Follow us on

ಕಲಬುರಗಿ, ನ.14: ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ (PSI Exam Scam) ಹಲವು ಮಾರ್ಗಗಳ ಮೂಲಕ ಅಕ್ರಮ ಎಸಗಿ ಸಾವಿರಾರು ಅಭ್ಯರ್ಥಿಗಳ ಉದ್ಯೋಗದ ಆಸೆಗೆ ತಣ್ಣಿರು ಎರಚಿದ್ದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ಇದೀಗ ಕೆಇಎ (KEA) ನಡೆಸಿದ್ದ ಎಫ್‌ಡಿಎ ಪರೀಕ್ಷೆಯಲ್ಲಿ (FDA Exam Scam) ಸಹ ಹಲವು ರೀತಿಯ ಅಕ್ರಮ ಎಸಗಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಹೌದು, ಕೆಇಎ ಎಫ್‌ಡಿಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಮಾಯಜಾಲ ಬಗೆದಷ್ಟು ಬಯಲಾಗ್ತಾನೆ ಇದೆ. ಅಕ್ರಮ ಎಸಗಲೆಂದೇ ಆರ್​ಡಿ ಪಾಟೀಲ್ ಸೃಷ್ಟಿಸಿದ್ದ ಜಾಲ ಬೆಚ್ಚಿಬೀಳುವಂತಿದೆ.

ಆಪ್ತರ ಮೂಲಕ ಅಕ್ರಮ ಮಾಡಿದ್ದ ಆರೋಪಿ ಆರ್.ಡಿ.ಪಾಟೀಲ್, ಅಕ್ರಮಕ್ಕಾಗಿ ಟೀಂ ರಚನೆ ಮಾಡಿದ್ದ. R.D.ಪಾಟೀಲ್ ಆಪ್ತರಾದ ಸಾಗರ್, ಶಶಿಕುಮಾರ್ ಮೂಲಕ ಡೀಲ್ ಮಾಡುತ್ತಿದ್ದ. ಇಬ್ಬರಿಗೂ ನಿಖರ ಕೆಲಸ ಕೊಡ್ತಿದ್ದ. R.D.ಪಾಟೀಲ್ ಆಪ್ತ ಸಾಗರ್, ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡ್ತಿದ್ದ. ಲಿಸ್ಟ್​ ಪ್ರಕಾರ ಬ್ಲೂಟೂತ್ ಸಪ್ಲೈ ಮಾಡುತ್ತಿದ್ದ. ಶಶಿಕುಮಾರ್ ಎಂಬ ಮತ್ತೋರ್ವ ಸಾಗರ್​​ಗೆ 20 ಜನರ ಲಿಸ್ಟ್​ ಮಾಡಿ ಕೊಡುತ್ತಿದ್ದ. ಶಶಿಕುಮಾರ್ ಕೊಟ್ಟ ಲಿಸ್ಟ್ ಪ್ರಕಾರ ಬ್ಲೂಟೂತ್ ಹಂಚಲಾಗುತ್ತಿತ್ತು. ಒಬ್ಬ ಅಭ್ಯರ್ಥಿ ಜೊತೆ ಒಬ್ರಿಗೆ ಉತ್ತರ ಹೇಳಲು 10 ಸಾವಿರ ರೂಪಾಯಿ ಮತ್ತು ಒಂದು ಹೊಸ ಮೊಬೈಲ್ ಕೋಡ್ತಿದ್ರು. ಸಿದ್ರಾಮ ಎಂಬ ಮತ್ತೋರ್ವ ಆರೋಪಿ, ಸಾಗರ್, ಶಶಿ ಕೊಟ್ಟ ಲಿಸ್ಟ್ ಪ್ರಕಾರ ಮೊಬೈಲ್ ಕೊಡ್ತಿದ್ದ. ಲಿಸ್ಟ್​​ ಪ್ರಕಾರ ಹಣ ಪಡೆದು R.D.ಪಾಟೀಲ್​ಗೆ ನೀಡುತ್ತಿದ್ದ. ಸಿದ್ರಾಮ, ಆರ್.ಡಿ.ಪಾಟೀಲ್ ಅಳಿಯ. ಯಾದಗಿರಿ ಪೊಲೀಸರು ಈಗಾಗಲೇ ಆರ್​ಡಿ ಪಾಟೀಲ್ ಅಳಿಕ ಸಿದ್ರಾಮನನ್ನು ಬಂಧಿಸಿದ್ದಾರೆ. ಶಶಿಕುಮಾರ ಮತ್ತು ಸಾಗರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನು ಕಾಲೇಜು ಆಡಳಿತ ಮಂಡಳಿಯ ಕೈವಾಡದಿಂದ ಎಕ್ಸಾಂ ಸೆಂಟರ್‌ನಿಂದಲೇ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಉತ್ತರಗಳನ್ನ ಬ್ಲೂಟುತ್ ಡಿವೈಸ್ ಮೂಲಕ ಕಳುಹಿಸುತ್ತಿದ್ದ ಎಂಬ ಮಾಹಿತಿ ಬಯಲಾಗಿದೆ. ಜೊತೆಗೆ ಜಾಮರ್‌ನಿಂದ ಮೊಬೈಲ್ ಕೈಕೊಟ್ಟರೆ ವಾಕಿಟಾಕಿಯಿಂದ ಉತ್ತರ ರವಾನಿಸಲು ಅತ್ಯಂತ ಚಿಕ್ಕ ಮಾಡೇಲ್‌ನ ಹಲವು ವಾಕಿಟಾಕಿಗಳನ್ನ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಖರೀದಿಸಿದ್ದ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಆರ್​ಡಿ ಪಾಟೀಲ್​ನ ಮತ್ತೊಂದು ಕರ್ಮಕಾಂಡ ಬಯಲು: 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗಲು ಪ್ಲ್ಯಾನ್​​

ಕೇಸ್ ಸಿಐಡಿಗೆ ಹಸ್ತಾಂತರ

KEA ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಇಂದು ಕಲಬುರಗಿಯ ಇನ್ನೆರಡು ಠಾಣಾ ವ್ಯಾಪ್ತಿಯ ಕೇಸ್​ಗಳನ್ನು ಸಿಐಡಿಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಅಶೋಕ ನಗರ ಠಾಣೆಯ ಕೇಸ್ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಇಂದು ವಿವಿ ಠಾಣೆ ಮತ್ತು ಅಫಜಲಪುರ ಠಾಣೆಯ ಕೇಸ್ ಸಿಐಡಿಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಅಶೋಕ ನಗರ ಠಾಣೆ, ವಿವಿ ಠಾಣೆ ಹಾಗೂ ಅಫಜಲಪುರ ಠಾಣಾ ವ್ಯಾಪ್ತಿಯಲ್ಲಿ KEA ಪರೀಕ್ಷಾ ಅಕ್ರಮಗಳು ಬಯಲಾಗಿದ್ದವು. ಇದುವರೆಗೆ ಕಿಂಗ್ ಪಿನ್ ಆರ್.ಡಿ ಪಾಟೀಲ್, ಐವರು ಅಭ್ಯರ್ಥಿ ಸಹಿತ ಒಟ್ಟು 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿಐಡಿ ತನಿಖೆಯಲ್ಲಿ ಇನ್ನಷ್ಟು ಅಭ್ಯರ್ಥಿಗಳು, ಸಹಾಯಕರು, ಕಿಂಗ್ ಪಿನ್​ಗಳ ಮುಖ ಬಯಲಾಗುವ ಸಾಧ್ಯತೆ ಇದೆ. PSI ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆ ನಡೆಸಿದ್ದ ಸಿಐಡಿ ತನಿಖೆಯ ವರದಿ ಆಧರಿಸಿ ಪರೀಕ್ಷೆಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ