ಶಿಗ್ಗಾಂವಿ ಬೈ ಎಲೆಕ್ಷನ್: ಮೊದಲ ದಿನವೇ 4 ನಾಮಪತ್ರ ಸಲ್ಲಿಕೆ, ಯಾವ ಪಕ್ಷದಿಂದ ಯಾರು?

| Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2024 | 8:57 PM

ನವೆಂಬರ್ 13ಕ್ಕೆ ಮೂರು ಅಖಾಡದಲ್ಲೂ ಮತದಾನ ನಡೆಯಲಿದ್ದು, ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿತಾರೆ ಅನ್ನೋದು ನಿಗೂಢವಾಗಿದೆ. ಈ ಮಧ್ಯೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೊದಲ ದಿನ ಮೂವರು ಅಭ್ಯರ್ಥಿಗಳಿಂದ 4 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಯಾವ ಪಕ್ಷದಿಂದ ಯಾರು ಎಂಬ ಮಾಹಿತಿ ಇಲ್ಲಿದೆ.

ಶಿಗ್ಗಾಂವಿ ಬೈ ಎಲೆಕ್ಷನ್: ಮೊದಲ ದಿನವೇ 4 ನಾಮಪತ್ರ ಸಲ್ಲಿಕೆ, ಯಾವ ಪಕ್ಷದಿಂದ ಯಾರು?
ಶಿಗ್ಗಾಂವಿ ಬೈ ಎಲೆಕ್ಷನ್: ಮೊದಲ ದಿನವೇ 4 ನಾಮಪತ್ರ ಸಲ್ಲಿಕೆ, ಯಾವ ಪಕ್ಷದಿಂದ ಯಾರು?
Follow us on

ಹಾವೇರಿ, ಅಕ್ಟೋಬರ್​ 18: ನವೆಂಬರ್ 13ಕ್ಕೆ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಗೆಲ್ಲೋ ಸೇನಾನಿಗಳನ್ನ ಕಣಕ್ಕಿಳಿಸುವುದಕ್ಕೆ ತೆರೆಮರೆಯಲ್ಲೇ ನಾನಾ ತಂತ್ರಗಾರಿಕೆ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಈ ಮಧ್ಯೆ ಶಿಗ್ಗಾಂವಿ (Shiggaon) ಉಪಚುನಾವಣೆಗೆ ಮೊದಲ ದಿನವೇ ಮೂವರು ಅಭ್ಯರ್ಥಿಗಳಿಂದ 4 ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ಯಾರೆಲ್ಲಾ ನಾಮಪತ್ರ ಸಲ್ಲಿಕೆ

ಹೌದು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೊದಲ ದಿನ ಮೂವರು ಅಭ್ಯರ್ಥಿಗಳಿಂದ 4 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಹಿಂದೂಸ್ಥಾನ ಜನತಾ ಪಕ್ಷದ ಅಭ್ಯರ್ಥಿಯಾಗಿ ಶಿವಕುಮಾರ್ ತಳವಾರ ಎರಡು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: Sandur Bypoll: ಸಂಡೂರು ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಲ್ಲ, ಅಭ್ಯರ್ಥಿಯೂ ಅಲ್ಲ: ಶ್ರೀರಾಮುಲು ಸ್ಪಷ್ಟನೆ

ಸೋಷಿಯಲಿಸ್ಟ್ ಪಾರ್ಟಿ ಅಭ್ಯರ್ಥಿಯಾಗಿ ಖಾಜಾಮೋಹಿದ್ದೀನ್ ಗುಡಗೇರಿ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ರವಿ ಕೃಷ್ಣಾರೆಡ್ಡಿಯಿಂದ ಚುನಾವಣಾಧಿಕಾರಿ ಮೊಹಮ್ಮದ್ ಖಿಜರ್​ಗೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ಶಿಗ್ಗಾಂವಿ ಬೈಎಲೆಕ್ಷನ್​ ಟಿಕೆಟ್​ಗೆ ಬಿಜೆಪಿಯಲ್ಲಿ ಪೈಪೋಟಿ

ಇನ್ನು ಶಿಗ್ಗಾಂವಿ ಬೈಎಲೆಕ್ಷನ್​ ಟಿಕೆಟ್​ಗೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆದಿದೆ. ತಮ್ಮ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ಕೊಡಿಸುವುದಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಮುರುಗೇಶ್ ನಿರಾಣಿ ಮತ್ತು ಶ್ರೀಕಾಂತ್ ದುಂಡಿಗೌಡರ ಹೆಸರು ಕೂಡ ಕೇಳಿಬರುತ್ತಿವೆ.

ಭರತ್ ಬೊಮ್ಮಾಯಿ ಅಭ್ಯರ್ಥಿ ಆಗಬೇಕೆಂದು ಒತ್ತಾಯ: ಸಂಸದ ಗೋವಿಂದ ಕಾರಜೋಳ

ಶಿಗ್ಗಾಂವಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬೆಂಗಳೂರಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಾತನಾಡಿದ್ದು, ಭರತ್ ಬೊಮ್ಮಾಯಿ ಅಭ್ಯರ್ಥಿ ಆಗಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಕಾರ್ಯಕರ್ತರು ಭರತ್ ಬೊಮ್ಮಾಯಿ ಹೆಸರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ, ಸಂಡೂರು- ಶಿಗ್ಗಾಂವಿ ಬೈ ಎಲೆಕ್ಷನ್: ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!

ಸಮೀಕ್ಷೆಯಲ್ಲೂ ಭರತ್ ಗೆಲ್ಲುವ ಬಗ್ಗೆ ವರದಿಗಳು ಬಂದಿದೆ. ಹಾಗಾಗಿ ಭರತ್ ಅಭ್ಯರ್ಥಿ ಮಾಡಲಿ ಅಂತ ಆಗ್ರಹಿಸುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿರುತ್ತೇವೆ. ಮುರುಗೇಶ್ ನಿರಾಣಿ ಸ್ಪರ್ಧಿಸುವುದಿಲ್ಲವೆಂದು ನಿನ್ನೆ ಹೇಳಿದ್ದಾರೆ ಎಂದಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:53 pm, Fri, 18 October 24