ಕೊರೊನಾ ಸಾವಿನ ಹೊಣೆ ಕಾಂಗ್ರೆಸ್‌ನವರೇ ಹೊರಬೇಕು -ಡಿಸಿಎಂ ಗೋವಿಂದ ಕಾರಜೋಳ

ಇನ್ನು ಸಿಎಂ BSY ವಿರುದ್ಧ ಸಚಿವ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಗೋವಿಂದ ಕಾರಜೋಳ, ನಾನು ಪದೇಪದೆ ಈ ವಿಚಾರ ಹೇಳಲು ಇಷ್ಟ ಪಡುವುದಿಲ್ಲ. ಕೊರೊನಾ ನಿರ್ವಹಣೆ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತೆ ಎಂದು ಹೇಳಿದರು.

ಕೊರೊನಾ ಸಾವಿನ ಹೊಣೆ ಕಾಂಗ್ರೆಸ್‌ನವರೇ ಹೊರಬೇಕು -ಡಿಸಿಎಂ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Follow us
TV9 Web
| Updated By: ಆಯೇಷಾ ಬಾನು

Updated on: Jul 05, 2021 | 1:18 PM

ಬಾಗಲಕೋಟೆ: ಕೊರೊನಾ ಸಾವಿನ ಹೊಣೆ ಕಾಂಗ್ರೆಸ್‌ನವರೇ ಹೊರಬೇಕು. ಲಸಿಕೆ ಬಗ್ಗೆ ಜನರಿಗೆ ತಪ್ಪು ಕಲ್ಪನೆ ನೀಡಿದ್ದು ಕಾಂಗ್ರೆಸ್‌ನವರು ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಜನರು ಮೊದಲು ಲಸಿಕೆ ಪಡೆಯದಿರಲು ಕಾಂಗ್ರೆಸ್ ಕಾರಣ. ಮೊದಲು ಲಸಿಕೆ ಪಡೆಯದ ಕಾರಣ ರಫ್ತು ಮಾಡಲಾಯಿತು. ಹೆಚ್ಚು ದಿನ ಲಸಿಕೆ ಇಟ್ಟರೆ ಹಾಳಾಗುತ್ತೆ ಎಂದು ಲಸಿಕೆ ರಫ್ತು ಮಾಡಲಾಯಿತು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ರು.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ರೇಸ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ಗುದ್ದಾಟ ವಿಚಾರಕ್ಕೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ಅವರು ಮಾಡೋದು ಯಾವ ರೀತಿ ಆಗಿದೆ ಅಂದರೆ ಮದುವೆ ಆಗೋಕೆ ಮುಂಚೆ ಮಕ್ಕಳನ್ನು ಹೆರಬೇಕು ಅಂತಿದ್ದಾರೆ. ಚುನಾವಣೆಯೇ ಇಲ್ಲ, ದಿನಾಂಕ ನಿಗದಿಯಾಗಿಲ್ಲ. ಈ ಸಂದರ್ಭದಲ್ಲಿ ಸಿಎಂಗಾಗಿ ಓಡಾಡೋದು ಎಷ್ಟು ಅಪ್ರಸ್ತುತ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಚುನಾವಣೆಯಲ್ಲಿ ಗೆದ್ದು ಬರಲಿ, 113 ಸ್ಥಾನ ಗೆದ್ದು ಬರಲಿ ಬಳಿಕ ಸಿಎಂ ಯಾರಾಗ್ತಾರೆ ಅಂತ ಡಿಸೈಡ್ ಆಗುತ್ತದೆ. ಅಥವಾ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಈಗಾಗಲೇ ಐದು ಗುಂಪುಗಳಾಗಿ ಹೋರಾಟ ಮಾಡುವಂತದ್ದು ಹೊಡೆದಾಟ ಮಾಡುವಂತಹದ್ದು ಒಬ್ಬರಿಗೊಬ್ಬರು ಪೈಪೋಟಿ ಮಾಡುವಂತಹದ್ದು ಕಾಂಗ್ರೆಸ್ ಅವಸಾನದ ಮುನ್ಸೂಚನೆ ಎಂದರು.

ಇನ್ನು ಸಿಎಂ BSY ವಿರುದ್ಧ ಸಚಿವ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಗೋವಿಂದ ಕಾರಜೋಳ, ನಾನು ಪದೇಪದೆ ಈ ವಿಚಾರ ಹೇಳಲು ಇಷ್ಟ ಪಡುವುದಿಲ್ಲ. ಕೊರೊನಾ ನಿರ್ವಹಣೆ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತೆ ಎಂದು ಹೇಳಿದರು. ಪ್ರವಾಹ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಯಾಯ್ತು. ಪ್ರವಾಹಕ್ಕೆ ದೊಡ್ಡ ಮೊತ್ತದ ಪರಿಹಾರವನ್ನ ಸಿಎಂ ನೀಡಿದ್ದಾರೆ. ರಾಷ್ಟ್ರೀಯ ನಾಯಕರು ಸಿಎಂ BSY ಕಾರ್ಯ ಮೆಚ್ಚಿದ್ದಾರೆ. ಸಿಎಂ ಯಡಿಯೂರಪ್ಪ ನಾಯಕತ್ವದಲ್ಲೇ ಸರ್ಕಾರ ಇರುತ್ತೆ. ಹೈಕಮಾಂಡ್ ಮುಂದೆ ಸಿಎಂ ಬದಲಾವಣೆ ಪ್ರಸ್ತಾಪವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಿಜೋರಾಂನಲ್ಲಿ ಭೋರ್ಗರೆಯುತ್ತಿರುವ ಜಲಧಾರೆ! ಮೋಡಿ ಮಾಡುವ ರಮಣೀಯ ದೃಶ್ಯದ ವಿಡಿಯೋ ನೋಡಿ