AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನದಲ್ಲಿ ಪಾರ್ಟಿ, ಹಣದ ವಿಚಾರಕ್ಕೆ ಗಲಾಟೆ; ಸ್ನೇಹಿತನನ್ನೇ ಚಾಕುವಿನಿಂದ ಚುಚ್ಚಿ ಕೊಂದ

ಇಬ್ಬರು ಸ್ನೇಹಿತರು ಸೇರಿಕೊಂಡು ಬೆಳಗ್ಗೆಯಿಂದ ಸಂಜೆವರೆಗೆ ಕಷ್ಟ ಪಟ್ಟ ದುಡಿಯುತ್ತಿದ್ದರು. ಸಂಜೆಯಾದ ಬಳಿಕ ಖುಷಿಯಾಗಿ ಇಬ್ಬರು ಸೇರಿ ಎಣ್ಣೆ ಹೊಡೆದು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ನಿನ್ನೆ(ಜೂ.19) ರಾತ್ರಿ ಎಣ್ಣೆ ಕುಡಿದ ಬಳಿಕ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿದೆ. ಈ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತನ ಮರ್ಡರ್ ಕುರಿತು ಒಂದು ವರದಿ ಇಲ್ಲಿದೆ.

ಸ್ಮಶಾನದಲ್ಲಿ ಪಾರ್ಟಿ, ಹಣದ ವಿಚಾರಕ್ಕೆ ಗಲಾಟೆ; ಸ್ನೇಹಿತನನ್ನೇ ಚಾಕುವಿನಿಂದ ಚುಚ್ಚಿ ಕೊಂದ
ಆರೋಪಿ, ಮೃತ ವ್ಯಕ್ತಿ
Basavaraj Yaraganavi
| Edited By: |

Updated on: Jun 19, 2024 | 10:20 PM

Share

ಶಿವಮೊಗ್ಗ, ಜೂ.19: ಸ್ನೇಹಿತನನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಶಿವಮೊಗ್ಗ(Shivamogga)ದ ಸಾಗರ ರಸ್ತೆಯ ಆಯನೂರು ಗೇಟ್ ಬಳಿ ಇರುವ ಸ್ಮಶಾನದಲ್ಲಿ ನಡೆದಿದೆ. ರಾಜು ನಾಯ್ಕ್ (30) ಮೃತ ರ್ದುದೈವಿ. ರಾಜು ಮತ್ತು ವಿಕ್ರಮ್​ ಸ್ನೇಹಿತರಿಬ್ಬರು ಒಟ್ಟಿಗೆ ಕುಳಿತು ಎಣ್ಣೆ ಹೊಡೆದಿದ್ದಾರೆ. ಬಳಿಕ ಸ್ನೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಕಿರಿಕ್ ಶುರುವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.

ರಾಜು ನಾಯ್ಕ್ ಬಳಿ 1800 ರೂಪಾಯಿ ಹಣವನ್ನು ಸಾಲವಾಗಿ ವಿಕ್ರಮ್​ ಪಡೆದುಕೊಂಡಿದ್ದನು. 15 ದಿನಗಳ ಹಿಂದೆ ರಾಜು ನಾಯ್ಕ್ ತಂದೆ ತೀರಿ ಹೋಗಿದ್ದರು. ತಂದೆ ತೀರಿ ಹೋದ ಬಳಿಕ ಮನೆ ಪೇಟಿಂಗ್​ಗೆ ವಿಕ್ರಮ್​ನನ್ನು ಜೊತೆಗೆ ಸೇರಿಸಿಕೊಳ್ಳುತ್ತಾನೆ. ಇಬ್ಬರು ಪೇಟಿಂಗ್ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದರು. ಮನೆ ಪೇಟಿಂಗ್​ನಿಂದ ಇಬ್ಬರು ನಡುವೆ ಪರಿಚಯವಾಗಿ  ಸ್ನೇಹಿತರಾಗಿದ್ದರು. ಈ ನಡುವೆ ನಿನ್ನೆ ಎಂದಿನಂತೆ ಇಬ್ಬರು ಸೇರಿ ಸ್ಮಶಾನದೊಳಗೆ ಎಣ್ಣೆ ಹೊಡೆಯುತ್ತಿದ್ದರು. ರಾಜು ನಾಯ್ಕ್ ಕೊಟ್ಟಿರುವ ಸಾಲ ವಾಪಸ್ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಇದರಿಂದ ಕುಪಿತಗೊಂಡ ವಿಕ್ರಮ್​ ತನ್ನ ಬಳಿ ಇದ್ದ ಚಾಕುವಿನಿಂದ ಸ್ನೇಹಿತ ರಾಜುಗೆ ಕತ್ತು ಮತ್ತು ಎದೆಗೆ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ತ್ರಾವದಿಂದ ರಾಜು ಅಲ್ಲಿಯೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಸಂಚು, ಅಪಘಾತದಲ್ಲೂ ಸಾಯ್ಲಿಲ್ಲ ಕೊನೆಗೆ ಗುಂಡು ಹಾರಿಸಿ ಕೊಂದ ಪತ್ನಿ

ಕೊಲೆ ಮಾಡಿದ ಬಳಿಕ ವಿಕ್ರಮ್​ ಅಲ್ಲಿಯೇ ಕುಳಿತುಕೊಂಡಿದ್ದನು. ಕೊಲೆಯ ಮಾಹಿತಿಯನ್ನು ಸ್ಥಳೀಯರು ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಕೊಲೆ ಮಾಡಿದ ಅಮಲಿನಲ್ಲಿ ಕುಳಿತಿದ್ದ ಹಂತಕ ವಿಕ್ರಮ್​ನನ್ನು ತುಂಗಾ ನಗರ ಪೊಲೀಸರು ಬಂಧಿಸುತ್ತಾರೆ. ಈ ಘಟನೆಯಿಂದ ಮೃತನ ಕುಟುಂಬಸ್ಥರಿಗೆ ಶಾಕ್ ಆಗಿದೆ. ಪರಿಚಯ ಇರುವ ವ್ಯಕ್ತಿಯೇ ಮರ್ಡರ್ ಮಾಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತನ ಕುಟುಂಬಸ್ಥರು ಮತ್ತು ಸಂಬಂಧಿಗಳು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ಮದ್ಯ ಕುಡಿದ ಬಳಿಕ ಮನುಷ್ಯನು ಏನು ಮಾಡುತ್ತಾನೆ ಎನ್ನುವುದೇ ಅರಿವು ಇರುವುದಿಲ್ಲ. ಒಳಗೆ ಮದ್ಯ ಹೋದ ಮೇಲೆ ಆ ವ್ಯಕ್ತಿ ರಾಕ್ಷಸನಂತಾಗಿ ಬಿಡುತ್ತಾನೆ. ತಾನು ಏನು ಮಾಡುತ್ತೇನೆ ಎನ್ನುವುದೇ ಆತನಿಗೆ ಗೊತ್ತಾಗುವುದಿಲ್ಲ. ಇಲ್ಲಿಯೂ ಸಾಲ ಕೊಟ್ಟ ಸ್ನೇಹಿತನ ಬರ್ಬರವಾಗಿ ಹತ್ಯೆ ಆಗಿರುವುದು ಮಾತ್ರ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ