AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಗೊನೆಯಲ್ಲಿ, ಸಿಬ್ಬಂದಿ ಒಳ ಉಡುಪಿನಲ್ಲಿ ಜೈಲಿಗೆ ಬಂತು ಗಾಂಜಾ! ಪರಪ್ಪನ ಅಗ್ರಹಾರ ಬಳಿಕ ಶಿವಮೊಗ್ಗದಲ್ಲಿ ಕೈದಿಗಳ ಹೈಟೆಕ್ ಬದುಕು ಬಯಲು

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಾಳೆಹಣ್ಣಿನ ಗೊನೆಯಲ್ಲಿ ಗಾಂಜಾ ಪತ್ತೆಯಾಗಿರುವುದು ಇದೀಗ ಇಡೀ ಜೈಲು ಅಧಿಕಾರಿಗಳನ್ನೇ ಆಘಾತಕ್ಕೊಳಗಾಗಿಸಿದೆ. ಮತ್ತೊಂದೆಡೆ, ಜೈಲಿಗೆ ಸಿಬ್ಬಂದಿ ಎಂಟ್ರಿಯಾಗುವ ಮುನ್ನವೇ, ಸಿಬ್ಬಂದಿ ಒಳ ಉಡುಪಿನಲ್ಲಿ ಗಾಂಜಾ ಪತ್ತೆಯಾಗಿರುವುದು ಇಡೀ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಸದಾ ಹದ್ದಿನ ಕಣ್ಣಿಡಲಾಗುವ ಕಾರಾಗೃಹಗಳಲ್ಲಿ ಕೈದಿಗಳ ಬದುಕು ಹೈಟೆಕ್ ಆಗಿದೆ.

ಬಾಳೆಗೊನೆಯಲ್ಲಿ, ಸಿಬ್ಬಂದಿ ಒಳ ಉಡುಪಿನಲ್ಲಿ ಜೈಲಿಗೆ ಬಂತು ಗಾಂಜಾ! ಪರಪ್ಪನ ಅಗ್ರಹಾರ ಬಳಿಕ ಶಿವಮೊಗ್ಗದಲ್ಲಿ ಕೈದಿಗಳ ಹೈಟೆಕ್ ಬದುಕು ಬಯಲು
ಶಿವಮೊಗ್ಗ ಕೇಂದ್ರ ಕಾರಾಗೃಹ
Basavaraj Yaraganavi
| Edited By: |

Updated on: Nov 22, 2025 | 7:52 AM

Share

ಶಿವಮೊಗ್ಗ, ನವೆಂಬರ್ 22: ನವೆಂಬರ್ 19 ಮಧ್ಯಾಹ್ನ ಸುಮಾರು 2.15 ರ ಹೊತ್ತಿಗೆ ಶಿವಮೊಗ್ಗದ (Shivamogga) ಕೇಂದ್ರ ಕಾರಾಗೃಹಕ್ಕೆ (Shivamogga Central Jail) ಆಟೋವೊಂದು ಬಂದಿದ್ದು, ಆಟೋ ಚಾಲಕ ಅನಾಮತ್ತಾಗಿ ಬಾಳೆಹಣ್ಣಿನ 5 ಗೊನೆಗಳನ್ನು ಇಟ್ಟು ಹೋಗಿದ್ದ. ಇದನ್ನು ಪ್ರಶ್ನಿಸಿದ ಜೈಲು ಭದ್ರತಾ ಸಿಬ್ಬಂದಿಗೆ, ಜೈಲಿನ ಕ್ಯಾಂಟಿನ್​ನವರು ಬಾಳೆಹಣ್ಣು ತರಲು ಹೇಳಿದ್ದರು ಎಂದು ಗೊನೆಗಳನ್ನು ಗೇಟಿನ ಬಳಿ ಇಳಿಸಿ ವಾಪಾಸ್ ತೆರಳಿದ್ದ. ಆದರೆ, ಈ ಬಾಳೆಹಣ್ಣಿನ ಗೊನೆಗಳನ್ನು ಪರಿಶೀಲಿಸಿದ ಕೆಎಸ್​ಐಎಸ್​ಎಫ್ ಪೊಲೀಸರು ಒಮ್ಮೆಲೇ ಆಘಾತಕ್ಕೊಳಗಾಗಿದ್ದರು. ಯಾಕೆಂದರೆ, ಈ ಬಾಳೆಗೊನೆ ದಿಂಡನ್ನು ಕೊರೆದು ನೋಡಿದ ಭದ್ರತಾ ಸಿಬ್ಬಂದಿಗೆ ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್​ನಲ್ಲಿ ಸುತ್ತಿ ಇಟ್ಟಿರುವುದು ಪತ್ತೆಯಾಗಿದೆ. ಹೀಗೂ ಇರುತ್ತಾ ಎಂದು ಕಕ್ಕಾಬಿಕ್ಕಿಯಾದ ಭದ್ರತಾ ಸಿಬ್ಬಂದಿ, ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಾಳೆಗೊನೆ ಪರಿಶೀಲಿಸಿದ ವೇಳೆ, 123 ಗ್ರಾಂ ಗಾಂಜಾ ಮತ್ತು ಒಟ್ಟು 40 ಸಿಗರೇಟ್ ಸಿಕ್ಕಿವೆ.

ಬಾಳೆಹಣ್ಣಿನ ಗೊನೆಯಲ್ಲಿ ಗಾಂಜಾ ಸಿಕ್ಕ ಬೆನ್ನಲ್ಲೇ ಜೈಲು ಸಿಬ್ಬಂದಿ ಬಳಿಯೇ ಗಾಂಜಾ ಪತ್ತೆಯಾಗಿದೆ. ಶಿವಮೊಗ್ಗ ಜೈಲಿನ ಸಿಬ್ಬಂದಿಯೇ ಬಂಧನಕ್ಕೊಳಗಾಗಿರುವುದು ಇಡೀ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಒಳ ಉಡುಪಿನಲ್ಲಿ ಗಾಂಜಾ ಪೊಟ್ಟಣ ಇಟ್ಟುಕೊಂಡು ಬಂದಿದ್ದ ಜೈಲು ಸಿಬ್ಬಂದಿ 25 ವರ್ಷದ ಸಾತ್ವಿಕ್, ಜೈಲು ಪ್ರವೇಶಿಸುವಾಗಲೇ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಕೇಂದ್ರ ಕಾರಾಗೃಹದಲ್ಲಿ ಎಸ್​​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸಾತ್ವಿಕ್ ಬಳಿ 170 ಗ್ರಾಂ ಮಾದಕ ವಸ್ತು ಗಾಂಜಾ ದೊರಕಿದೆ. ಗುರುವಾರ ಕರ್ತವ್ಯಕ್ಕೆ ಹಾಜರಾಗಲು ಬಂದಾಗ ತಪಾಸಣೆಗೊಳಪಡಿಸಿದ್ದ ಭದ್ರತಾ ಸಿಬ್ಬಂದಿಗೆ, ಸಾತ್ವಿಕ್ ಒಳ ಉಡುಪಿನಲ್ಲಿ ಗಮ್​ಟೇಪಿನಲ್ಲಿ ಸುತ್ತಿರುವ ಗಾಂಜಾ ಪೊಟ್ಟಣ ಸಿಕ್ಕಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದು ಜೈಲು ಅಧಿಕಾರಿಗಳಿಗೆ ಶಾಕ್ ಜೊತೆಗೆ ಇರಿಸುಮುರುಸು ಉಂಟು ಮಾಡಿದೆ.

ಗೃಹ ಇಲಾಖೆ ವೈಫಲ್ಯವೇ ಕಾರಣ: ಸಂಸದ ಬಿವೈ ರಾಘವೇಂದ್ರ ಟೀಕೆ

ಈ ಘಟನೆಗಳ ಬಗ್ಗೆ ಧಿಗ್ಭ್ರಮೆ ವ್ಯಕ್ತಪಡಿಸಿರುವ ಸಂಸದ ಬಿವೈ ರಾಘವೇಂದ್ರ, ಪರಪ್ಪನ ಅಗ್ರಹಾರ, ಶಿವಮೊಗ್ಗ ಜೈಲಿನಲ್ಲಿ ಗಾಂಜಾ ಪೂರೈಕೆ, ಅಕ್ರಮ ಚಟುವಟಿಕೆಗಳಿಗೆ ನೇರವಾಗಿ ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ಟೀಕಿಸಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಮಂತ್ರಾಲಯದ ಸಭೆಯಲ್ಲಿ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಶಿವಮೊಗ್ಗ ಜೈಲಿನಲ್ಲಿ ಇಂಥ ಕೃತ್ಯ ನಡೆದಿರುವುದು ರಾಜ್ಯ ಗೃಹ ಸಚಿವರ ವೈಫಲ್ಯ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಉಗ್ರ ಫೋನ್ ಬಳಕೆ, ಏರ್​ಪೋರ್ಟ್​​ ನಮಾಜ್-ದೆಹಲಿ ಸ್ಫೋಟಕ್ಕೂ ಲಿಂಕ್: ಅಶೋಕ್ ಅನುಮಾನ

ಒಟ್ಟಾರೆ, ಬಾಳೆಗೊನೆಯಲ್ಲಿ ಗಾಂಜಾ ಪತ್ತೆ ಹಾಗೂ ಜೈಲಿನೊಳಗೆ ಗಾಂಜಾ ಪೂರೈಕೆ ಸಂಬಂಧಪಟ್ಟಂತೆ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜೈಲು ಸಿಬ್ಭಂದಿಯೇ ಕಾರಾಗೃಹದಲ್ಲಿ ಸೆರೆಯಾಗುವಂತಾಗಿರುವುದು ವಿಪರ್ಯಾಸ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್