ಹಿರಿಯ ಪತ್ರಕರ್ತ ಮೊದಲಿಯಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ

ವಿದ್ಯಾರ್ಥಿ ಜೀವನದಿಂದಲೇ ಪತ್ರಿಕೆಗೆ ಬರೆಯುವ ಮೂಲಕ ಒಂದಿಷ್ಟು ಸಂಪಾದನೆ ಮಾಡಿಕೊಂಡು ಓದು ಮುಂದುವರಿಸಿಕೊಂಡು ಬಂದಿದ್ದು, ಮುಂದೆ ಪತ್ರಕರ್ತನಾಗುವ ಅವಕಾಶವನ್ನು ನೀಡಿತು. ಹಾಗಾಗಿ ನಾಲ್ಕು ದಶಕಗಳ ಕಾಲ ಸಂಯುಕ್ತ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಅವರು ಹೇಳಿದರು.

ಹಿರಿಯ ಪತ್ರಕರ್ತ ಮೊದಲಿಯಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ
ಹಿರಿಯ ಪತ್ರಕರ್ತ ಮೊದಲಿಯಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ
Follow us
ವಿವೇಕ ಬಿರಾದಾರ
|

Updated on: Apr 13, 2024 | 7:36 AM

ಬೆಂಗಳೂರು, ಏಪ್ರಿಲ್​ 13: ಎಂಥಹ ಕಠಿಣ ಪರಿಸ್ಥಿತಿಗಳು ಎದುರಾದರೂ ಪತ್ರಕರ್ತರು ತಮ್ಮ ನಿಲುವನ್ನು ಸಡಿಲಿಸಬಾರದು. ಅದು ನಾವೇ ಕಂಕಣ ಪಡೆದುಕೊಂಡು ಮಾಧ್ಯಮ ವೃತ್ತಿಗೆ ನೀಡುವ ಗೌರವ ಎಂದು ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಅವರು ಅಭಿಪ್ರಾಯಪಟ್ಟರು.

ಮಲ್ಲತ್ತಳ್ಳಿಯಲ್ಲಿರುವ ಅವರ ಮನೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯು.ಡಬ್ಲ್ಯೂ.ಜೆ) ಹಮ್ಮಿಕೊಂಡ ಮನೆಯಂಗಳದಲ್ಲಿ ಮನದುಂಬಿ ನಮನ ಸಮಾರಂಭದಲ್ಲಿ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಿಂದಲೇ ಪತ್ರಿಕೆಗೆ ಬರೆಯುವ ಮೂಲಕ ಒಂದಿಷ್ಟು ಸಂಪಾದನೆ ಮಾಡಿಕೊಂಡು ಓದು ಮುಂದುವರಿಸಿಕೊಂಡು ಬಂದಿದ್ದು, ಮುಂದೆ ಪತ್ರಕರ್ತನಾಗುವ ಅವಕಾಶವನ್ನು ನೀಡಿತು. ಹಾಗಾಗಿ ನಾಲ್ಕು ದಶಕಗಳ ಕಾಲ ಸಂಯುಕ್ತ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.

ಸವಾಲುಗಳ ನಡುವೆಯೇ ಪತ್ರಕರ್ತರು ಕೆಲಸ ಮಾಡಬೇಕಿದೆ. ಪತ್ರಕರ್ತರು ಯಾವುದೇ ರೀತಿಯಲ್ಲೂ ತಮ್ಮ ವ್ಯಕ್ತಿತ್ವಕ್ಕೆ ಕುಂದುಂಟಾಗುವ ರೀತಿಯಲ್ಲಿ ನಡೆದುಕೊಂಡರೆ ಎಲ್ಲೂ ಕೂಡಾ ಗುರುತಿಸಿಕೊಳ್ಳುವುದು ಅಸಾಧ್ಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಾಧ್ಯಕ್ಷ ಹೀಗೆ ವಿವಿಧ ಹುದ್ದೆಗಳನ್ನು ವಹಿಸಿಕೊಂಡು ಸಂಘಟನಾತ್ಮಕ ಕಾರ್ಯಗಳನ್ನು ವಿವಿಧ ಸವಾಲುಗಳ ಮಧ್ಯೆ ಹತ್ತಾರು ವರ್ಷಗಳ ಕಾಲ ನಿರ್ವಹಿಸಿರುವುದು ತೃಪ್ತಿ ಕೊಟ್ಟಿದೆ. ಮಾಧ್ಯಮ ಅಕಾಡೆಮಿಯ ಸೇವೆಗೂ ಕೆಯುಡಬ್ಲೂೃಜೆ ಕಾರಣ. ನನ್ನ ಸೇವೆ ಗುರುತಿಸಿ ಟಿ.ಎಸ್.ಆರ್. ಪ್ರಶಸ್ತಿ ಸೇರಿದಂತೆ ಸರ್ಕಾರದ ವಿವಿಧ ಉನ್ನತ ಸ್ಥಾನಮಾನಗಳು ತನ್ನನ್ನು ಹುಡುಕಿಕೊಂಡು ಬಂದಿವೆ ಎಂದೂ ಅವರು ಅಭಿಪ್ರಾಯಪಟ್ಟರು.

ಶಿವಾನಂದ ತಗಡೂರು ಅವರು ಅಧ್ಯಕ್ಷರಾದ ಮೇಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹೊಸ ರೂಪ ಪಡೆದು, ಕ್ರಿಯಾಶೀಲವಾಗಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ತಕ್ಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಗಂಗಾಧರ ಮೊದಲಿಯಾರ್‌ರವರು ಸಿನಿಮಾ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಅವರು ಪತ್ರಿಕೋದ್ಯಮದ ಜೊತೆ ಜೊತೆಗೇ 18 ಸಾಹಿತ್ಯ ಕೃತಿಗಳನ್ನು ರಚಿಸಿರುವುದು ಅವರ ನೈಜ ಸಾಮರ್ಥ್ಯಕ್ಕೆ ಸಾಕ್ಷಿ, ಅಷ್ಟೇ ಅಲ್ಲದೇ, ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಿಷ್ಠೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಎಂದರು. ಮೊದಲಿಯಾರ ಅವರೊಳಗೊಬ್ಬ ಪತ್ರಕರ್ತ, ಸಂಘಟಕ ಅಷ್ಟೆ ಅಲ್ಲ, ಸಾಹಿತಿಯೂ ಇದ್ದಾನೆ ಎಂದರು.

ಹಿರಿಯ ಪತ್ರಕರ್ತರಾದ ಕಂ.ಕ. ಮೂರ್ತಿ ಮಾತನಾಡಿ, ಕೆ.ಯು.ಡಬ್ಲ್ಯೂ.ಜೆ. ಕಳೆದ ಹಲವಾರು ವರ್ಷಗಳಿಂದ ಪತ್ರಕರ್ತರಿಗೆ ಸಂಪರ್ಕ ಸೇತುವೆಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಪದಾಧಿಕಾರಿಗಳ ನಿಸ್ವಾರ್ಥ ಮನೋಭಾವವೇ ಕಾರಣ. ಅಷ್ಟೇ ಅಲ್ಲದೇ, ಸಂಘವು ರಾಜ್ಯದಾದ್ಯಂತ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಬಾಂಧವ್ಯ ಬೆಸೆಯುವ ಕೊಂಡಿಯಂತೆ ತನ್ನ ಬದ್ದತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಂಡಿರುವುದು ಅಭಿನಂದನಾರ್ಹ. ಕೆಯುಡಬ್ಲೂಜೆ ಕ್ರೀಯಾಶೀಲತೆ ವೃತ್ತಿನಿಷ್ಠ ಪತ್ರಕರ್ತರ ಪಾಲಿಗೆ ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಗಂಗಾಧರ ಮೊದಲಿಯಾರ್ ಅವರ ಪತ್ನಿ ಮಾಳವಿಕಾ ಅವರನ್ನು ಸಮಾರಂಭದಲ್ಲಿ ಗೌರವಹಿಸಲಾಯಿತು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸ್ವಾಗತಿಸಿದರು. ಕೊನೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದನಾರ್ಪಣೆ ಮಾಡಿದರು. ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್.ದೇವರಾಜ್, ನಗರ ಘಟಕದ ಶಿವರಾಜ್, ಶರಣ ಬಸಪ್ಪ ಹಾಜರಿದ್ದರು.

ಚಿನ್ನದ ಪದಕದ ವಿದ್ಯಾರ್ಥಿಯಾಗಿದ್ದೆ…

ಮೈಸೂರಿನಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಕನ್ನಡ ಮುಗಿಸಿದ್ದ ಗಂಗಾಧರ ಮೊದಲಿಯಾರ್ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ 1976ರಲ್ಲಿ ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದವರು. ಅಲ್ಲಿ ನಾಲ್ಕು ವರ್ಷ ವೃತ್ತಿ ಅನುಭವ ಗಳಿಸಿ, ಪ್ರಜಾವಾಣಿ ಬಳಗದಲ್ಲಿ ಸುಮಾರು ನಾಲ್ಕು ದಶಕಗಳ ಕಾಲದ ಸುದೀರ್ಘಾವಧಿ ಸೇವೆ ಸಲ್ಲಿಸಿದವರು. ತುಮಕೂರಿನಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಬರೆದ ವರದಿಗಳ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಡಳಿತ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಅವರು ನೆನಪಿಸಿಕೊಂಡರು.

ರಾಜ್‌ಕುಮಾರ್ ಮೂಗಿನ ಸುದ್ದಿ ವಿವಾದ…

ಸಿನಿಮಾ ಕುರಿತು ಬರೆದ ವರದಿ ಮಿಸ್ ಫೈರ್ ಆಗಿ ಡಾ. ರಾಜ್ ಕುಟುಂಬದಿಂದ ಸಂಕಷ್ಟಕ್ಕೂ ಗುರಿಯಾದೆ. ತಾನು ರಾಜ್‌ಕುಮಾರ್‌ರವರ ಮೂಗಿನ ಕುರಿತು ಟೀಕಿಸಿ ಬರೆದಿಲ್ಲ, ಬಸವಣ್ಣ ಸಿನಿಮಾಗೆ ಬೇರೊಬ್ಬ ನಟನ ಮೂಗಿನ ಕುರಿತಾಗಿ ಬರೆದದ್ದನ್ನು ಡಾ. ರಾಜ್ ಬಳಗದ ಕೆಲವರು ಅವರ ಬಗ್ಗೆ ಬರೆದದ್ದೆಂದು ತಪ್ಪಾಗಿ ಅರ್ಥೈಸಿ ತನಗೆ ಪ್ರಾಣ ಬೆದರಿಕೆಯ ತೊಂದರೆಕೊಟ್ಟರು. ಆದರೆ ಆಗ ತಾನು ಕಾರ್ಯನಿರ್ವಹಿಸಿದ್ದ ಪತ್ರಿಕಾ ಸಂಸ್ಥೆಯ ಮಾಲಿಕರು ತನ್ನ ಜೊತೆ ನಿಂತು, ಧೈರ್ಯ ತುಂಬಿದ ನಿಲುವನ್ನು ಮೊದಲಿಯಾರ್‌ರವರು ತಮ್ಮ ವೃತ್ತಿ ಜೀವನದ ಮರೆಯದ ಘಟನೆ ಎಂದು ಹೇಳಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು