ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸದ ಪ್ರತಾಪ್​​​ ಸಿಂಹ ಮೊದಲ ಟ್ವೀಟ್ ಹೀಗಿದೆ

ಲೋಕಸಭೆ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಕಂಡುಬಂದಿದೆ. ಅವರಲ್ಲಿ ಇಬ್ಬರೂ ಮೈಸೂರಿನವರು ಎಂದು ತಿಳಿದುಬಂದಿದೆ. ಜೊತೆಗೆ ಮೈಸೂರು ಸಂಸದ ಪ್ರತಾಪ್​​​ ಸಿಂಹ ಪಿಎ ಈ ಇಬ್ಬರಿಗೆ ಎಂಟ್ರಿ ಪಾಸ್​​ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇದರ ಬೆನ್ನಲೇ ಪ್ರತಾಪ್​​​ ಸಿಂಹ ಟ್ವೀಟ್ ಮಾಡಿದ್ದು, ಸೋಮವಾರ ವಿದ್ಯಾವರ್ಧಕ ಕಾಲೇಜಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳೊಂದಿಗೆ ಎಂದು ಬರೆದುಕೊಂಡಿದ್ದಾರೆ.

ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸದ ಪ್ರತಾಪ್​​​ ಸಿಂಹ ಮೊದಲ ಟ್ವೀಟ್ ಹೀಗಿದೆ
ವಿದ್ಯಾರ್ಥಿಗಳೊಂದಿಗೆ ಸಂಸದ ಪ್ರತಾಪ್​​​ ಸಿಂಹ
Updated By: ಗಂಗಾಧರ​ ಬ. ಸಾಬೋಜಿ

Updated on: Dec 13, 2023 | 8:08 PM

ಬೆಂಗಳೂರು, ಡಿಸೆಂಬರ್​​ 13: ಲೋಕಸಭೆ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಕಂಡುಬಂದಿದೆ. ಸಂಸತ್ ಭವನಕ್ಕೆ ಐವರು ಆರೋಪಿಗಳು ಬಂದಿದ್ದ ಬಗ್ಗೆ ಮಾಹಿತಿ ಇದೆ. ಅವರಲ್ಲಿ ಇಬ್ಬರೂ ಮೈಸೂರಿನವರು ಎಂದು ತಿಳಿದುಬಂದಿದೆ. ಜೊತೆಗೆ ಮೈಸೂರು ಸಂಸದ ಪ್ರತಾಪ್​​​ ಸಿಂಹ ಪಿಎ ಈ ಇಬ್ಬರಿಗೆ ಎಂಟ್ರಿ ಪಾಸ್​​ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸದ ಪ್ರತಾಪ್​​​ ಸಿಂಹ (Pratap Simha) ಅವರನ್ನು ಸಹ ವಿಚಾರಣೆಗೆ ಒಳಪಡಿಸಿ ಎಂದು ರಾಜ್ಯ ನಾಯಕರು ಹೇಳಿದ್ದು, ಮತ್ತೊಂದೆಡೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಸದ್ಯ ಇದರ ಬೆನ್ನೆಲೆ ಸಂಸದ ಪ್ರತಾಪ್​​​ ಸಿಂಹ ಟ್ವೀಟ್​ ಮಾಡಿದ್ದಾರೆ.

ಲೋಕಸಭೆ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಇದರಲ್ಲಿ ಸಂಸದ ಪ್ರತಾಪ್​​​ ಸಿಂಹ ಹೆಸರು ಕೂಡ ಕೇಳಿಬಂದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ವಿದ್ಯಾರ್ಥಿಗಳೊಂದಿಗಿನ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ‘ಸೋಮವಾರ ವಿದ್ಯಾವರ್ಧಕ ಕಾಲೇಜಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳೊಂದಿಗೆ’ ಎಂದು ಬರೆದುಕೊಂಡಿದ್ದಾರೆ. ಮೈಸೂರಿನ ಇಬ್ಬರಿಗೆ ಎಂಟ್ರಿ ಪಾಸ್​ ಬಗ್ಗೆ ಸಂಸದ ಪ್ರತಾಪ್​​​ ಸಿಂಹ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಸದ ಪ್ರತಾಪ್​​​ ಸಿಂಹ ಟ್ವೀಟ್

ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇಬ್ಬರು ಯುವಕರು ಲೋಕಸಭೆಗೆ ನುಗ್ಗಿರೋದು ಆತಂಕ ಸೃಷ್ಟಿಸಿತ್ತು. ಹೀಗೆ ಲೋಕಸಭೆಯಲ್ಲಿ ಆತಂಕ ಸೃಷ್ಟಿಸಿದ್ದವರ ಪೈಕಿ ಒಬ್ಬ ಸಾಗರ್​ ಶರ್ಮಾ ಆಗಿದ್ದರೆ, ಮತ್ತೋರ್ವ ಮೈಸೂರು ಮೂಲದ ವಿದ್ಯಾರ್ಥಿ ಮನೋರಂಜನ್ ಅಂತ ಹೇಳಲಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ಪಿಎ ಮೂಲಕ ಈ ಇಬ್ಬರು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಗೆ ಎಂಟ್ರಿ ಕೊಟ್ಟಿದ್ದರು ಅನ್ನೋ ಮಾಹಿತಿ ಕೂಡ ಇದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾಲೋಪ: ಕಲಾಪದೊಳಗೆ ನುಗ್ಗಿದ್ದವರ ಗುರುತು ಪತ್ತೆ, ಪ್ರತಾಪ್​​​ ಸಿಂಹ ಪಿಎ ಕಡೆಯಿಂದ ಪಾಸ್

ಲೋಕಸಭೆಗೆ ನುಗ್ಗಿದ ಸಾಗರ್​ ಶರ್ಮಾ, ಮನೋರಂಜನ್​ ತಾವು ಧರಿಸಿದ್ದ ಶೂನಲ್ಲಿ ಕಲರ್​ ಸ್ಪ್ರೇ ಇಟ್ಕೊಂಡು ಹೋಗಿದ್ರಂತೆ. ಪಕ್ಕಾ ಪ್ಲ್ಯಾನ್​ ಮಾಡಿಕೊಂಡು ಒಮ್ಮೆಲೆ ಸ್ಪೋಕ್​ ಎಸೆದಿದ್ದಾರೆ. ಕಲರ್​ ಸ್ಮೋಕ್​ ಎಲ್ಲೆಡೆ ಹರಡುತ್ತಿದ್ದಂತೆ ಕೆಲ ಸಂಸದರು ಎದ್ನೋ ಬಿದ್ನೋ ಅಂತ ಓಡಿ ಹೋದ್ರೆ, ರಾಹುಲ್​ ಗಾಂಧಿ, ಮುನಿಸ್ವಾಮಿ ಸೇರಿ ಹಲವು ಸಂಸದರು ಆತಂಕದಲ್ಲೇ ನಿಂತಿದ್ದು ಕಂಡುಬಂದಿತ್ತು. ಕೂಡಲೇ ಕಲರ್​ ಸ್ಪ್ರೇ ಹಾಕಿದ್ದವರನ್ನ ಸಂಸದರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಇಬ್ಬರನ್ನ ದೆಹಲಿ ಪೊಲೀಸರು ಬಂಧಿಸಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ದೆಹಲಿ ಕ್ರೈಂ ಬ್ರಾಂಚ್​ನಿಂದ ಪ್ರಕರಣದ ತನಿಖೆ ಮಾಡಲಾಗ್ತಿದ್ದು, ಮಹಾರಾಷ್ಟ್ರ ಹಾಗೂ ಹರಿಯಾಣ ಪೊಲೀಸರನ್ನ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:55 pm, Wed, 13 December 23