ಬೆಂಗಳೂರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಗಂಧ ತುಂಡುಗಳು, ಗಾಂಜಾ ಜಪ್ತಿ

| Updated By: ಆಯೇಷಾ ಬಾನು

Updated on: Jul 20, 2024 | 11:17 AM

ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಗಂಧ ತುಂಡುಗಳು, ಗಾಂಜಾ ಜಪ್ತಿ ಮಾಡಲಾಗಿದೆ. K.R.ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್​ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಗಂಧದ ತುಂಡುಗಳನ್ನು ಸೀಜ್ ಮಾಡಲಾಗಿದೆ. ಮತ್ತೊಂದೆಡೆ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ 3.5 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ.

ಬೆಂಗಳೂರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಗಂಧ ತುಂಡುಗಳು, ಗಾಂಜಾ ಜಪ್ತಿ
ಹೈಡ್ರೊಪೋನಿಕ್ ಗಾಂಜಾ
Follow us on

ಬೆಂಗಳೂರು, ಜುಲೈ.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಗಂಧದ ತುಂಡುಗಳು (Sandalwood) ಹಾಗೂ ಗಾಂಜಾ (Ganja)ಜಪ್ತಿ ಮಾಡಲಾಗಿದೆ. ನಗರದಲ್ಲಿ ಗಂಧದ ದಂಧೆ ಮತ್ತೆ ಶುರುವಾಗಿದ್ದು ರಾಜ್ಯ ಅರಣ್ಯ ಜಾಗೃತದಳ ಸಿಬ್ಬಂದಿ ಗಂಧದ ಮರಗಳ ಕಳವು ಪ್ರಕರಣ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ K.R.ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್​ ಮೇಲೆ ರಾಜ್ಯ ಅರಣ್ಯ ಜಾಗೃತದಳ ದಾಳಿ ನಡೆಸಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಗಂಧದ ತುಂಡುಗಳನ್ನು ಪತ್ತೆ ಮಾಡಿ ಸೀಜ್ ಮಾಡಿದ್ದಾರೆ.

ಆರೋಪಿಗಳು ನೂರಾರು ಗಂಧದ ತುಂಡುಗಳನ್ನು ಸಂಗ್ರಹಿಸಿ ಅಕ್ರಮ ಸಾಗಾಟಕ್ಕ ಯತ್ನ ನಡೆಸಿದ್ದರು. ಸದ್ಯ ಈಗ ಆರೋಪಿಗಳನ್ನು ಬಂಧಿಸಿ ಗಂಧದ ತುಂಡು ಜಪ್ತಿ ಮಾಡಲಾಗಿದೆ. ಎರಡು ಟನ್​ಗೂ ಅಧಿಕ ಗಂಧದ ಮರಗಳನ್ನು ಮರಗಳ್ಳರು ಸಂಗ್ರಹಿಸಿದ್ದು ಹೇಗೆ? ಅಕ್ರಮ ಗಂಧದ ಮರಗಳು ಸರ್ಕಾರದ ಕಾರ್ಖಾನೆ ಸೇರಿದ್ದು ಹೇಗೆ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: ನದಿಗೆ ಬಿದ್ದಿದ್ದ ಟ್ಯಾಂಕರ್ ನಾಲ್ಕು ದಿನಗಳ ನಂತರ ದಡಕ್ಕೆ!

ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ 3.5 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ 3.5 ಕೆಜಿ ಹೈಡ್ರೊಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿದೇಶದಿಂದ ಅಕ್ರಮವಾಗಿ ಕೆಐಎಬಿಗೆ ಗಾಂಜಾ ತಂದಿದ್ದ ಕೇರಳ ಮೂಲದ ಆರೋಪಿ ಶಾಹನ್ಸಾ ಸಾಹುಲ್ ಅಹ್ಮದ್​ನನ್ನು ವಶಕ್ಕೆ ಪಡೆಯಲಾಗಿದೆ.

ಲಗೇಜ್ ಬ್ಯಾಗ್​ನಲ್ಲಿ ಅಡಗಿಸಿಕೊಂಡು 3.5 ಕೋಟಿ ಮೌಲ್ಯದ 3.5 ಕೆಜಿ ಹೈಡ್ರೊಪೋನಿಕ್ ಗಾಂಜಾವನ್ನು 6E1056 ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಆರೋಪಿ ತಂದಿದ್ದ. ಏರ್ಪೋಟ್ ನಲ್ಲಿ ಪರಿಶೀಲನೆ ವೇಳೆ ಲಗೇಜ್​ನಲ್ಲಿ ಗಾಂಜಾ ಸಿಕ್ಕಿದೆ. ಕವರ್​ನಲ್ಲಿ ಪ್ಯಾಕ್ ಮಾಡಿ ಲಗೇಜ್ ಮಧ್ಯೆ ಗಾಂಜಾ ಇರಿಸಲಾಗಿತ್ತು. ಗಾಂಜಾ ಸಮೇತ ಆರೋಪಿಯನ್ನ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈಡ್ರೋಪೋನಿಕ್ ಗಾಂಜಾಗೆ ಭಾರೀ ಬೆಲೆ ಇದೆ. ಸೂರ್ಯನ ಕಿರಣಗಳು ಬೀಳದೆ ಶೀತ ಪ್ರದೇಶದಲ್ಲಿ ಈ ಗಾಂಜಾವನ್ನ ಬೆಳೆಯಲಾಗುತ್ತೆ. ಫಸ್ಟ್ ಕ್ವಾಲಿಟಿ ಗಾಂಜಾ ಎಂದು ಹೈಡ್ರೋಪೋನಿಕ್ ಗಾಂಜಾ ಮಾರುಕಟ್ಟೆಯಲ್ಲಿ ಹೆಸರು ಪಡೆದಿದೆ. ಶ್ರೀಮಂತರು ಹೆಚ್ಚಾಗಿ ಇದನ್ನು ಖರೀದಿಸುತ್ತಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:16 am, Sat, 20 July 24