ನಮ್ಮ ದೇಶದಲ್ಲಿ ಇರುವಷ್ಟು ಶಾಂತಿಪ್ರಿಯರು, ಧರ್ಮ ಸಹಿಷ್ಣುಗಳು ಬೇರೆಲ್ಲೂ ಇಲ್ಲ; ತಾಲಿಬಾನಿಗಳನ್ನು ಎಲ್ಲರೂ ಖಂಡಿಸಬೇಕು: ಕೆ.ಎಸ್.ಈಶ್ವರಪ್ಪ
ವಿಚಾರವಾದಿಗಳಿಗೆ ಸಲಹೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಮ್ಮ ದೇಶದಲ್ಲಿ ಇರುವಷ್ಟು ಶಾಂತಿಪ್ರಿಯತೆ, ಧರ್ಮ ಧರ್ಮಗಳ ನಡುವಿನ ಸಹಿಷ್ಣುತೆ, ವ್ಯಕ್ತಿ ವ್ಯಕ್ತಿ ನಡುವೆ ಇರುವ ಪ್ರೀತಿ ಬೇರೆಲ್ಲೂ ಇಲ್ಲ. ಈ ಎಲ್ಲಾ ಘಟನೆ ನೋಡಿ ನಮ್ಮ ದೇಶದ ಜನರು ಏನು ಒಳ್ಳೆಯದು ಮಾಡಬೇಕೆನ್ನುವುದು ಕಲಿಯಬೇಕು ಎಂದರು.
ಶಿವಮೊಗ್ಗ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ಉಗ್ರ ಚಟುವಟಿಕೆಗಳ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ಮನುಷ್ಯತ್ವ ಇಲ್ಲದ ಚಟುವಟಿಕೆಗಳು ಆಫ್ಘನ್‌ನಲ್ಲಿ ನಡೆಯುತ್ತಿವೆ. ಪ್ರಪಂಚದಲ್ಲಿ ಮಾನವೀಯತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನೆಲ್ಲ ನೋಡಿ ನಮ್ಮ ದೇಶದ ಜನರು ಯಾವುದು ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂದು ಕಲಿಯಬೇಕಿದೆ. ಆಫ್ಘನ್‌ನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತಿರುವುದು ಖಂಡನೀಯ ಎಂದು ಹೇಳಿದರು.
ವಿಚಾರವಾದಿಗಳಿಗೆ ಸಲಹೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಮ್ಮ ದೇಶದಲ್ಲಿ ಇರುವಷ್ಟು ಶಾಂತಿಪ್ರಿಯತೆ, ಧರ್ಮ ಧರ್ಮಗಳ ನಡುವಿನ ಸಹಿಷ್ಣುತೆ, ವ್ಯಕ್ತಿ ವ್ಯಕ್ತಿ ನಡುವೆ ಇರುವ ಪ್ರೀತಿ ಬೇರೆಲ್ಲೂ ಇಲ್ಲ. ಈ ಎಲ್ಲಾ ಘಟನೆ ನೋಡಿ ನಮ್ಮ ದೇಶದ ಜನರು ಏನು ಒಳ್ಳೆಯದು ಮಾಡಬೇಕೆನ್ನುವುದು ಕಲಿಯಬೇಕು. ಅಫ್ಘಾನಿಸ್ತಾನದಲ್ಲಿ ಮಾನವರು ತಲೆ ತಗ್ಗಿಸುವಂತಹ ಕ್ರೂರ ಚಟುವಟಿಕೆ ನಡೆಯುತ್ತಿವೆ. ಅಂತಹ ದುಷ್ಕೃತ್ಯಗಳನ್ನು ಕನಿಷ್ಠ ಎಲ್ಲರೂ ಖಂಡಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲಿಬಾನಿಗಳಿಗೆ ಎಚ್ಚರಿಕೆ ಕೊಟ್ಟ ಅಮೆರಿಕಾ ಅಧ್ಯಕ್ಷ ಅಫ್ಘಾನಿಸ್ತಾನವನ್ನು ಆವರಿಸಿಕೊಂಡು ಆತಂಕ ಹುಟ್ಟುಹಾಕುತ್ತಿರುವ ತಾಲಿಬಾನಿಗಳ ವಿರುದ್ಧ ಅಮೆರಿಕ ಅಧ್ಯಕ್ಷ ಬೈಡನ್ ಧ್ವನಿ ಎತ್ತಿದ್ದಾರೆ. ಮುಂದಿನ ವಾರ ನಡೆಯುವ ಜಿ-7 ರಾಷ್ಟ್ರಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಲಿದೆ. ತಾಲಿಬಾನ್ ಉಗ್ರರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ. ತಾಲಿಬಾನ್ ಸಂಘಟನೆ ಯಾವತ್ತಿದ್ದರೂ ಅಮೆರಿಕದ ವಿರೋಧಿ. ಅಂತಿಮ ಫಲಿತಾಂಶ ಏನಾಗುತ್ತೆಂದು ನಾನು ಭರವಸೆ ನೀಡಲ್ಲ ಆದರೆ, ಅಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗುವುದಕ್ಕೆ ನಾವು ಬಿಡಲ್ಲ ಎಂದು ಹೇಳಿದ್ದಾರೆ.
ಸದ್ಯ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರ ಕಾರ್ಯಾಚರಣೆ ಅಪಾಯಕಾರಿ. ಅಫ್ಘಾನಿಸ್ತಾನದಲ್ಲಿನ ಸಂಭಾವ್ಯ ದಾಳಿಗಳನ್ನ ಗಮನಿಸುತ್ತಿದ್ದೇವೆ. ಏರ್ಪೋರ್ಟ್ ಹಾಗೂ ಅದರ ಸಮೀಪದ ಸ್ಥಳಗಳಲ್ಲಿನ ದಾಳಿಗಳನ್ನು ನೋಡುತ್ತಿದ್ದೇವೆ. ಅಫ್ಘನ್ನಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ. ಅಲ್ಲಿನ ಜನರ ಜತೆ ನಾವಿದ್ದೇವೆ ಎಂದು ಬೈಡನ್ ಅಭಯ ನೀಡಿದ್ದಾರೆ.
ಮಿತ್ರರಾಷ್ಟ್ರಗಳು ನಮ್ಮ ವಿಶ್ವಾಸಾರ್ಹತೆ ಪ್ರಶ್ನಿಸಿದ್ದನ್ನ ನೋಡಿಲ್ಲ. ನಾವು ತೆಗೆದುಕೊಂಡ ನಿರ್ಧಾರಕ್ಕೆ ಈಗಲೂ ಬದ್ಧರಿದ್ದೇವೆ. ಅಫ್ಘನ್ನಲ್ಲಿ ಎಷ್ಟು US ನಾಗರೀಕರಿದ್ದಾರೆಂದು ಪರಿಶೀಲಿಸ್ತಿದ್ದೇವೆ. ಅಲ್ಲಿರುವ ಎಲ್ಲಾ ಅಮೆರಿಕನ್ನರನ್ನ ವಾಪಸ್ ಕರೆತರ್ತೇವೆ. 18 ಸಾವಿರ ಅಮೆರಿಕನ್ನರು, 6 ಸಾವಿರ ಸೈನಿಕರ ಏರ್ಲಿಫ್ಟ್ ಆಗಿದೆ. ಸದ್ಯ ಏರ್ಪೋರ್ಟ್ಗೆ ಬರುತ್ತಿರುವ ನಾಗರಿಕರನ್ನ ನಿರ್ಬಂಧಿಸುತ್ತಿಲ್ಲ. US ನಾಗರೀಕರನ್ನು ನಿರ್ಬಂಧಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದುವೇಳೆ ಅಮೆರಿಕನ್ನರ ಮೇಲೆ ದಾಳಿಯಾದರ ನಾವು ಸಹಿಸುವುದಿಲ್ಲ ಎಂದು ತಾಲಿಬಾನ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
(KS Eshwarappa slams Taliban and says India is best in all aspects)
ಇದನ್ನೂ ಓದಿ: ಅಮೆರಿಕ ಜೊತೆಗಿನ ಒಪ್ಪಂದದ ಪ್ರಕಾರ ಆಗಸ್ಟ್ 31 ರವರೆಗೆ ತಾಲಿಬಾನ್ ಹೊಸ ಸರ್ಕಾರವನ್ನು ಘೋಷಿಸಲ್ಲ: ವರದಿ
ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ