ಹೈಟೆಕ್ ಆಗಲಿದೆ ಜೋಗ ಜಲಪಾತ: ಆರ್ಟ್ ಗ್ಯಾಲರಿ, ಆಧುನಿಕ ವ್ಯೂ ಡೆಕ್ ಸೇರಿ 184 ಕೋಟಿ ವೆಚ್ಚದಲ್ಲಿ ಇನ್ನಷ್ಟು ಸೌಕರ್ಯ

ವಿಶ್ವವಿಖ್ಯಾತ ಜೋಗ ಜಲಪಾತ ಪರಿಸರ ಈಗ ಹೈಟೆಕ್ ಆಗುತ್ತಿದೆ. ಕೋಟಿ ಕೊಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗಿವೆ. ಜೋಗ್ ಫಾಲ್ಸ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಇನ್ನು ಫಾಲ್ಸ್ ಹೊಸ ರೂಪದಲ್ಲಿ ಕಂಗೋಳಿಸಲಿದೆ. ಜೋಗ ಜಲಪಾತದಲ್ಲಿ ಏನೇನು ಹೊಸ ಸೌಲಭ್ಯಗಳಿರಲಿವೆ ಎಂಬ ಮಾಹಿತಿ ಇಲ್ಲಿದೆ.

ಹೈಟೆಕ್ ಆಗಲಿದೆ ಜೋಗ ಜಲಪಾತ: ಆರ್ಟ್ ಗ್ಯಾಲರಿ, ಆಧುನಿಕ ವ್ಯೂ ಡೆಕ್ ಸೇರಿ 184 ಕೋಟಿ ವೆಚ್ಚದಲ್ಲಿ ಇನ್ನಷ್ಟು ಸೌಕರ್ಯ
ಜೋಗ್ ಫಾಲ್ಸ್
Updated By: Ganapathi Sharma

Updated on: May 15, 2025 | 10:22 AM

ಶಿವಮೊಗ್ಗ, ಮೇ 15: ಜೋಗ್ ಫಾಲ್ಸ್ (Jog Falls) ನೋಡುವುದೇ ಕಣ್ಣಿಗೆ ಹಬ್ಬ. ಇದರ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇಂತಹ ಜೋಗ ಜಲಪಾತದ ಸಮಗ್ರ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಇನ್ನೇನು ಬಹುತೇಕ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. ನೈಸರ್ಗಿಕ ಸಂಪತ್ತಿನಿಂದ ಕೂಡಿದ ಜೋಗ ಜಲಪಾತ ಪ್ರದೇಶವನ್ನು‌ ಐಕಾನಿಕ್ ಹಾಗೂ ಮಾದರಿ ಪ್ರವಾಸೋದ್ಯಮ ಪ್ರದೇಶವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. 184 ಕೋಟಿ‌ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ಜೋಗ್ ಫಾಲ್ಸ್​ನಲ್ಲಿ ಏನೇನಿರಲಿವೆ?

ಪ್ರಮುಖವಾಗಿ ಎನ್​ಟ್ರೆನ್ಸ್ ಪ್ಲಾಜಾ, ಟೇಬಲ್ ಟಾಪ್ ಏರಿಯಾ ವ್ಯೂ, ವ್ಯೂ ಡೆಕ್, ಸೆಂಟ್ರಲ್ ಏರಿಯಾ, ಟ್ರಾನ್ಸಿಟ್ ಹಬ್, ಎಸ್​ಟಿಪಿ ರಸ್ತೆ, ಅತ್ಯುತ್ತಮ ಚರಂಡಿ ವ್ಯುವಸ್ಥೆ, ರಿಟೇಲ್ ನೋಡ್ ಬ್ಲಾಕ್ಸ್, ಬ್ಲಾಕ್ ಎ ಬಿ ಸಿ, ಆರ್ಟ್ ಗ್ಯಾಲರಿ, ಸಿಸಿಟಿವಿ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ತಲುಪಿವೆ. ಸ್ವಾಭಾವಿಕ‌ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಈ ಪ್ರದೇಶ ಐಕಾನಿಕ್ ಸ್ಥಳವಾಗುವಂತೆ, ಇತರೆ ದೇಶಗಳೂ ಇದನ್ನು ಮಾದರಿಯಾಗಿ ಕಾಣುವಂತೆ ಮಾಡಬೇಕೆಂಬ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಾಯಿಂಟ್ ವ್ಹೀಲ್​ನಲ್ಲಿ ಜೋಗದ ಸೌಂದರ್ಯ

ವ್ಯು ಡೆಕ್​ಗೆ ಪ್ರತಿ ದಿನ ಸಾವಿರಾರು ಜನರು ಬರುತ್ತಾರೆ. ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಜನರಿಗೆ ಉತ್ತಮ‌ ಮನೋರಂಜನೆ ಜೊತೆ ಆದಾಯ ತರುವಂತಹ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಜಯಿಂಟ್ ವ್ಹೀಲ್ ಅಳವಡಿಸುವ ಮೂಲಕ ಅದರಿಂದ ಜೋಗ ಜಲಪಾತದ ಸೊಬಗನ್ನು ಸವಿಯುವ ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ
ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಜೋಶಿ ಎಚ್ಚರಿಕೆ
ಮೂರು ತಿಂಗಳಾದರೂ ಬಂದಿಲ್ಲ ಗೃಹಲಕ್ಷ್ಮಿ ಹಣ: ಗದಗದಲ್ಲಿ ಸಿಡಿದೆದ್ದ ಮಹಿಳೆಯರು
ಚಿನ್ನಾಭರಣ ಕದ್ದು ಬೇರೆ ಬ್ಯಾಂಕ್​ಗಳಲ್ಲಿ ಅಡವಿಟ್ಟ ಗೋಲ್ಡ್ ಲೋನ್ ಆಫೀಸರ್!
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ವರ್ಷದ 365 ದಿನಗಳೂ ಪ್ರವೇಶಕ್ಕೆ ಲಭ್ಯವಾಗುವಂತೆ ಜೋಗ್ ವೀಕ್ಷಣೆಗೆ ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ. ಜಲಪಾತಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದರೆ ಇನ್ನೂ ಆಕರ್ಷಕವಾಗಿರುತ್ತದೆ. ಬೇಸಿಗೆಯಲ್ಲಿ ಮಕ್ಕಳ ಮನೋರಂಜನೆಗೆ ರೈನ್ ಡ್ಯಾನ್ಸ್, ಇತರೆ ಚಟುವಟಿಕೆ ಹಾಕಿಕೊಳ್ಳಬೇಕು. ಶೈಕ್ಷಣಿಕ ಪ್ರವಾಸಕ್ಕೆ ವ್ಯವಸ್ಥೆ ಮಾಡಬೇಕು. ಕೆಆರ್ ಎಸ್ ರೀತಿ ಗಾರ್ಡನ್, ಫೌಂಟನ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಅಭಿವೃದ್ಧಿಗೆ ಗಮನ ಹರಿಸಲಾಗುತ್ತಿದೆ.

ಸದ್ಯ ಕಾಮಗಾರಿ ಚುರುಕುಗೊಂಡಿದೆ. ರೋಪ್ ವೇ, ಗ್ಲಾಸ್ ಹೌಸ್, ಝಿಪ್ ಲೈನ್, ಕೆಆರ್​​​ಎಸ್ ರೀತಿ ಪಾರ್ಕ್, ಮನೋರಂಜನೆ, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಚಟುವಟಿಕೆ ನಡೆಯುತ್ತಿವೆ. ಜಾಯಿಂಟ್ ವ್ಹೀಲ್, ಕೇಬಲ್ ಕಾರ್, ನೈಟ್ ವ್ಯೂ ವ್ಯವಸ್ಥೆ ಮಾಡಲು ಸಲಹೆ ನೀಡಿದ್ದೇನೆ.‌ ಜೋಗ ಅತ್ಯಂತ ಆಕರ್ಷಣೀಯ ಪ್ರವಾಸೋದ್ಯಮ ಪ್ರದೇಶ ಆಗುವುದರಲ್ಲಿ ಎರಡು ಮಾತಿಲ್ಲ. 184 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದ್ದು ಈವರೆಗೆ 95 ಕೋಟಿ ಬಿಡುಗಡೆ ಆಗಿದೆ. ಡ್ಯಾಂ ಕೆಳಗೆ ಜಾಗ ಇದ್ದು ಕೆಆರ್ ಎಸ್ ರೀತಿ ದೊಡ್ಡ ಪಾರ್ಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಹೆಚ್ಚಾದ ಓಪನ್ ರೌಡಿಸಂ: ದೇವಸ್ಥಾನದಲ್ಲಿ ಮಚ್ಚು ಪೂಜೆ, ರೌಡಿಯಿಂದ ಫೈರಿಂಗ್

ಜೂನ್ ತಿಂಗಳಲ್ಲಿ ಮಳೆಗಾಲ ಶುರುವಾಗುತ್ತದೆ. ಮಳೆಗಾಲದಲ್ಲಿ ಜೋಗ್ ಫಾಲ್ಸ್ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಈ ನಡುವೆ 184 ಕೋಟಿ ರೂ. ವೆಚ್ಚದಲ್ಲಿ ಜೋಗಕ್ಕೆ ಹೊಸ ಲುಕ್ ನೀಡಲಾಗುತ್ತಿದೆ. ಈ ಮಳೆಗಾಲದಲ್ಲಿ ಜೋಗ್ ಫಾಲ್ಸ್ ನೋಡಲು ಬಂದವರಿಗೆ ವಿಶೇಷ ಅನುಭವ ಆಗುವುದಂತೂ ಗ್ಯಾರಂಟಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ