ಸಂಸದ ಅನಂತಕುಮಾರ್ ಹೆಗಡೆ ತಲೆ ಸರಿಯಿಲ್ಲ ಎಂದ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗದ ಅಲ್ಲಮಪ್ರಭು ಫ್ರೀಡಂಪಾರ್ಕ್ನಲ್ಲಿ ಆಯೋಜಿಸಿದ್ದ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ತಲೆ ಸರಿಯಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಸಿಎಂಗೆ ಸಿದ್ರಾಮುಲ್ಲಾ ಎಂದಿದ್ದರು. ಆ ವ್ಯಕ್ತಿಯ ಬಗ್ಗೆ ಹೆಚ್ಚು ಮಾತಾಡಿದರೆ ಪ್ರಯೋಜನ ಇಲ್ಲ ಎಂದು ಕಿಡಿಕಾರಿದ್ದಾರೆ. ನನ್ನ ಸ್ಪರ್ಧೆ ವಿಚಾರ ಪಕ್ಷದ ತಿರ್ಮಾನಕ್ಕೆ ಬದ್ಧ ಎಂದಿದ್ದಾರೆ.
ಶಿವಮೊಗ್ಗ, ಫೆಬ್ರವರಿ 24: ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ತಲೆ ಸರಿಯಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವಾಗ್ದಾಳಿ ಮಾಡಿದ್ದಾರೆ. ನಗರದ ಅಲ್ಲಮಪ್ರಭು ಫ್ರೀಡಂಪಾರ್ಕ್ನಲ್ಲಿ ಆಯೋಜಿಸಿದ್ದ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಆ ವ್ಯಕ್ತಿ ಹತಾಶನಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಸಿಎಂಗೆ ಸಿದ್ರಾಮುಲ್ಲಾ ಎಂದಿದ್ದರು. ಆ ವ್ಯಕ್ತಿಯ ಬಗ್ಗೆ ಹೆಚ್ಚು ಮಾತಾಡಿದರೆ ಪ್ರಯೋಜನ ಇಲ್ಲ ಎಂದು ಕಿಡಿಕಾರಿದ್ದಾರೆ.
ಮಂಡಗದ್ದೆಯ ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಚತೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚನೆ ನೀಡಿದ್ದೇವೆ. 42 ಸಾವಿರ ಶಾಲೆಗಳಿವೆ ಎಲ್ಲೋ ಒಂದು ಕಡೆ ಆಗಿರುವ ಘಟನೆಯನ್ನು ಇಡಿ ಶಿಕ್ಷಣ ಇಲಾಖೆಗೆ ಹೊಲಿಸುವುದು ಸರಿಯಲ್ಲ ಎಂದಿದ್ದಾರೆ.
ನನ್ನ ಸ್ಪರ್ಧೆ ವಿಚಾರ ಪಕ್ಷದ ತಿರ್ಮಾನಕ್ಕೆ ಬದ್ಧ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಯಾರಿಗೆ ಟಿಕೆಟ್ ಕೊಟ್ಟರು ಕೂಡ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನನ್ನ ಸ್ಪರ್ಧೆ ವಿಚಾರ ಪಕ್ಷದ ತಿರ್ಮಾನಕ್ಕೆ ಬದ್ಧ. ಶಿವಮೊಗ್ಗದಲ್ಲಿ 17 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಯಾರಾದರೂ ಒಬ್ಬರು ಅಭ್ಯರ್ಥಿ ಆಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಗ್ಯಾರಂಟಿ ಫಲಾಮಿಭವಿಗಳ ಸಮಾವೇಶದಲ್ಲಿ ಜೆಡಿಎಸ್ ಶಾಸಕಿ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯವಾಗಿ ಹರಟಿದರು!
ಕರೆಂಟ್ ಬಿಲ್ಗಾಗಿ ಈ ಹಿಂದೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದರು. ಆದರೆ ಈಗ ಮನೆಗೆ ವಿದ್ಯುತ್ ಕಟ್ ಮಾಡುವ ಧೈರ್ಯ ಯಾರಿಗೆ ಇದೆ. ಗ್ಯಾರಂಟಿಗಳಿಗೆ ವ್ಯಾಲಿಡಿಟಿ ಇಲ್ಲ ವಿಪಕ್ಷ ಬಿಜೆಪಿ ಟೀಕೆ ಮಾಡಿದ್ದರು. ಈಗ ವಿಪಕ್ಷಗಳಿಗೆ ಸರಕಾರ ಗ್ಯಾರಂಟಿಗಳ ಮೂಲಕ ಉತ್ತರ ನೀಡಿದುತ್ತಿದೆ. ಸರಕಾರದ ಯೋಜನೆ ನಿಲ್ಲಿಸುವ ಧೈರ್ಯ, ಧಮ್ಮು, ತಾಕತ್ತು ವಿರೋಧ ಪಕ್ಷದವರಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಕಾಂಗ್ರೆಸ್ ಸರಕಾರ ಹೆತ್ತಿರುವುದು ತಾಯಿಂದಿರು. ಇದನ್ನು ತುಂಬಾ ಹೆಮ್ಮೆಯಿಂದ ನಾನು ಹೇಳುತ್ತೇನೆ. ನನಗೆ 44 ಸಾವಿರ ಕೋಟಿ ರೂ. ನನ್ನ ಇಲಾಖೆಗೆ ಸಿಕ್ಕಿದೆ. ನನ್ನ ಇಲಾಖೆ ಖಜಾನೆ ತುಂಬಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಅಭಿವೃದ್ಧಿ ನನ್ನ ಗುರಿ. ಸಿಎಂ ಸಿದ್ದರಾಮಯ್ಯ ಖಜಾನೆ ಎಂದು ಖಾಲಿ ಆಗುವುದಿಲ್ಲ. ಕಮೀಷನ್ ಯುಗ ಮುಗಿದು ಹೋಗಿದೆ. ಯಾರು ಈಗ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.