AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಜೋರಾಂನಲ್ಲಿ ಭೋರ್ಗರೆಯುತ್ತಿರುವ ಜಲಧಾರೆ! ಮೋಡಿ ಮಾಡುವ ರಮಣೀಯ ದೃಶ್ಯದ ವಿಡಿಯೋ ನೋಡಿ

ಪ್ರಕೃತಿಯ ಐಸಿರಿಗೆ ಮನಸೋಲದೇ ಇರಲು ಸಾಧ್ಯವೇ? ಕಾಡಿನ ಮಧ್ಯೆ ಧುಮ್ಮಿಕ್ಕುವ ಜಲಪಾತ, ಧೋ.. ಎಂದು ಭೋರ್ಗರೆಯುವ ಜಲಧಾರೆಯ ವೈಯಾರದ ದೃಶ್ಯಗಳ ನೋಟ ಕಣ್ಣಿಗೆ ಮುದ ನೀಡುತ್ತದೆ.

ಮಿಜೋರಾಂನಲ್ಲಿ ಭೋರ್ಗರೆಯುತ್ತಿರುವ ಜಲಧಾರೆ! ಮೋಡಿ ಮಾಡುವ ರಮಣೀಯ ದೃಶ್ಯದ ವಿಡಿಯೋ ನೋಡಿ
ಮಿಜೋರಾಂನಲ್ಲಿ ಭೋರ್ಗರೆಯುತ್ತಿರುವ ಜಲಧಾರೆ!
TV9 Web
| Updated By: shruti hegde|

Updated on: Jul 05, 2021 | 1:03 PM

Share

ಪ್ರಕೃತಿಯ ಸೊಬಗೇ ಹಾಗೆ! ಹಚ್ಚ-ಹಸಿರ ಮರಗಿಡಗಳು, ತುಂಬು ಹರಿಯುವ ನದಿಗಳು.. ಪ್ರಾಣಿ-ಪಕ್ಷಿಗಳ ಚಿಲಿಪಿಲಿ ಕಲರವ, ಮೋಡ-ಮಳೆ-ಬಿಸಿಲು-ಚಳಿ ಹೀಗೆ ನಾನಾ ರೀತಿಯ ವೈಭವಪೂರ್ಣ ಸೊಬಗು. ಭೋರ್ಗರೆಯುತ್ತಿರುವ ಜಲಪಾತಗಳ ರಮಣೀಯ ದೃಶ್ಯವನ್ನು ನೋಡುವುದೇ ಒಂದು ಖುಷಿ.  ಸುಂದರ ತಾಣಗಳ ನೋಟ ಮನಸ್ಸಿಗೆ ಇಷ್ಟವಾಗುತ್ತವೆ.  ಈಗಷ್ಟೇ ಮಳೆಗೆ ನೆಂದ ಹಚ್ಚಹಸಿರಿನ ಕಾನನದ ಮಧ್ಯೆ ಹರಿಯುವ ಜಲಪಾತ ಕಣ್ಣಿಗೆ ಸೊಬಗು. ಮಿಜೋರಾಂನಲ್ಲಿ ಭೋರ್ಗರೆಯುತ್ತಿರುವ ಜಲಪಾತದ ದೃಶ್ಯವನ್ನು ಕೈಗಾರಿಕಾ ಉದ್ಯಮಿ ಹರ್ಷ ಗೋಯಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಕೃತಿಯ ಐಸಿರಿಗೆ ಮನಸೋಲದೇ ಇರಲು ಸಾಧ್ಯವೇ? ಕಾಡಿನ ಮಧ್ಯೆ ಧುಮ್ಮಿಕ್ಕುವ ಜಲಪಾತ, ಧೋ.. ಎಂದು ಭೋರ್ಗರೆಯುವ ಜಲಧಾರೆಯ ವೈಯಾರದ ದೃಶ್ಯಗಳ ನೋಟ ಕಣ್ಣಿಗೆ ಮುದ ನೀಡುತ್ತದೆ. ಕಾನನದ ನಟ್ಟ ನಡುವೆ ಹರಿಯುವ ಜಲಧಾರೆ ನೋಡುವುದೇ ಮನಸ್ಸಿಗೆ ಖುಷಿ. ಅದರಲ್ಲಿಯೂ ಮಳೆಗಾಲದ ಸಮಯದಲ್ಲಿ ಸುಂದರ ಪ್ರಕೃತಿಯ ಸೊಬಗು ಎಲ್ಲರ ಕಣ್ಮನ ಸೆಳೆಯುತ್ತದೆ.

ವಿಡಿಯೋ ಕ್ಲಿಪ್​ 30 ಸೆಕೆಂಡ್​ಗಳಲ್ಲಿದೆ. ಹಾಲಿನ ಬಣ್ಣದಲ್ಲಿ ನೀರು ಭೋಗರೆಯುತ್ತಿರುವ ದೃಶ್ಯ ರಮಣೀಯವಾಗಿದೆ. ಅದ್ಭುತ ಪ್ರಕೃತಿಗೆ ನೆಟ್ಟಿಗರು ಸೋತಿದ್ದಾರೆ. ಅದ್ಭುತ ದೃಶ್ಯದ ಸೆರೆ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಮೋಡಿ ಮಾಡುವ ಮೋಡದ ಜಲಪಾತದಂತೆ ಭಾಸವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 19,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಪ್ರಕೃತಿಯ ಸುಂದರ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ:

ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನು ನೋಡಲು ಗೋಕಾಕ್ ಜಲಪಾತಕ್ಕೆ ಭೇಟಿ ನೀಡಿ

ಜೋಗ ಜಲಪಾತದ ಗುಂಡಿಯಲ್ಲಿ ಕೋತಿರಾಜ್​ ಸಾಕ್ಷ್ಯಚಿತ್ರ ಶೂಟಿಂಗ್