ಕರ್ನಾಟಕದಲ್ಲಿ ಅಕ್ಕಿ ದರ ದಿಢೀರ್ ಏರಿಕೆ: ತಿಂಗಳಲ್ಲಿ 2ನೇ ಬಾರಿ ಹಚ್ಚಳ, ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ

ಕರ್ನಾಟಕ ಅಕ್ಕಿ ಬೆಲೆ ಏರಿಕೆ: ರಾಜ್ಯದಲ್ಲಿ ಒಂದು ವಾರದ ಅವಧಿಯಲ್ಲಿ ಅಕ್ಕಿ ದರ ಎರಡನೇ ಬಾರಿ ಏರಿಕೆಯಾಗಿದೆ. ಮಳೆ ಕೊರತೆ, ನೀರಿನ ಸಮಸ್ಯೆ ಇತ್ಯಾದಿಗಳಿಂದ ಇಳುವರಿ ಕುಸಿತವಾಗಿದ್ದು ಸಹ ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಅಕ್ಕಿ ದರ ದಿಢೀರ್ ಏರಿಕೆ: ತಿಂಗಳಲ್ಲಿ 2ನೇ ಬಾರಿ ಹಚ್ಚಳ, ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ
ಅಕ್ಕಿ ಮಿಲ್​ನಲ್ಲಿ ಅಕ್ಕಿ ಶುಚಿಗೊಳಿಸುತ್ತಿರುವುದು (ಸಾಂದರ್ಭಿಕ ಚಿತ್ರ)
Image Credit source: PTI
Edited By:

Updated on: Sep 22, 2026 | 12:07 PM

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದಲ್ಲಿ ಅಕ್ಕಿ ದರ ದಿಢೀರ್ ಏರಿಕೆಯಾಗಿದ್ದು, ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದೇ ತಿಂಗಳಲ್ಲಿ ಸತತವಾಗಿ ಎರಡನೇ ಬಾರಿ ಅಕ್ಕಿ ದರ ಹೆಚ್ಚಳವಾಗಿದ್ದು, ಕಳೆದೊಂದು ವಾರದಿಂದ ಬೆಲೆ ಏರಿಕೆ ಮುಂದುವರಿದಿದೆ. ಕೋಲಂ ಅಕ್ಕಿ ದರ ಕೆಜಿಗೆ 75 ರೂ. ಇದ್ದುದು 100 ರೂ.ಗೆ ಏರಿಕೆಯಾಗಿದೆ. ಬಹುತೇಕ ಎಲ್ಲಾ ವಿಧದ ಅಕ್ಕಿಯ ಬೆಲೆಯಲ್ಲೂ ಹೆಚ್ಚಳ ಕಂಡುಬಂದಿದೆ. ನಾಲ್ಕು ದಿನಗಳ ಹಿಂದೆ 180 ಇದ್ದ ಅಕ್ಕಿಯ ಬೆಲೆ ಇದೀಗ 200 ರೂ.ಗೆ ಏರಿಕೆಯಾಗಿದೆ.

ಸೂಕ್ತ ಇಳುವರಿ ಇಲ್ಲದ ಕಾರಣ ಅಕ್ಕಿ ದರ ಏರಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ. ಅಕ್ಕಿ ಬೆಲೆ ಏರಿಕೆಯಿಂದ ಈಗಾಗಲೇ ಬೆಲೆ ಏರಿಕೆಯ ಹೊರೆ ಹೊತ್ತಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

ವಾರದ ಹಿಂದಷ್ಟೇ ಏರಿಕೆಯಾಗಿದ್ದ ಅಕ್ಕಿ ದರ

ಸೆಪ್ಟೆಂಬರ್ 15 ರಂದು ಕರ್ನಾಟಕದಲ್ಲಿ ಅಕ್ಕಿ ದರ ಏರಿಕೆಯಾಗಿತ್ತು. ಒಂದು ಕೆಜಿ ನಾರ್ಮಲ್ ಅಕ್ಕಿ ಮೇಲೆ 5 ರಿಂದ 10 ರುಪಾಯಿಯಷ್ಟು ಏರಿಕೆ ಆಗಿದ್ದು, ಕ್ವಾಲಿಟಿ ಅಕ್ಕಿ ಮೇಲೆ 10 ರಿಂದ 20 ರುಪಾಯಿ ಏರಿಕೆ ಆಗಿತ್ತು. ಒಂದು ಕ್ವಿಂಟಲ್ ಮೇಲೆ 1000 ‌ರೂಪಾಯಿಯಷ್ಟು ಏರಿಕೆ ಆಗಿತ್ತು. ನಾರ್ಮಲ್ ಅಕ್ಕಿ ಚೀಲದ ಮೇಲೆ 200 ರೂಪಾಯಿ, ಕ್ವಾಲಿಟಿ ಅಕ್ಕಿ ಮೇಲೆ 250 ರಿಂದ 300 ಏರಿಕೆಯಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್​: ಮತ್ತೆ ಅಕ್ಕಿ ದರ ಏರಿಕೆ ಶಾಕ್, ಇಲ್ಲಿದೆ ದರ ವಿವರ

ಮಳೆ ಕೊರತೆ, ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೇ ಇರುವುದು ಮತ್ತಿತರ ಸಮಸ್ಯೆಗಳಿಂದ ಬೆಳೆಗಳು ಸೂಕ್ತವಾಗಿ ಕಟಾವಿಗೆ ಬರದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳು ಈ ವರ್ಷ ಸೃಷ್ಟಿಯಾಗಿವೆ. ಪರಿಣಾಮವಾಗಿ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.

ಅಕ್ಕಿ ಬ್ರ್ಯಾಂಡ್ – ಹೊಸ ದರ (ಕೆಜಿ) – ಹಿಂದಿನ ದರ (ಕೆಜಿ)

  • ಕೋಲಂ ಅಕ್ಕಿ : ₹100 – ₹75
  • ಸೋನಾಮಸೂರಿ : ₹82 – ₹68
  • ಜೀರಾ ಸಾಂಬ : ₹180 – ₹200
  • ಸ್ಟೀಮ್ ಅಕ್ಕಿ : ₹68 – ₹75

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us