AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಶೀಘ್ರ ಕೋಪಿಷ್ಟ, ಆದರೆ ದೀರ್ಘ ದ್ವೇಷಿಯಲ್ಲ: ಪ್ರಲ್ಹಾದ್ ಜೋಶಿ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಂಸದ ಬಿವೈ ರಾಘವೇಂದ್ರ ಅವರಿಗೆ ವಿಪ್ರ ಸ್ನೇಹ‌ ಬಳಗದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ಯಡಿಯೂರಪ್ಪ ಶೀಘ್ರ ಕೋಪಿಷ್ಟ, ಆದರೆ ದೀರ್ಘ ದ್ವೇಷಿಯಲ್ಲ ಎಂದು ಹೇಳಿದರು. ಅಲ್ಲದೆ, ಅವರು ಪಕ್ಷ ಸಂಘಟಿಸಿದ್ದನ್ನು ಸ್ಮರಿಸಿದರು. ಅಲ್ಲದೆ, ಕೆಎಸ್ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದ ಜೋಶಿ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಿದರು.

ಯಡಿಯೂರಪ್ಪ ಶೀಘ್ರ ಕೋಪಿಷ್ಟ, ಆದರೆ ದೀರ್ಘ ದ್ವೇಷಿಯಲ್ಲ: ಪ್ರಲ್ಹಾದ್ ಜೋಶಿ
ಯಡಿಯೂರಪ್ಪ ಶೀಘ್ರ ಕೋಪಿಷ್ಟ, ಆದರೆ ದೀರ್ಘ ದ್ವೇಷಿಯಲ್ಲ ಎಂದ ಪ್ರಲ್ಹಾದ್ ಜೋಶಿ
Basavaraj Yaraganavi
| Updated By: Rakesh Nayak Manchi|

Updated on:Mar 09, 2024 | 10:35 PM

Share

ಶಿವಮೊಗ್ಗ, ಮಾ.9: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ, ಶೀಘ್ರ ಕೋಪಿಷ್ಟ ಆದರೆ ಅದನ್ನು ಬೇಗ ಮರೆತುಬಿಡುತ್ತಾರೆ, ದೀರ್ಘ ದ್ವೇಷಿಯಲ್ಲ ಎಂದು ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ವಿಪ್ರ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಹಳ ಶ್ರಮಪಟ್ಟು ಬಿಜೆಪಿ ನಾಯಕರಾಗಿದ್ದಾರೆ ಎಂದರು.

ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ವಿಪ್ರ ಸ್ನೇಹ‌ ಬಳಗದಿಂದ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ ಎನ್ನುವ ಕಾರಣಕ್ಕೆ ದೆಹಲಿಯಿಂದ ಬಂದೆ. ಯಡಿಯೂರಪ್ಪ ಬಹಳಷ್ಟು ಪರಿಶ್ರಮ ಪಟ್ಟು, ಪುರಸಭೆ ಅಧ್ಯಕ್ಷರಾಗಿ, ಹಲ್ಲೆಗೊಳಗಾಗಿ ಪುನರ್ಜನ್ಮ ಪಡೆದು ಬಿಜೆಪಿಯ ನಾಯಕರಾಗಿದ್ದಾರೆ. ಯಡಿಯೂರಪ್ಪ ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ. ಸಿಟ್ಟು ಜಾಸ್ತಿಯಾದರೂ ಅಷ್ಟೇ ಬೇಗ ಮರೆತು ಬಿಡುತ್ತಾರೆ. ಶೀಘ್ರ ಕೋಪಿಷ್ಠ ಅಷ್ಟೇ, ಧೀರ್ಘ ದ್ವೇಷಿಯಲ್ಲ ಎಂದರು.

ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಯಡಿಯೂರಪ್ಪ ಅವರು ಸಿಟ್ಟು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ಎಂದಿಗೂ ದ್ವೇಷ ಇಟ್ಟುಕೊಂಡಿಲ್ಲ. ಇದೀಗ ಚುನಾವಣೆ ಬರುತ್ತಿದೆ. ಈ ಹಿಂದೆ ನಾವು ಅಧಿಕಾರ ಕಳೆದುಕೊಂಡಿದ್ದೇವೆ ಮತ್ತು ಅಧಿಕಾರ ಪಡೆದಿದ್ದೇವೆ. ಈ ಬಾರಿ ಮೋದಿಯವರ ಆಶೀರ್ವಾದ, ಮೋದಿ‌ ಜನಪ್ರಿಯತೆ ದೇಶದ ಬದಲಾವಣೆ ದೃಷ್ಟಿಯಿಂದ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಪಡೆಯುತ್ತೇವೆ ಎಂದರು.

ಇದನ್ನೂ ಓದಿ: ಯಡಿಯೂರಪ್ಪ ಶಿಕಾರಿಪುರದ ಅನಭಿಷಿಕ್ತ ದೊರೆ: ಬಿರುದು ಕೊಟ್ಟ ಕಾಂಗ್ರೆಸ್ ಶಾಸಕ ತಮ್ಮಯ್ಯ

ಈ ಹಿಂದೆ ನಾನು ಶಿವಮೊಗ್ಗಕ್ಕೆ ಬಂದಿದ್ದೆ. ಈಗಲೂ ಶಿವಮೊಗ್ಗಕ್ಕೆ ಬಂದಿದ್ದೇನೆ. ಶಿವಮೊಗ್ಗ ಸಾಕಷ್ಟು ಬದಲಾವಣೆ, ಅಭಿವೃದ್ಧಿ ಆಗಿದೆ. ಯಡಿಯೂರಪ್ಪ ಅವರಂತಹ ನಾಯಕರು ಎಲ್ಲಾ ಜಿಲ್ಲೆಯಲ್ಲಿ ಇರಬೇಕು. ಯಡಿಯೂರಪ್ಪ ಅವರಿಂದ ರಾಜ್ಯವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.

ಯಡಿಯೂರಪ್ಪ ಹೇಳಿದ ಕೆಲಸವನ್ನು ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಮಾಡಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತಿತ್ತು. ಅದೇ ರೀತಿ ನಡೆದುಕೊಂಡು ಕೆಲಸ ಮಾಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ದೇವರು ಇನ್ನಷ್ಟು ಆಯಸ್ಸು ಕೊಡಲಿ. ಅವರು ನಮಗೆ ಸದಾ ಮಾರ್ಗದರ್ಶನ ನೀಡಲಿ ಎಂದರು.

ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಪ್ರಲ್ಹಾದ್ ಜೋಶಿಗೆ ಮತ ಹಾಕಿದರೆ ಅದು ಯಡಿಯೂರಪ್ಪ ಅವರಿಗೆ ಮತ ಹಾಕಿದ ಹಾಗೆ ಅಂದಿದ್ದರು. ಹೀಗಾಗಿಯೇ ನಾನು ಸಾಕಷ್ಟು ದೊಡ್ಡ ಅಂತರದಲ್ಲಿ ಗೆಲ್ಲಲ್ಲು ಕಾರಣವಾಯ್ತು ಎಂದರು.

ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮುತ್ತಿದೆ. 2067 ರ ಭಾರತ ವಿಕಸಿತ ಭಾರತ ಆಗಬೇಕು. 2067 ಕ್ಕೆ ಭಾರತ ನಂಬರ್ 1 ಭಾರತ ಆಗಬೇಕು. ದೇಶದಲ್ಲಿ ಭಯೋತ್ಪಾದನೆ ಶೇ.90 ರಷ್ಟು ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. 3 ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗುತ್ತಾರೆ. ಮೋದಿ ಪ್ರಧಾನಮಂತ್ರಿ ಆಗುವ ಸಂದರ್ಭದಲ್ಲಿ ರಾಘವೇಂದ್ರ ಅವರು ಸಹ ಇರುತ್ತಾರೆ ಎಂದು ಹೇಳುವ ಮೂಲಕ ಮತ್ತೆ ಶಿವಮೊಗ್ಗದಿಂದ ರಾಘವೇಂದ್ರ ಅವರಿಗೆ ಟಿಕೆಟ್ ಸಿಗಲಿದೆ ಎಂದು ಪರೋಕ್ಷವಾಗಿ ಹೇಳಿದರು.

ವಿಪ್ರ ಸ್ನೇಹ ಬಳಗ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ಹಿಂದು ಧರ್ಮ‌ ಸನಾತನವಾದುದು, ಪುರಾತನವಾದುದು. ಅಷ್ಟೇ ಪುರಾತನವಾದುದು ಬ್ರಾಹ್ಮಣ ಸಮುದಾಯ. ಬ್ರಾಹ್ಮಣ ಸಮುದಾಯ ಎಲ್ಲಾ ಸಮುದಾಯಗಳಿಗೆ ದಾರಿ ದೀಪವಾದರು. ಬ್ರಾಹ್ಮಣರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು. ಬ್ರಾಹ್ಮಣ ಸಮುದಾಯಕ್ಕೆ ಮೀಸಲು‌ ಪ್ರಮಾಣ ಹೆಚ್ಚಿಗೆ ಮಾಡಿದರು. ಬೇರೆ ಸಮುದಾಯಕ್ಕೆ ಅನಾನುಕೂಲ ಆಗದ ರೀತಿ ಮೀಸಲು ಹೆಚ್ಚಿಗೆ ಮಾಡಿದರು. ಗ್ಯಾರಂಟಿ ಯೋಜನೆ ನೀಡುತ್ತೇವೆ ಅಂತಾ ಸುಳ್ಳು ಆಶ್ವಾಸನೆ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದರು.

ಈಶ್ವರಪ್ಪ ಭೇಟಿಯಾದ ಪ್ರಲ್ಹಾದ್ ಜೋಶಿ

ಕಾರ್ಯಕ್ರಮ ಮುಕ್ತಾಯದ ಬಳಿಕ ಪ್ರಲ್ಹಾದ್ ಜೋಶಿ ಅವರು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಕೆಎಸ್ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದರು. ಈಶ್ವರಪ್ಪ ಪುತ್ರ ಕೆಇ ಕಾಂತೇಶ್ ಅವರು ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಟಿಕೇಟ್ ಕೈ ತಪ್ಪುವ ಭೀತಿ ಹಿನ್ನೆಲೆ ಹಾವೇರಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಈಶ್ವರಪ್ಪ ಅಭಿಮಾನಿಗಳು, ಕಾಂತೇಶ್ ಅವರಿಗೆ ಟಿಕೇಟ್ ನೀಡುವಂತೆ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದರು. ಟಿಕೇಟ್ ಸಂಬಂಧ ಈಶ್ವರಪ್ಪ ಜೊತೆ ಮಾತುಕತೆ ನಡೆಸಿದ ಪ್ರಲ್ಹಾದ್ ಜೋಶಿ, ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಿ ಹುಬ್ಬಳ್ಳಿಯತ್ತ ಪಯಣ ಬೆಳಸಿದರು.

ಕಾಂತೇಶ್ ಟಿಕೇಟ್ ಕೊಡಿಸಲು ಪ್ರಯತ್ನ

ಕಾಂತೇಶ್​ಗೆ ಟಿಕೇಟ್ ಕೊಡಲು ಪ್ರಯತ್ನ ಮಾಡಿದ್ದೇವೆ. ದೆಹಲಿಯಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡುತ್ತೇನೆ. ಎಲ್ಲಾ ಅಂತಿಮ ಪ್ರಯತ್ನ ತೆಗೆದುಕೊಳ್ಳುವವರು ದೆಹಲಿಯವರು. ಆ ದಿಕ್ಕಿನಲ್ಲಿ ದೆಹಲಿಯಲ್ಲಿ ಈಗಲೂ ಪ್ರಯತ್ನ ಮುಂದುವರಿದಿದೆ. ನನ್ನ ಪ್ರಯತ್ನ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಟಿಕೇಟ್ ಯಾರಿಗೆ ಕೊಡಬೇಕು ಅಂತಾ ಚುನಾವಣಾ ಸಮಿತಿ ತೀರ್ಮಾನ ಮಾಡುತ್ತದೆ ಎಂದರು.

ಯಡಿಯೂರಪ್ಪ ದೆಹಲಿ ಪ್ರಯಾಣ ರದ್ದು

ನಾಳೆ ದೆಹಲಿಯಲ್ಲಿ ಚುನಾವಣಾ ಟಿಕೇಟ್ ಹಂಚಿಕೆ ಸಂಬಂಧ ಸಭೆ ಇತ್ತು. ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದೆ. ಹೀಗಾಗಿ ನಾಳೆ ದೆಹಲಿಗೆ ಹೋಗುವುದನ್ನು ರದ್ದು ಮಾಡಿದ್ದೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು. ನಾಳೆ ಇಲ್ಲಿಯೇ ಇದ್ದು ಕೆಲಸ ಕಾರ್ಯ ಮುಂದುವರಿಸುತ್ತೇನೆ. ವಾತಾವರಣ ತುಂಬ ಚೆನ್ನಾಗಿ ಇದೆ. ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ ಕನಿಷ್ಠ 25 ಸ್ಥಾನ ಗೆಲ್ಲಬೇಕು ಅಂತಾ ಎಲ್ಲಾ ರೀತಿಯ ಶ್ರಮ ಹಾಕುತ್ತಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಯಾವುದೇ ರಾಜಕೀಯ ಪಕ್ಷದಲ್ಲಿ ಪಟ್ಟಿ ಬಿಡುಗಡೆಗೆ ಮೊದಲು ಸಣ್ಣಪುಟ್ಟ ಗೊಂದಲ ಇರುವುದು ಸ್ವಾಭಾವಿಕ. ಒಂದು ಸರಿ ಪಟ್ಟಿ ಬಿಡುಗಡೆ ಆದ ನಂತರ ಎಲ್ಲರೂ ಸರಿ ಹೋಗುತ್ತಾರೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಎಲ್ಲರೂ ಕೈಜೋಡಿಸುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Sat, 9 March 24

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ