ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?

ಅಮೆರಿಕದ ಅಧ್ಯಕ್ಷಗಾದಿಗೆ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಖಚಿತಗೊಂಡಿರುವ ಬೆನ್ನಲ್ಲಿ, ಭಾರತದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ಎಸ್.ಎಂ. ಕೃಷ್ಣ ಬೈಡೆನ್ ಮತ್ತು ಕಮಲಾಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ. ಬೈಡೆನ್, ಕಮಲಾ ಹ್ಯಾರಿಸ್ ಗೆ ಆತ್ಮೀಯರಂತೆ ಎಸ್.ಎಂ. ಕೃಷ್ಣ! ಈ ಹಿಂದೆ 2009ರಿಂದ 2012ರ ವರೆಗೆ, ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ […]

ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?
ಸಾಧು ಶ್ರೀನಾಥ್​

Updated on: Nov 09, 2020 | 5:42 PM

ಅಮೆರಿಕದ ಅಧ್ಯಕ್ಷಗಾದಿಗೆ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಖಚಿತಗೊಂಡಿರುವ ಬೆನ್ನಲ್ಲಿ, ಭಾರತದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ಎಸ್.ಎಂ. ಕೃಷ್ಣ ಬೈಡೆನ್ ಮತ್ತು ಕಮಲಾಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

ಬೈಡೆನ್, ಕಮಲಾ ಹ್ಯಾರಿಸ್ ಗೆ ಆತ್ಮೀಯರಂತೆ ಎಸ್.ಎಂ. ಕೃಷ್ಣ!
ಈ ಹಿಂದೆ 2009ರಿಂದ 2012ರ ವರೆಗೆ, ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಎಸ್.ಎಂ. ಕೃಷ್ಣ, ಆಗ ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಬರಾಕ್ ಒಬಾಮಾ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ರನ್ನು ಕೃಷ್ಣ ಭೇಟಿಯಾಗಿದ್ದರು.

ಅಮೆರಿಕದ ಚುನಾವಣೆಗೂ ಮೊದಲೇ ಕೃಷ್ಣ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದರು ಮತ್ತು ಖಾಸಗಿಯಾಗಿ ತಮ್ಮ ಶುಭ ಸಂದೇಶವನ್ನು ರವಾನಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಮಲಾ, ಬೈಡೆನ್ ಜೊತೆಗೆ ಕೃಷ್ಣಗೆ ಉತ್ತಮ ಸಂಪರ್ಕವೂ ಇದೆ. ಅಮೆರಿಕಾದ ಮತದಾನಕ್ಕಿಂತ ಮೊದಲು ನಮ್ಮ ದೇಶದಲ್ಲಿ ಆಚರಿಸಿದ ದಸರಾ ಸಂದರ್ಭದಲ್ಲಿಯೇ ಕೃಷ್ಣ ಅವರು ಖಡಕ್ ಮಾತನಾಡಿದ್ದರು. ಅಮೆರಿಕಾದಲ್ಲಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರು ಗೆಲ್ಲಲಿ ಎಂದು ನೇರವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೆರಿಕ ದಲ್ಲಾಸ್ ನ ಸಥರ್ನ್ ಮೆಥಡಿಸ್ಟ್ ಯುನಿವರ್ಸಿಟಿ, ವಾಷಿಂಗ್ಟನ್ ಡಿ.ಸಿ.ಯ ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಟಿಗಳಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ವ್ಯವಸ್ಥೆಯ ಕುರಿತು ಉತ್ತಮ ಜ್ಞಾನ ಪಡೆದವರಾಗಿದ್ದಾರೆ. ಭಾರತೀಯ ರಾಜಕೀಯ ಧುರೀಣ ಕೃಷ್ಣಗೆ ಈಗ 88 ವರ್ಷ ವಯಸ್ಸಾಗಿದ್ದು ಭಾರತೀಯ ರಾಜ್ಯ, ರಾಷ್ಟ್ರ ರಾಜಕಾರಣಗಳ ಅನುಭವ ಹೊಂದಿದ್ದಾರೆ.

1962ರಿಂದ ಭಾರತೀಯ ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವ ಅವರು 2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪ್ರಸ್ತುತ ಆಳ್ವಿಕೆ ನಡೆಸುತ್ತಿರುವುದು ನರೇಂದ್ರ ಮೋದಿ ಆಡಳಿತದ ಬಿಜೆಪಿ ಪಕ್ಷವಾಗಿರುವುದರಿಂದ, ದೇಶಕ್ಕೆ ಮತ್ತು ಪಕ್ಷಕ್ಕೆ, ಭಾರತ-ಅಮೆರಿಕ ಸಂಬಂಧವಾಗಿ ಎಸ್.ಎಂ. ಕೃಷ್ಣ ಕಡೆಯಿಂದ ಉತ್ತಮ ಸಹಾಯವಾಗುವ ನಿರೀಕ್ಷೆಯಿದೆ.

Published On - 5:39 pm, Mon, 9 November 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us