ಬಿಸಿಲಿನಿಂದ ಬಳಲುವ ಪ್ರಯಾಣಿಕರ ಬಾಯಾರಿಕೆ ನೀಗಿಸಿ, ಮನಸ್ಸಿಗೆ ಮುದ ನೀಡುವ ಬಿಎಂಟಿಸಿ ಗ್ರೀನ್ ಬಸ್
ಬೆಂಗಳೂರಿನಲ್ಲಿ ಉರಿ ಬಿಸಿಲು ಜನರ ತಲೆ ಸುಡುತ್ತಿದ್ದು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಇನ್ನೂ ಈ ರಣ ಬಿಸಿಲಿನಲ್ಲಿ ಬಸ್ನಲ್ಲಿ ಪ್ರಯಾಣಿಸುವವರ ಸ್ಥಿತಿಯತ್ತು ಸ್ವಲ್ಪ ಕಷ್ಟವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದರೆ ನಿಮ್ಮ ಬಾಯಾರಿಕೆ ನೀಗುತ್ತದೆ. ಮತ್ತು ಬಸ್ನಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.
Updated on: Apr 13, 2024 | 8:44 AM

ಬೆಂಗಳೂರಿನಲ್ಲಿ ಉರಿ ಬಿಸಿಲು ಜನರ ತಲೆ ಸುಡುತ್ತಿದ್ದು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಇನ್ನೂ ಈ ರಣ ಬಿಸಿಲಿನಲ್ಲಿ ಬಸ್ನಲ್ಲಿ ಪ್ರಯಾಣಿಸುವವರ ಸ್ಥಿತಿಯತ್ತು ಸ್ವಲ್ಪ ಕಷ್ಟವೆ. ಆದರೆ ಈ ಬಸ್ನಲ್ಲಿ ಹತ್ತಿದರೆ ನಿಮ್ಮ ಬಾಯಾರಿಕೆ ನೀಗುತ್ತದೆ. ಮತ್ತು ಬಸ್ನಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್ನಲ್ಲಿ ಚಾಲಕ ಲೋಕೇಶ್ Potನಲ್ಲಿ ಹತ್ತಾರು ಗಿಡಗಳನ್ನು ಬೆಳಸಿದ್ದಾರೆ. ನಿತ್ಯ ಗಿಡಗಳಿಗೆ ನೀರನ್ನು ಸ್ಪ್ರೇ ಮಾಡುವ ಮೂಲಕ ಪೋಷಣೆ ಮಾಡುತ್ತಿದ್ದಾರೆ.

ಬಸ್ನ ಗ್ಲಾಸ್ ಮುಂಭಾಗದಲ್ಲಿ ಗಿಡಗಳ ಜೊತೆಗೆ ಬಳ್ಳಿಯನ್ನು ಸಹ ಬೆಳೆಸಿದ್ದು ಬಸ್ ಹತ್ತುವ ಪ್ರಯಾಣಿಕರು ಗಿಡ ಹಾಗೂ ಬಳ್ಳಿಯನ್ನ ಕಂಡು ಪುಲ್ ಖುಷ್ ಆಗುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಸ್ಸಿನಲ್ಲಿ ಈ ರೀತಿ ಚಾಲಕ ಲೋಕೇಶ್ ಗಿಡಗಳನ್ನು ಬೆಳೆಸಿದ್ದು ನಿಲ್ದಾಣದಲ್ಲಿ ಬಸ್ನಿಂತ ಸಮಯದಲ್ಲಿ ಗಿಡಗಳ ಪೋಷಣೆ ಮಾಡುತ್ತಿದ್ದಾರೆ. ಇದೀಗ ರಣ ಬಿಸಿಲಿನಲ್ಲೂ ಗಿಡಗಳು ಬಾಡದಂತೆ ಎಚ್ಚರಿಕೆ ವಹಿಸಿ ಪೋಷಣೆ ಮಾಡುತ್ತಿದ್ದು ಪ್ರಯಾಣದ ವೇಳೆ ಗಿಡಗಳನ್ನು ಕಂಡು ಪ್ರಯಾಣಿಕರು ಖುಷಿ ಪಡುತ್ತಿದ್ದಾರೆ.

ಬಸ್ ಹತ್ತುವ ಪ್ರಯಾಣಿಕರು ಬಿಸಿಲಿನಿಂದ ಬಳಲಿ ಬಯಾರಿರುತ್ತಾರೆ. ರಣ ಬಿಸಿಲಿಗೆ ತಂಪಾದ ನೀರನ್ನು ಬಯಸುತ್ತಿರುತ್ತಾರೆ. ಹೀಗಾಗಿ ಚಾಲಕ ಹಾಗೂ ನಿರ್ವಾಹಕ 40 ಲೀಟರ್ನ ಕುಡಿಯುವ ನೀರಿನ ಕ್ಯಾನ್ ಅನ್ನು ಬಸ್ನಲ್ಲಿಟ್ಟಿದ್ದಾರೆ. ಈಮೂಲಕ ಬಿಸಿಲಿನಲ್ಲಿ ಬರುವ ಪ್ರಯಾಣಿಕರಿಗೆ ನೀರು ನೀಡಿ ದಾಹ ನೀಗಿಸುತ್ತಿದ್ದಾರೆ.

ಒಟ್ಟಾರೆಯಾಗಿ ಬಿಎಂಟಿಸಿ ಬಸ್ನಲ್ಲಿ ಗಿಡ-ಬಳ್ಳಿಯನ್ನು ಬೆಳೆಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಚಾಲಕ-ನಿರ್ವಾಹಕ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.



















