ಹಾಸನ: ಆಸ್ತಿ ವಿಚಾರಕ್ಕೆ ಬಡಿದಾಡಿಕೊಂಡು ನಾಲ್ವರ ಕೊಲೆ ಪ್ರಕರಣ; ಗಲಾಟೆ ವಿಡಿಯೋ ವೈರಲ್

ಹೊಲದ ಬಳಿ ಕೊಲೆಯಾದವರ ನಡುವೆ ದೊಡ್ಡ ಗಲಾಟೆಯಾಗಿತ್ತು. ಮೇ 24 ರ ಸೋಮವಾರ ಮಧ್ಯಾಹ್ನ ನಡೆದಿದ್ದ ಘಟನೆಯ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಪಾಪಣ್ಣ ಎಂಬಾತ ಕೈಯಲ್ಲಿ ಚಾಕು ಹಿಡಿದು ಎಲ್ಲೆಡೆ ಓಡಾಡಿ ಮನಸೋ ಇಚ್ಛೆಯಂತೆ ಮೂವರಿಗೆ ಚುಚ್ಚಿದ್ದ.

ಹಾಸನ: ಆಸ್ತಿ ವಿಚಾರಕ್ಕೆ ಬಡಿದಾಡಿಕೊಂಡು ನಾಲ್ವರ ಕೊಲೆ ಪ್ರಕರಣ; ಗಲಾಟೆ ವಿಡಿಯೋ ವೈರಲ್
ಪಾಪಣ್ಣ
Follow us
sandhya thejappa
|

Updated on: May 30, 2021 | 10:47 AM

ಹಾಸನ: ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ನಾಲ್ವರು ಕೊಲೆಯಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೋಡನಹಳ್ಳಿಯಲ್ಲಿ ನಡೆದಿತ್ತು. ಹೊಲದ ಬಳಿ ನಡೆದ ಗಲಾಟೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಮಲ್ಲೇಶ್(55), ರವಿ(35), ಮಂಜೇಶ್ (27) ಮತ್ತು ಪಾಪಣ್ಣ ಎಂಬುವವರು ಸಾವನ್ನಪ್ಪಿದ್ದರು.

ಹೊಲದ ಬಳಿ ಕೊಲೆಯಾದವರ ನಡುವೆ ದೊಡ್ಡ ಗಲಾಟೆಯಾಗಿತ್ತು. ಮೇ 24 ರ ಸೋಮವಾರ ಮಧ್ಯಾಹ್ನ ನಡೆದಿದ್ದ ಘಟನೆಯ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಪಾಪಣ್ಣ ಎಂಬಾತ ಕೈಯಲ್ಲಿ ಚಾಕು ಹಿಡಿದು ಎಲ್ಲೆಡೆ ಓಡಾಡಿ ಮನಸೋ ಇಚ್ಛೆಯಂತೆ ಮೂವರಿಗೆ ಚುಚ್ಚಿದ್ದ. ಪೊಲೀಸರ ಎದುರೇ ಈ ಘಟನೆ ನಡೆದಿತ್ತು. ಗಲಾಟೆಯಲ್ಲಿ ಮೂವರು ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪಾಪಣ್ಣ ಕೂಡ ಅಂದೇ ಮೃತಪಟ್ಟಿದ್ದ. ಈ ಘಟನೆಯ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದರು.

ಚಿರತೆ ಭಯ ಬಾಗಲಕೋಟೆ: ಜಮಖಂಡಿ ತಾಲೂಕಿನ ಕುಂಬಾರಹಳ್ಳ ತೋಟದ ವಸತಿ ಪ್ರದೇಶದಲ್ಲಿ ಚಿರತೆ ಕಂಡುಬಂದಿದ್ದು, ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಮೊನ್ನೆ ರಾತ್ರಿ ನಿಂಗಪ್ಪ ಹೆಗಡೆ ಎಂಬುವರ ನಾಯಿಯನ್ನು ಚಿರತೆ ತಿಂದು ಹಾಕಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಕ್ಯಾಮರಾದಲ್ಲಿ ಚಿರತೆ ಕಂಡುಬಂದಿದೆ. ಹೊಲದಲ್ಲಿ ಬೋನನ್ನು ಇಟ್ಟು ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ಹೇಳಿದ್ದಾರೆ.

ಇದನ್ನೂ ಓದಿ

ಏಪ್ರಿಲ್​-ಮೇ ತಿಂಗಳಿನಲ್ಲಿ ಪ್ರಯಾಣಿಕರ ದಟ್ಟಣೆ ಕುಸಿತ; ಸಾಮಾನ್ಯ ರೈಲುಗಳು ಬಹುತೇಕ ಅರ್ಧದಷ್ಟು ಕಡಿಮೆ

ರೌಡಿಶೀಟರ್ ಹತ್ಯೆಗೆ ಯೋಜನೆ ರೂಪಿಸಿದ್ದ ಗುಂಪನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು

(Scandal over property issues in hassan has gone viral on social media)