ಕಟ್ಟಡ ನಿರ್ಮಾಣ ಮುಗಿದಿದೆ, ಉದ್ಘಾಟನೆಗೆ ಗಣ್ಯರು ಆಗಮಿಸಿದ್ದಾರೆ , ರಿಬ್ಬನ್ ಕಟ್ಟಿಯಾಗಿದೆ, ಆದರೆ ರಿಬ್ಬನ್ ಕಟ್ ಮಾಡಲು ಕತ್ತರಿ ಎಲ್ಲಿ?
ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದುಕೊಂಡ ಅವರು ರಿಬ್ಬನ್ನ ಒಂದು ಕೊನೆಯನ್ನು ಕೈಯಿಂದ ಕಿತ್ತಿ ಒಳಗೆ ಪ್ರವೇಶ ಮಾಡುವ ಮೂಲಕ ಉದ್ಘಾಟನೆ ಕೆಲಸವನ್ನು ಪೂರೈಸಿದ್ದಾರೆ. ಅವರ ಹಿಂದೆಯೇ ಉಳಿದವರೆಲ್ಲ ಆವರಣವನ್ನು ಪ್ರವೇಶಿಸಿದ್ದಾರೆ.
ಯಾವುದಾದರೂ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಅಥವಾ ಮತ್ಯಾವುದೋ ಯೋಜನೆಯನ್ನು ಉದ್ಘಾಟಿಸಲು ಗಣ್ಯರಿಂದ ರಿಬ್ಬನ್ ಕಟ್ ಮಾಡಿಸವುದು ನಮ್ಮಲ್ಲಿ ನಡೆದು ಬಂದಿರುವ ಸಂಪ್ರದಾಯ. ಹಲವು ಕಡೆ ಇಂಥ ಕಾರ್ಯಕ್ರಮಗಳನ್ನು ಉದ್ಘಾಟನಾ ಸಮಾರಂಭ ಅನ್ನುವ ಬದಲು ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮ ಅಂತ ಕರೆಯುತ್ತಾರೆ. ಈ ಕಾರ್ಯಕ್ರಮಕ್ಕೆ ಮೂರು ಆಯಾಮಗಳು ಅತ್ಯವಶ್ಯಕ. ಅಡ್ಡಲಾಗಿ ಕಟ್ಟಿರುವ ರಿಬ್ಬನ್, ಅದನ್ನು ಕಟ್ ಮಾಡಲು ಒಂದು ಕತ್ತರಿ ಮತ್ತು ಕತ್ತರಿಯಿಂದ ರಿಬ್ಬನ್ ಕಟ್ ಮಾಡಲು ಒಬ್ಬ ಗಣ್ಯ ವ್ಯಕ್ತಿ. ಈ ಮೂರರಲ್ಲಿ ಯಾವುದಾದರೂ ಒಂದು ಇಲ್ಲವಾದರೂ ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮ ನೆರವೇರಲಾರದು. ಆದರೆ ರವಿವಾರದಂದು ತೆಲಂಗಾಣದ ರಾಜಣ್ಣ ಸಿರ್ಸಿಲಾ ಜಿಲ್ಲೆ ತಂಗಲ್ಲಪಲ್ಲಿ ಮಂಡಲ್ನಲ್ಲಿ ಬರುವ ಮೇಡಿಪಲ್ಲಿಯಲ್ಲಿ ಒಂದು ತಮಾಷೆ ನಡೆಯಿತು. ಅಲ್ಲಿ ಒಂದು ಸಮುದಾಯ ಭವನ ಕಟ್ಟಡ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆಗಮಿಸಿದ್ದರು. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು, ಕಟ್ಟದ ಮುಖ್ಯ ಬಾಗಿಲಿಗೆ ರಿಬ್ಬನ್ ಕಟ್ಟಲಾಗಿತ್ತು. ಮುಖ್ಯಮಂತ್ರಿ ರಾವ್ ಕೂಡ ಸರಿಯಾದ ಸಮಯಕ್ಕೆ ಆಗಮಿಸಿದ್ದರು. ಅವರು ರಿಬ್ಬನ್ ಕಟ್ಟಿರುವಲ್ಲಿಗೆ ನಡೆದು ಬಂದು ಅದನ್ನು ಕಟ್ ಮಾಡಲು ತಮ್ಮ ಪಕ್ಕದಲ್ಲಿರುವವರಿಗೆ ಕತ್ತರಿ ಕೊಡಿ ಅಂತ ಕೇಳಿದರು.
ಅವರ ಸುತ್ತಮುತ್ತ ಕೆಲ ಅರ್ಚಕರು ಇದ್ದರು ಮತ್ತು ಬಲಪಾರ್ಶ್ವದಲ್ಲಿ ಕೈಯಲ್ಲಿ ಹೂ ಮತ್ತು ಹಾರಗಳನ್ನು ಹಿಡಿದಿರುವ ಒಬ್ಬ ವ್ಯಕ್ತಿ ಕಾಣಿಸುತ್ತಿದ್ದಾರೆ. ಪ್ರಯಾಶ: ಈ ವ್ಯಕ್ತಿಗೆ ಕತ್ತರಿಯನ್ನು ತರುವುದಕ್ಕಿಂತ ಮುಖ್ಯಮಂತ್ರಿಗಳ ಜೊತೆ ಫೋಟೋ ಮತ್ತು ವಿಡಿಯೋನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು ಮುಖ್ಯವಾಗಿತ್ತು ಅನಿಸುತ್ತದೆ. ಮುಖ್ಯಮಂತ್ರಿಗಳು ಕತ್ತರಿ ಎಲ್ಲಿ ಅಂತ ಕೇಳುತ್ತಿದರೆ, ಆ ವ್ಯಕ್ತಿ ಮತ್ತು ಅಲ್ಲಿದ್ದವರೆಲ್ಲ ಪೆಕರು ಪೆಕಾರಾಗಿ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳುತ್ತಿದ್ದಾರೆ.
ಒಳಗಡೆ ನಿಂತಿರುವ ವ್ಯಕ್ತಿಯೊಬ್ಬ ಗುಂಪಿನಲ್ಲಿರುವ ಯಾರಿಗೋ ಕತ್ತರಿ ಎಲ್ಲಿ ಎಂದು ಕೇಳುತ್ತಿದ್ದಾನೆ. ಆಯೋಜಕರ ಬೇಜವಾಬ್ದಾರಿತನ ಮುಖ್ಯಮಂತ್ರಿಗಳನ್ನು ಕೆರಳುವಂತೆ ಮಾಡಿದೆ.
ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದುಕೊಂಡ ಅವರು ರಿಬ್ಬನ್ನ ಒಂದು ಕೊನೆಯನ್ನು ಕೈಯಿಂದ ಕಿತ್ತಿ ಒಳಗೆ ಪ್ರವೇಶ ಮಾಡುವ ಮೂಲಕ ಉದ್ಘಾಟನೆ ಕೆಲಸವನ್ನು ಪೂರೈಸಿದ್ದಾರೆ. ಅವರ ಹಿಂದೆಯೇ ಉಳಿದವರೆಲ್ಲ ಆವರಣವನ್ನು ಪ್ರವೇಶಿಸಿದ್ದಾರೆ. ರಾವ್ ಅವರು ತಾಳ್ಮೆ ಕಳೆದುಕೊಂಡಿರುವುದು ವಿಡಿಯೋನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
#WATCH | Telangana Chief Minister K Chandrashekar Rao pulls out ribbon after not getting a pair of scissors for cutting the ribbon, at an inauguration in Medipally of Thangallapally Mandal in Rajanna Sircilla district on Sunday. pic.twitter.com/0KjNCITgy3
— ANI (@ANI) July 5, 2021
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮತ್ತು ಕೆಲವರು ಅದಕ್ಕೆ ರಿಯಾಕ್ಟ್ ಕೂಟ ಮಾಡಿದ್ದಾರೆ.
ನಂದಿನಿ ಇದ್ನಾನಿ ಅನ್ನುವವರು ಈ ವಿಡಿಯೋವನ್ನು ಶೇರ್ ಮಾಡಿ, ‘ಇದೋ ನೋಡಿ ರಿಬ್ಬನ್ ಕಟ್ಟಿಂಗ್ ಕಾರ್ಯಕ್ರಮದಲ್ಲಿ ಕತ್ತರಿಯೇ ಇಲ್ಲ! ಎಂಥ ಅವಮಾನ,’ ಅಂತ ಹೇಳಿದ್ದಾರೆ.
Lol ribbon cutting ceremony mein scissor nahi hai Gajab beijati ??
— Nandini Idnani?? (@idnani_nandini) July 5, 2021
ಡಿಜೆ ಸಿಂಗ್ ಎನ್ನುವವರು ತಮ್ಮ ಟ್ವೀಟ್ನಲ್ಲಿ, ‘ಪ್ರಿ-ಪ್ಲ್ಯಾನಿಂಗ್ ಅಂದರೆ ಇದಪ್ಪಾ’ ಎಂದಿದ್ದಾರೆ.
This is called pre planning
— DJ Singh (@DJSingh85016049) July 5, 2021
ಹಾಗೆಯೇ, ಅದಿತ್ಯ ಗುಪ್ತಾ ಎನ್ನುವವರು ಈ ವಿಡಿಯೋ ಪ್ರತಿಕ್ರಿಯೆ ನೀಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇಮೇಜ್ ಹಾಕಿ, ದೇಖಾ ಮೇರಾ ಕಮಾಲ್ (ನೋಡಿದ್ರಾ ನನ್ನ ಚಮತ್ಕಾರ) ಅಂತ ಬರೆದಿದ್ದಾರೆ.
— Aditya Gupta (@researchAditya) July 5, 2021
ಮಾಹಿತಿ ಮತ್ತು ತಂತ್ರಜ್ಞಾನ ಸಿಕ್ಕಾಪಟ್ಟೆ ಮುಂದುವರಿದಿರುವ ಇವತ್ತಿನ ಜಮಾನಾದಲ್ಲಿ ಜನ ಪ್ರತಿನಿಧಿಗಳು ಸ್ವಲ್ಪ ಸಂಯಮ ಕಾಯ್ದುಕೊಳ್ಳಬೇಕು ಇಲ್ಲವಾದಲ್ಲಿ ಅವರು ಸಿಡಿಮಿಡಿಗೊಂಡಿರುವ ವಿಡಿಯೋಗಳು, ಇಮೇಜ್ಳು ಕ್ಷಣಾರ್ಧದಲ್ಲಿ ವೈರಲ್ ಅಗುತ್ತವೆ ಅನ್ನೋದಕ್ಕೆ ತೆಲಂಗಾಣ ಮುಖ್ಯಮಂತ್ರಿಗಳನ್ನೊಳಗೊಂಡ ಈ ವಿಡಿಯೋ ಮತ್ತೊಂದು ಸಾಕ್ಷಿ.