ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ಹಣಕೊಡದ ಸರ್ಕಾರ: ಸಿದ್ದರಾಮಯ್ಯ ಟೀಕೆ
ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ಸ್ಥಳ ಹಾಗೂ ಜನ್ಮಸ್ಥಳದ ಅಭಿವೃದ್ಧಿಗೆ ₹ 270 ಕೋಟಿ ರೂಪಾಯಿ ನೀಡಿದ್ದೆ. ಈ ಸರ್ಕಾರ ಬಾಕಿ ₹ 50 ಕೋಟಿ ನೀಡಿಲ್ಲ. ಹೀಗಾಗಿ ಕಾಮಗಾರಿ ಸ್ಥಗಿತವಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಸಂಗೊಳ್ಳಿರಾಯಣ್ಣ ಕಂಚಿನ ಪ್ರತಿಮೆಯನ್ನು ಇಂದು ಶುಕ್ರವಾರ ಉದ್ಘಾಟಿಸಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಎಸ್. ರಾಮಪ್ಪ ಸಿದ್ದರಾಮಯ್ಯ ಸಾಥ್ ನೀಡಿದರು.
ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ದೇಶ ಕಂಡ ಮಹಾನ್ ದೇಶ ಪ್ರೇಮಿ. ಬ್ರಿಟಿಷರ ವಿರುದ್ಧ ಹೋರಾಟದ ದಿಟ್ಟ ಶಕ್ತಿ ರಾಯಣ್ಣ. ಕಿತ್ತೂರ ಸಂಸ್ಥಾನದ ರಕ್ಷಣೆಗೆ ಪ್ರಾಣದ ಹಂಗು ತೊರೆದು ಹೋರಾಡಿದಾತ. ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಿತ್ತೂರ ರಾಣಿ ಚನ್ನಮ್ಮರಿಂದ. ನಮ್ಮವರೇ ಕೆಲ ದೇಶ ದ್ರೋಹಗಳಿದ್ದರಿಂದ ಇದನ್ನರಿತ ಬ್ರಿಟಿಷರು ಅವರನ್ನು ಬಳಸಿಕೊಂಡು ಚನ್ನಮ್ಮನ್ನು ಸೋಲಿಸಿದರು. ಇಂತಹ ಕಷ್ಟದ ಕಾಲದಲ್ಲಿ ರಾಯಣ್ಣ ಗುಪ್ತವಾಗಿ ಗೆರಿಲ್ಲಾ ಯುದ್ಧ ಮಾಡಿದ್ದರು. ಸಂಗೊಳ್ಳಿ ರಾಯಣ್ಣ ಕೆರೆಯಲ್ಲಿ ಸ್ನಾನ ಮಾಡುವಾಗ ಬ್ರಿಟಿಷರು ಬಂಧಿಸಿದ್ದರು. ಅವರ ಅಡಗುಸ್ಥಳದ ಮಾಹಿತಿ ನೀಡಿದ್ದು ಸಹ ನಮ್ಮವರೇ ಎಂದು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ನಮ್ಮನ್ನ ಅಗಲಿರಬಹುದು. ಆದರೆ ಅವರ ಆಶಯಗಳು ನಮ್ಮೊಂದಿಗೆ ಇವೆ. ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ಸ್ಥಳ ಹಾಗೂ ಜನ್ಮಸ್ಥಳದ ಅಭಿವೃದ್ಧಿಗೆ ₹ 270 ಕೋಟಿ ನೀಡಿದ್ದೆ. ಗುತ್ತಿಗೆದಾರರ ಈ ಸರ್ಕಾರ ಬಾಕಿ ಹಣ ₹ 50 ಕೋಟಿ ನೀಡಿಲ್ಲ. ಅದಕ್ಕಾಗಿ ಕಾಮಗಾರಿ ಸ್ಥಗಿತವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: ರಾಜ್ಯಪಾಲರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು: ಸಿದ್ದರಾಮಯ್ಯ
ಇದನ್ನೂ ಓದಿ: ಸಿದ್ದರಾಮಯ್ಯ ತಮ್ಮ 5 ವರ್ಷ ಕಾಲ ಆಡಳಿತದಲ್ಲಿ ಏನೂ ಮಾಡದಿದ್ದಕ್ಕೆ ಹೀಗೆ ಮಾತಾಡ್ತಿದ್ದಾರೆ ಎಂದ ಡಿಸಿಎಂ ಕಾರಜೋಳ
(Sangolli Rayanna is the greatest patriot ever seen says Siddaramaiah in Davangere)
Published On - 4:49 pm, Fri, 2 April 21