Viral Video: ಸ್ಕೇಟಿಂಗ್ ಮಾಡ್ಕೊಂಡೇ ಪಾರ್ಸೆಲ್ ಕೊಟ್ಟುಬಂದ ಸ್ವಿಗ್ಗಿ ಡೆಲಿವರಿ ಬಾಯ್! ಪೆಟ್ರೋಲ್ ದರ ಏರಿಕೆಯ ಪರಿಣಾಮ ಎಂದ ನೆಟ್ಟಿಗರು
ಸಾಮಾನ್ಯವಾಗಿ ಬೈಕ್ ಅಥವಾ ಸೈಕಲ್ಗಳಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗರು ತಿರುಗಾಡುವುದನ್ನು ನೋಡಿರುತ್ತೀರಿ. ಅದರೆ ಸ್ಕೇಟಿಂಗ್ ಮಾಡಿಕೊಂಡೇ ಸ್ವಿಗ್ಗಿ ಹುಡುಗ ರಸ್ತೆಯಲ್ಲಿ ಹೋಗುತ್ತಿದ್ದಾನೆ. ವಿಡಿಯೋ ವೈರಲ್ ಆಗಿದೆ.

ಪೆಟ್ರೋಲ್ ದರ ದಿನೇ ದಿನೇ ಏರುತ್ತಲೇ ಇದೆ. ಲೀಟರ್ ಪೆಟ್ರೋಲ್ ದರ ಕೇಳಿ ವಾಹನ ಸವಾರರು ಚಿಂತೆಗೀಡಾಗಿದ್ದಾರೆ. ದಿನನಿತ್ಯದ ಬಳಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇರುವುದು ಜನರ ಬೇಸರಕ್ಕೆ ಕಾರಣವಾಗಿದೆ. ಹೀಗಿರುವಾಗ ಹೆಚ್ಚಿನ ಜನರು ವಾಹನಗಳನ್ನು ಬದಿಗಿಟ್ಟು ನಡೆದೇ ಸಾಗುತ್ತಿದ್ದಾರೆ. ಇನ್ನು ಕೆಲವರು ಸೈಕಲ್ ಉಪಯೋಗಿಸುತ್ತಿದ್ದಾರೆ. ಇಲ್ಲೋರ್ವ ಸ್ವಿಗ್ಗಿ ಡೆಲಿವರಿ ಬಾಯ್ ಸ್ಕೇಟಿಂಗ್ ಮಾಡಿಕೊಂಡು ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ನೆಟ್ಟಿಗರೋರ್ವರು, ಪೆಟ್ರೋಲ್ ದರ ಏರಿರುವುದೇ ಇದಕ್ಕೆ ಕಾರಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾನ್ಯವಾಗಿ ಬೈಕ್ ಅಥವಾ ಸೈಕಲ್ಗಳಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗರು ತಿರುಗಾಡುವುದನ್ನು ನೋಡಿರುತ್ತೀರಿ. ಕೆಲವು ದಿನಗಳ ಹಿಂದೆ ಹುಡುಗನೊಬ್ಬ ಕುದುರೆ ಹತ್ತಿ ಸರಕುಗಳನ್ನು ಸಾಗಿಸುತ್ತಿದ್ದ ವಿಡಿಯೋ ಕೂಡಾ ವೈರಲ್ ಆಗಿತ್ತು. ಅದೇ ಸಮಯದಲ್ಲಿ ಇದೀಗ ಮತ್ತೊಂದು ವಿಡಿಯೋ ಹರಿದಾಡುತ್ತಿದೆ. ಸ್ಕೇಟಿಂಗ್ ಮಾಡಿಕೊಂಡೇ ಸ್ವಿಗ್ಗಿ ಹುಡುಗ ರಸ್ತೆಯಲ್ಲಿ ಹೋಗುತ್ತಿದ್ದಾನೆ. ಬೆನ್ನಿಗೆ ಭಾರದ ಪಾರ್ಸೆಲ್ ಬ್ಯಾಗ್ ಧರಿಸಿ ರಸ್ತೆಯಲ್ಲಿ ಸಾಗುತ್ತಿದ್ದಾನೆ.
ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಇನ್ನಿತರ ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಳ್ಳಲಾಗುತ್ತಿದೆ. 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಕೆಲವರು ಸ್ಕೇಟಿಂಗ್ ಮಾಡಲು ರಸ್ತೆ ಸರಿಯಾಗಿರಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ಸ್ವಿಗ್ಗಿ ಡೆಲಿವರಿ ಹುಡುಗನಿಗೆ ಶ್ಲಾಘಿಸಿದ್ದಾರೆ. ಇನ್ನೋರ್ವರು ಪೆಟ್ರೋಲ್ ದರ ಏರಿಕೆಯಿಂದಾದ ಅವಾಂತರ ಇದು ಎಂದು ಹೇಳಿದ್ದಾರೆ. ಕಾರಣ ಏನೇ ಇದ್ದರೂ ಸಹ ಇಂಧನ ದರ ಏರಿಕೆ ಕಾಣುತ್ತಿರುವುದರಿಂದ ಜನರು ಒಂದಲ್ಲಾ ಒಂದು ಪರ್ಯಾಯ ವ್ಯವಸ್ಥೆಯನ್ನು ಹುಡುಕುತ್ತಿದ್ದಾರೆ.
View this post on Instagram
ಇದನ್ನೂ ಓದಿ:
Viral Video: ಮಣ್ಣಿನ ಧೂಳು ಕಂಡು ಆನೆಗೆ ಖುಷಿಯೋ ಖುಷಿ; ಸಂತೋಷಪಟ್ಟ ಪರಿ ಹೇಗಿದೆ ನೋಡಿ
Viral Video: ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟ ವೃದ್ಧ; ವಿಡಿಯೋ ವೈರಲ್!