ಶಿವಮೊಗ್ಗವನ್ನು ಕೊಂಡಾಡಿದ ಮೋದಿ: ಜಿಲ್ಲೆಯ ಪರಿಸರ, ಸಂಸ್ಕೃತಿ, ಕೃಷಿ, ನದಿ, ಅರಣ್ಯ ಸಂಪತ್ತು ಸ್ಮರಿಸಿದ ನಮೋ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಏರ್​ಪೋರ್ಟ್​ ಉದ್ಘಾಟಿಸಿ ಬಳಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ಶಿವಮೊಗ್ಗ ಜಿಲ್ಲೆಯ ಪರಿಸರ, ಸಂಸ್ಕೃತಿ, ಕೃಷಿ, ನದಿ-ಬೆಟ್ಟ, ಅರಣ್ಯ ಪ್ರದೇಶಗಳನ್ನು ಸ್ಮರಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು.

ಶಿವಮೊಗ್ಗವನ್ನು ಕೊಂಡಾಡಿದ ಮೋದಿ: ಜಿಲ್ಲೆಯ ಪರಿಸರ, ಸಂಸ್ಕೃತಿ, ಕೃಷಿ, ನದಿ, ಅರಣ್ಯ ಸಂಪತ್ತು ಸ್ಮರಿಸಿದ ನಮೋ
ನರೇಂದ್ರ ಮೋದಿ
Follow us
ರಮೇಶ್ ಬಿ. ಜವಳಗೇರಾ
|

Updated on: Feb 27, 2023 | 3:29 PM

ಶಿವಮೊಗ್ಗ: ಸೋಗಾನೆ ಬಳಿ ತಲೆಎತ್ತಿರುವ ರಾಜ್ಯದ ಎರಡನೇ ದೊಡ್ಡ ವಿಮಾನ ನಿಲ್ದಾಣವನ್ನು (Shivamogga Airport) ಪ್ರಧಾನಿ ನರೇಂದ್ರ ಮೋದಿ9Narendra Modi) ಇಂದು(ಫೆ.27) ಲೋಕಾರ್ಪಣೆ ಮಾಡಿದರು. ಈ ಮೂಲಕ ಯಡಿಯೂರಪ್ಪನವರ ಕನಸನ್ನು ಅವರ ಜನ್ಮದಿನದಂದೇ ನನಸು ಮಾಡಿದರು. ಇನ್ನು ಏರ್​ಪೋರ್ಟ್​ ಉದ್ಘಾಟಿಸಿ ಬಳಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ಶಿವಮೊಗ್ಗ ಜಿಲ್ಲೆಯ ಪರಿಸರ, ಸಂಸ್ಕೃತಿ, ಕೃಷಿ, ನದಿ-ಬೆಟ್ಟ, ಅರಣ್ಯ ಪ್ರದೇಶಗಳನ್ನು ಸ್ಮರಿಸಿ ನೆರೆದಿದ್ದವರ ಗಮನ ಸೆಳೆದರು. ಸ್ಥಳೀಯರು ರೀತಿಯಲ್ಲಿ ಜಿಲ್ಲೆಯ  ವೈಶಿಷ್ಟ್ಯಯತೆನ್ನು ನೀರು ಕುಡಿದಂತೆ ಪಟ-ಪಟನೇ ಸುಲಲಿತವಾಗಿ ಉಚ್ಚರಿಸಿ ಹುಬ್ಬೇರುವಂತೆ ಮಾಡಿದರು. ಯಾವುದೇ ಚೀಟಿಗಳನ್ನು ನೋಡಿಕೊಳ್ಳದೇ ಇಡೀ ಜಿಲ್ಲೆಯ(Shivamogga District) ಇತಿಹಾಸವನ್ನು ಬಣ್ಣಿಸಿದ್ದು ಹುಬ್ಬೇರುವಂತೆ ಮಾಡಿದೆ.

ಇದನ್ನೂ ಓದಿ: Shivamogga Airport: ಶಿವಮೊಗ್ಗ ಏರ್​​ಪೋರ್ಟ್ ಉದ್ಘಾಟಿಸಿದ ಮೋದಿ, ಯಡಿಯೂರಪ್ಪಗೆ ವಿಶೇಷ ಸನ್ಮಾನ

ಹೌದು…ಕನ್ನಡದಲ್ಲಿಯೇ ಭಾಷಣ ಶುರು ಮಾಡಿದ ಮೋದಿ ಮೊದಲಿಗೆ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿದರು. ಬಳಿಕ ತಮ್ಮ ಮಾತು ಮುಂದುವರಿಸಿ, ಶಿವಮೊಗ್ಗ ಜಿಲ್ಲೆ ಪರಿಸರ, ಸಂಸ್ಕೃತಿ, ಕೃಷಿಯಿಂದ ಕೂಡಿದದು, ಮಲೆನಾಡಿನ ಹೆಬ್ಬಾಗಿಲು ನದಿ, ಅರಣ್ಯ ಸಂಪತ್ತು ಅದ್ಭುತವಾಗಿದೆ ಎಂದು ಬಣ್ಣಿಸಿದರು.

ಈ ವೇಳೆ ಸಕ್ರೆಬೈಲು ಆನೆ ಶಿಬಿರ, ತ್ಯಾವರೆಕೊಪ್ಪ ಸಿಂಹ ಧಾಮವನ್ನೂ ಪ್ರಸ್ತಾಪಿಸಿದ್ರು. ನಂತರ ಗಂಗಾ ಸ್ನಾನ, ತುಂಗಾ ಪಾನ ಎಂದು ಬಣ್ಣಿಸಿದ ಮೋದಿ, ಗಂಗಾ ನದಿಯಲ್ಲಿ ಸ್ನಾನ, ತುಂಗಾ ನದಿಯ ನೀರು ಕುಡಿಯದಿದ್ದರೆ ಜೀವನ ಅಪೂರ್ಣವಾಗುತ್ತದೆ ಎಂದರು. ಈ ವೇಳೆ ನೆರದಿದ್ದ ಜನರ ಕೇಕೆ, ಶಿಳ್ಳೆಯ ಹರ್ಷೋದ್ಗಾರ ಮುಗಿಲಿ ಮುಟ್ಟಿತು.

ಇದನ್ನೂ ಓದಿ: Shivamogga Airport: ಮೊದಲ ಪ್ರಯಾಣಿಕ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಶಿವಮೊಗ್ಗ ಹೇಗೆ ಸಜ್ಜಾಗಿತ್ತು ಗೊತ್ತಾ? ಇಲ್ಲಿವೆ ವಿಮಾನ ನಿಲ್ದಾಣ ​ ಉದ್ಘಾಟನೆ ಫೋಟೋಗಳು

ಅಲ್ಲದೇ, ರಾಷ್ಟ್ರಕವಿ ಕುವೆಂಪು, ಸಂಸ್ಕೃತ ಗ್ರಾಮ ಮತ್ತೂರು, ಸಿಗಂಧೂರು ಚೌಡೇಶ್ವರಿ, ಕೋಟೆ ಆಂಜನೇಯ, ಶ್ರೀಧರ ಸ್ವಾಮೀಜಿ ಆಶ್ರಮ ಮುಂತಾದ ಆಧ್ಯಾತ್ಮ ಸ್ಥಳ, ಗ್ರಾಮಗಳನ್ನು ಶಿವಮೊಗ್ಗ ಹೊಂದಿದೆ ಎಂದೂ ಹೇಳಿದರು. ಹಾಗೆ, ಆಗುಂಬೆಯ ಸೂರ್ಯಾಸ್ತಮಾನ, ಈಸೂರಿನ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಗಮನ ಸೆಳೆದರು.

ಒಟ್ಟಿನಲ್ಲಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ರಾಜಕೀಯಕ್ಕಿಂತ ಶಿವಮೊಗ್ಗ ಜಿಲ್ಲೆಯದ್ದೇ ಮಾತುಗಳಿದ್ದವು.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ