ಕರಾವಳಿಯಲ್ಲಿ ಮತ್ತೆ ಸಕ್ರಿಯವಾದ ಸ್ಯಾಟ್​ಲೈಟ್​ ಫೋನ್​!

ಕಳೆದ 10 ದಿನಗಳಲ್ಲಿ 3 ಬಾರಿ ಸ್ಯಾಟ್​ಲೈಟ್ ಫೋನ್​  ಬಳಕೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್​ ಲಭ್ಯವಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಕರಾವಳಿಯಲ್ಲಿ ಮತ್ತೆ ಸಕ್ರಿಯವಾದ ಸ್ಯಾಟ್​ಲೈಟ್​ ಫೋನ್​!
ಸ್ಯಾಟಲೈಟ್​ ಫೋನ್​ (ಪೈಲ್​ ಫೋಟೋ )
Edited By:

Updated on: Jan 18, 2021 | 4:23 PM

ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ 6 ತಿಂಗಳಿಂದ ಸೈಲೆಂಟಾಗಿದ್ದ ಸ್ಯಾಟ್​ಲೈಟ್​ ಫೋನ್​ಗಳು ಈಗ ಮತ್ತೆ ಆ್ಯಕ್ಟಿವ್​ ಆಗಿವೆ. ದಕ್ಷಿಣ ಕನ್ನಡದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್​ ಟ್ರೇಸ್​ ಆಗಿದ್ದು, ಈ ವಿಚಾರ ಆತಂಕ ಮೂಡಿಸಿದೆ.

ಕಳೆದ 10 ದಿನಗಳಲ್ಲಿ 3 ಬಾರಿ ಸ್ಯಾಟ್​ಲೈಟ್ ಫೋನ್​  ಬಳಕೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್​ ಲಭ್ಯವಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಗುಪ್ತಚರ ಏಜೆನ್ಸಿ RAW ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡುತ್ತಿದೆ.

ತುರಾಯಾ ಸ್ಯಾಟಲೈಟ್ ಫೋನ್ ಬಳಕೆ ಆಗಿದೆ. ನಿಗೂಢ ವ್ಯಕ್ತಿಗಳೊಂದಿಗೆ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ. ಈ ಬೆಳವಣಿಗೆಯಿಂದ ಸೈಲೆಂಟ್ ಆಗಿದ್ದ ಸ್ಲೀಪರ್ ಸೆಲ್​ಗಳು ಮತ್ತೆ ಆಕ್ಟಿವ್ ಆಗಿದ್ದಾರೆಯೇ ಎನ್ನುವ ಶಂಕೆಯನ್ನು ಇದು ಮೂಡಿಸಿದೆ.

ಸ್ಯಾಟಲೈಟ್​ ಫೋನ್​ಗಳ ನಡುವೆ ನಡೆವ ಸಂವಾದ ಟ್ರೇಸ್​ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಸ್ಯಾಟಲೈಟ್​ ಫೋನ್​ಗಳು ಉಗ್ರ ಚಟುವಟಿಕೆಗೆ ಹೆಚ್ಚು ಬಳಕೆ ಆಗುತ್ತದೆ. ಭಾರತದಲ್ಲಿ ಇದರ ಬಳಕೆಗೆ ಅವಕಾಶವಿಲ್ಲ. ಕೆಲವೊಮ್ಮೆ ವಿದೇಶಿ ಪ್ರವಾಸಿಗರು ಸ್ಯಾಟಲೈಟ್​ ಫೋನ್​ ಬಳಕೆ ಮಾಡಿರುವ ಸಾಧ್ಯತೆಯೂ ಇರುತ್ತದೆ.

ಜಪಾನ್​ ನೆಲದಿಂದ ಆಗಸಕ್ಕೆ ಚಿಮ್ಮಲಿದೆ ‘‘ಮರದ’’ ಸ್ಯಾಟಲೈಟ್!

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us