ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆ, ಬುದ್ದಿ ಹೇಳದೇ ಇದ್ರೆ ಆತನ ಕುಟುಂಬಸ್ಥರೆಲ್ಲರೂ ಜೈಲಿಗೆ ಹೋಗುತ್ತಾರೆ: ಈಶ್ವರಪ್ಪ ಎಚ್ಚರಿಕೆ

ಫೌಝಾನ್ ಹಿಂದೂ ಕಾರ್ಯಕರ್ತ ಪ್ರಕಾಶ್ ಕೊಲೆಗೆ ಯತ್ನಿಸಿದ್ದಾನೆ. ಅವರ ಕುಟುಂಬಸ್ಥರು ಆತನಿಗೆ ಬುದ್ದಿ ಹೇಳದೇ ಇದ್ದರೇ ಕುಟುಂಬಸ್ಥರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದರು.

ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆ, ಬುದ್ದಿ ಹೇಳದೇ ಇದ್ರೆ ಆತನ ಕುಟುಂಬಸ್ಥರೆಲ್ಲರೂ  ಜೈಲಿಗೆ ಹೋಗುತ್ತಾರೆ: ಈಶ್ವರಪ್ಪ ಎಚ್ಚರಿಕೆ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
Edited By:

Updated on: Oct 26, 2022 | 2:59 PM

ಶಿವಮೊಗ್ಗ: ಹರ್ಷ ಕೊಲೆ ಆರೋಪಿ ಎ1 ಖಾಸೀಫ್​ನ ಸಹೋದರ ಫೌಝಾನ್ ಆಲಿಯಾಸ್​​ ಮಾರ್ಕೆಟ್ ಫೌಝಾನ್ ಹಿಂದೂ ಕಾರ್ಯಕರ್ತ ಪ್ರಕಾಶ್ ಕೊಲೆಗೆ ಯತ್ನಿಸಿದ್ದಾನೆ. ಅವರ ಕುಟುಂಬಸ್ಥರು ಆತನಿಗೆ ಬುದ್ದಿ ಹೇಳದೇ ಇದ್ದರೇ ಕುಟುಂಬಸ್ಥರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದರು. ಹಿಂದೂ ಸಮಾಜ ಶಾಂತಿಯುತವಾಗಿ ಇರುವುದನ್ನು ಸಹಿಸಲಾರದೆ. ಕೆಲ ಗೂಂಡಾಗಳು ಇಂತಹ ಕೃತ್ಯವೆಸಗುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಸರಿಯಾದ ಉತ್ತರ ನೀಡಬೇಕು. ಇಲ್ಲದಿದ್ದರೆ ಹಿಂದೂ ಸಮಾಜವೇ ತಿರುಗಿ ಬೀಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದರು. ಇನ್ನು ಮೊನ್ನೆ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದ್ದು, ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ದೇಶ ಭಕ್ತಿ ಗೀತೆ ಹಾಡಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು ಎಂದರು.

ತರಬೇತಿನಿರತ ಮುಸ್ಲಿಂ ಗೂಂಡಾಗಳ ಕೃತ್ಯ:

ಹಿಂದೆ ಹರ್ಷನನ್ನು ಲಾಂಗ್​ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈಗ ಪ್ರಕಾಶ್​ಗೆ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದೆ. ಹಲ್ಲೆ ವೇಳೆ ತಪ್ಪಿಸಿಕೊಳ್ಳದಿದ್ದರೆ ಪ್ರಕಾಶ್​ ಕೊಲೆಯಾಗುತ್ತಿದ್ದ. ತರಬೇತಿನಿರತ ಮುಸ್ಲಿಂ ಗೂಂಡಾಗಳು ಕೃತ್ಯವೆಸಗಿದ್ದಾರೆ. ಇಂತಹವರ ಮೇಲೆ ಗುಂಡು ಹಾರಿಸಿ, ನೇಣಿಗೆ ಹಾಕಬೇಕು. ಹೀಗೆ ಮಾಡಿದ್ರೆ ಮುಂದೆ ಯಾರೂ ಅಪರಾಧ ಕೃತ್ಯವೆಸಗಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಇನ್ನು ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೆಲ ಮುಸ್ಲಿಂ ಗೂಂಡಾಗಳು ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರ ಪುಂಡಾಟಿಕೆ ಇನ್ನೂ ಕಮ್ಮಿ ಆಗಿಲ್ಲ. ಈ ಪ್ರಕರಣದಲ್ಲಿ
ಉಳಿದವರನ್ನ ಬಂಧಿಸುವುದಾಗಿ ಎಸ್​ಪಿ ಭರವಸೆ ನೀಡಿದ್ದಾರೆ. ಇಂತಹವರ ವಿರುದ್ಧ ಕಠಿಣ ಶಿಕ್ಷೆಯನ್ನ ಜಾರಿಗೆ ತರಬೇಕು. ಈ ಬಗ್ಗೆ ನಾನು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಒತ್ತಾಯಿಸಿದರು.

ಯುವಕನ ಮೇಲೆ ಹಲ್ಲೆ, ಮೂವರ ಬಂಧನ:

ಸದ್ಯ ಪ್ರಕರಣ ಹಿನ್ನೆಲೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೌಝಾನ್ ಆಲಿಯಾಸ್​​ ಮಾರ್ಕೆಟ್ ಫೌಝಾನ್, ಅಸ್ಗರ್​, ಫರಾಜ್​ ಬಂಧಿತರು. ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ಶಿವಮೊಗ್ಗ ಎಸ್​​ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದರು. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೂರು ಬೈಕ್​ಲ್ಲಿ ಐವರು ಸೀಗೆಹಟ್ಟಿಗೆ ಬಂದಿದ್ದಾರೆ. ಕ್ಲಾರ್ಕ್ ಪೇಟೆಯಲ್ಲಿ ಪ್ರವೀಣ್ ಅಲಿಯಾಸ್ ಕುಲ್ಡ ಪ್ರವೀಣ್ ಜೊತೆ ಚಕಮಕಿ ಉಂಟಾಗಿದೆ. ಇಬ್ಬರನ್ನ ಅಲ್ಲಿಯೇ ಇಳಿಸಿ ಬಂಧಿತ ಆರೋಪಿಗಳು ಭರ್ಮಪ್ಪನಗರಕ್ಕೆ ಆಗಮಿಸಿದ್ದಾರೆ. ಪ್ರಕಾಶ್ ಎಂಬಾತನಿಗೆ ನಿಂದಿಸಿ ಇಟ್ಟಿಗೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರವೀಣ್, ಪ್ರಕಾಶ್ ಮಾರ್ಕೆಟ್ ಫೌಝಾನ್ ಮಧ್ಯೆ ಮಾತಿನ ಚಕಮಕಿಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಹಲ್ಲೆ ಮಾಡಲು ಆರೋಪಿಗಳು ಬಂದಿದ್ದರು ಎಂದು ಮಿಥುನ್ ಕುಮಾರ್ ಹೇಳಿದರು.

ಗಾಯಾಳು ಪ್ರಕಾಶ್ ಸಹೋದರ ಹೇಳಿದ್ದೇನು?

ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಪ್ರಕಾಶ್ ಸಹೋದರ ಟಿವಿ9 ಜೊತೆ ಮಾತನಾಡಿದ್ದು, ಭಜರಂಗದಳ ಮತ್ತು ಆರ್‌ಎಸ್‌ಎಸ್‌ ವಿರುದ್ದ ರಸ್ತೆಯಲ್ಲಿ ಬೈದುಕೊಂಡು ಹೋಗತ್ತಿದ್ದರು. ಲಾಂಗ್ ಮಚ್ ಹಿಡಿದುಕೊಂಡು ಗಲಾಟೆ ಮಾಡಿಕೊಂಡು ಹೋಗುತ್ತಿದ್ದರು. ರಾತ್ರಿ ಮೂರು ಬೈಕ್‌ಗಳಲ್ಲಿ ಸುಮಾರು 9 ಮಂದಿ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದರು. ನಮ್ಮ ಏರಿಯಾದ ಜನರು ಎಲ್ಲಾರು ಅವರನ್ನ ನೋಡಿದ್ದಾರೆ. ಈ ಹಿಂದೆ ಗಣೇಶ ಹಬ್ಬ ಸೇರಿದಂತೆ ಕೆಲವು ಹಿಂದೂ ಕಾರ್ಯಕ್ರಮಗಳಲ್ಲಿ ನನ್ನ ಸಹೋದರ ಭಾಗಿಯಾಗಿದ್ದ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.