ರಾಜ್ಯಪಾಲರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು: ಸಿದ್ದರಾಮಯ್ಯ​

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಹಿರಿಯ ಸಚಿವರಾದ ಕೆ.ಎಸ್​. ಈಶ್ವರಪ್ಪ ಅವರು ಗಂಭೀರ ಸ್ವರೂಪದ್ದಾಗಿದ್ದು, ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಸಿಎಂ ಅವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ರಾಜ್ಯಪಾಲರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು: ಸಿದ್ದರಾಮಯ್ಯ​
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
shruti hegde
| Updated By: Skanda

Updated on: Apr 01, 2021 | 12:24 PM

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಹಿರಿಯ ಸಚಿವರಾದ ಕೆ.ಎಸ್​. ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ರಾಜ್ಯದ ಆಡಳಿತ ಕುಸಿದು ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಸಿಎಂ ಅವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟರ್​ನಲ್ಲಿ​ ಹಂಚಿಕೊಂಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮಗಳ ಬಗ್ಗೆ ವಿಪಕ್ಷಗಳು ಆರೋಪ ಮಾಡುತ್ತಿದ್ದವು. ನಮ್ಮ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯ ಒದಗಿಸಿದ್ದಾರೆ. ಸಚಿವ ಈಶ್ವರಪ್ಪ ಯಾವುದೇ ಒತ್ತಡಕ್ಕೆ ಮಣಿಯಬಾರದು. ಈಶ್ವರಪ್ಪನವರು ಅವರ ಮಾತಿಗೆ ಬದ್ಧರಾಗಿ ಇರಬೇಕು ಎಂದು ಟ್ವೀಟ್​ನಲ್ಲಿ ಆಗ್ರಹಿಸಿದ್ದಾರೆ.

ಸಿಎಂ ವಿರುದ್ಧ ಹೈಕಮಾಂಡ್‌ಗೆ ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿ ಕೆ.ಎಸ್​ ಈಶ್ವರಪ್ಪ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ. ಇಂತಹ ಸಂದೇಶ ಸಾರಿದ್ದಕ್ಕೆ ಈಶ್ವರಪ್ಪಗೆ ಅಭಿನಂದನೆ ಎಂದು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳು ಕೇವಲ ಗ್ರಾಮೀಣಾಭಿವೃದ್ದಿ ಇಲಾಖೆಗೆ ಮಾತ್ರ ಸಂಬಂಧಿಸಿದ್ದಲ್ಲ. ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಇದೆ. ಪ್ರತಿ ಇಲಾಖೆಯಲ್ಲಿಯೂ ಇಂತಹ ಕರ್ಮಕಾಂಡ ನಡೀತಿದೆ. ಬಿಜೆಪಿ ವರಿಷ್ಠರು ಸಚಿವ ಕೆ.ಎಸ್​ ಈಶ್ವರಪ್ಪ ಬಾಯಿ ಮುಚ್ಚಿಸದೆ ಇತರೆ ಸಚಿವರು ಅಭಿಪ್ರಾಯ ತಿಳಿಸಲು ಅವಕಾಶ ನೀಡಲಿ. ಬಿಜೆಪಿ ಹೈಕಮಾಂಡ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈಶ್ವರಪ್ಪ ಕೇವಲ ರಾಜ್ಯಪಾಲರಿಗೆ ಮಾತ್ರ ಪತ್ರ ಸಲ್ಲಿಸದೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷರಿಗೆ ಪತ್ರ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು. ರಾಜ್ಯ ಸರ್ಕಾರದ‌ ಖಜಾನೆ ಖಾಲಿಗೆ ಕೊರೊನಾ ಕಾರಣವಲ್ಲ. ರಾಜ್ಯ ಸರ್ಕಾರಕ್ಕೆ ಅಂಟಿರುವ ಭ್ರಷ್ಟಾಚಾರದ ವೈರಸ್ ಕಾರಣ. ಇದು ಈಶ್ವರಪ್ಪನವರ ಸಂಶೋಧನೆ ಮೂಲಕ ಬಹಿಂಗವಾಗಿದೆ ಎಂದು ಬರೆದು ಲೇವಡಿ ಮಾಡಿದ್ದಾರೆ.

ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದಿದ್ದರು. ಈ ರೀತಿಯಾಗಿ ಆರೋಪಿಸಿದ್ದ ಪ್ರಧಾನಿ ಮೋದಿಯವರೇ, ನಿಮ್ಮ ಸಚಿವರು ನಿಮಗೆ ಕಳಿಸಿರುವ ರಾಜ್ಯ ಸರ್ಕಾರದ ಜಾತಕ ಪತ್ರವನ್ನು ಪರಿಶೀಲನೆ ಮಾಡಿ, ನೀವೇ ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರದ ರೇಟಿಂಗ್ ನೀಡಿ ಎಂದು ಹೇಳಿದೆ. ಮೋದಿ ‘ನಾ ಖಾವುಂಗಾ, ನಾ ಖಾನೆ ದೂಂಗಾ’ ಎನ್ನುತ್ತಿದ್ದರು. ‘ನಾನು ತಿನ್ನಲ್ಲ, ತಿನ್ನುವುದಕ್ಕೂ ಬಿಡಲ್ಲ’ವೆಂದು ಹೇಳುತ್ತಿದ್ದರು. ಅದನ್ನೀಗ ‘ಮೈ ಬಿ ಖಾವೂಂಗಾ, ತುಮ್ ಬಿ ಖಾವೋ’ ಅಂದರೆ, ‘ನಾನೂ ತಿನ್ನುತ್ತೇನೆ, ನೀವೂ ತಿನ್ನಿ’ ಎಂದು ಬದಲಾಯಿಸಿ ಬಿಡಿ ಎಂದು ಲೇವಡಿ ಮಾಡಿದ್ದಾರೆ.

ಆಪರೇಷನ್ ಕಮಲ‌ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ನೀಡಿರುವುದು,ರಾಜ್ಯದ ಸರ್ಕಾರ ಆಪರೇಷನ್ ಕಮಲ ಎಂಬ‌ ಅನೈತಿಕ ಚಟುವಟಿಕೆಯ ಅಕ್ರಮ ಶಿಶು ಎನ್ನುವ ನಮ್ಮ ಆರೋಪವನ್ನು ಪುಷ್ಠೀಕರಿಸಿದೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಇನ್ನೊಂದು ಟ್ವೀಟ್​​ ಹಂಚಿಕೊಂಡಿದ್ದು, ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾದ ಆಪರೇಷನ್ ಕಮಲ‌ ಕಾರ್ಯಾಚರಣೆಯಲ್ಲಿ ವಿನಿಮಯಗೊಂಡ ಕೋಟ್ಯಂತರ ರೂಪಾಯಿಗಳ ಆಮಿಷದ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರದ ಕೇಸ್ ದಾಖಲಿಸಿಕೊಂಡು ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ: ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್

ತಾರರಕ್ಕೇರಿತು ಬಿಜೆಪಿ-ಕಾಂಗ್ರೆಸ್​ ಟ್ವೀಟ್ ಸಮರ: ಬಣ ರಾಜಕೀಯ ಪ್ರಸ್ತಾಪಿಸಿದ ಎರಡೂ ಪಕ್ಷಗಳು