ಶಿವಮೊಗ್ಗ: ಹಾಡಹಗಲೇ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ; ಬೆಚ್ಚಿಬಿದ್ದ ಜನ 

ಶಿವಮೊಗ್ಗ ನಗರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ ನಡೆದಿದೆ. ಅಪರಿಚಿತ ವ್ಯಕ್ತಿಯು ಏಕಾಏಕಿ ವ್ಯಕ್ತಿಯೊಬ್ಬನಿಗೆ ಭರ್ಚಿಯಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಹೀಗೆ ಯಾವುದೇ ಭಯವಿಲ್ಲದೇ ಭರ್ಚಿಯಿಂದ ವ್ಯಕ್ತಿಯೊಬ್ಬನನ್ನು ಕೊಲೆಗೆ ಯತ್ನಿಸಿರುವ ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ.

ಶಿವಮೊಗ್ಗ: ಹಾಡಹಗಲೇ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ; ಬೆಚ್ಚಿಬಿದ್ದ ಜನ 
ಹಲ್ಲೆಗೊಳಗಾದ ವ್ಯಕ್ತಿ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 05, 2024 | 6:27 PM

ಶಿವಮೊಗ್ಗ, ಮಾ.05: ಹಾಡಹಗಲೇ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನಿಸಿದ ಘಟನೆ ಶಿವಮೊಗ್ಗದ (Shivamogga) ಬಿಎಚ್ ನಗರದ ರಾಯಲ್ ಆರ್ಕೀಡ್ ಹೊಟೆಲ್ ನ ಹಿಂಭಾಗದ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ಕಾರ್ತಿಕ್ (48) ಹಲ್ಲೆಗೊಳಗಾದ ವ್ಯಕ್ತಿ. ಇನ್ನು ಗಾಯಗೊಳಗಾದ ಯುವಕನನ್ನು ಕೂಡಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇಂದು ಮದ್ಯಾಹ್ನ 12.30 ರ ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್ ಎನ್ನುವ ವ್ಯಕ್ತಿಯು ಮನೆಗೆ ಹೋಗುತ್ತಿರುವು ಸಂದರ್ಭದಲ್ಲಿ ಹಿಂದಿನಿಂದ ಬಂದ ಇಬ್ಬರು ಅಪರಿಚಿರಲ್ಲಿ ಒಬ್ಬನು ಭರ್ಚಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.

ಈ ವೇಳೆ ಕಾರ್ತಿಕ್ ಭರ್ಚಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ, ಭರ್ಚಿ ಕೊನೆಗೂ ಆತನ ಕೈ ಭಾಗಕ್ಕೆ ತಗುಲಿದೆ. ಕೈಗೆ ಭರ್ಚಿ ಇರಿತದಿಂದ ತೀವ್ರ ರಕ್ತಸ್ರಾವ ಆಗಿದೆ. ತಕ್ಷಣ ಸ್ಥಳೀಯರು ದೊಡ್ಡಪೇಟೆ ಪೊಲೀಸರಿಗೆ ದಾಳಿ ಕುರಿತು ಮಾಹಿತಿ ನೀಡಿದ್ದಾರೆ. ಗಾಯಾಳು ಕಾರ್ತಿಕ್​ನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ದೊಡ್ಡ ಗಂಡಾಂತರಿಂದ ಕಾರ್ತಿಕ್ ಪಾರಾಗಿದ್ದಾನೆ.

ಇದನ್ನೂ ಓದಿ:ಡ್ರ್ಯಾಗರ್​ನಿಂದ ಇರಿದು ರೌಡಿ ಶೀಟರ್ ಕೊಲೆ; ಹಳೆ ಕೇಸ್ ರಾಜಿ ಮಾಡಿಕೊಳ್ಳಲು ಹೋದವ ಸೇರಿದ ಮಸಣ

ನಗರದ ಹೃದಯ ಭಾಗದಲ್ಲಿ ಕೊಲೆಗೆ ಯತ್ನ; ಬೆಚ್ಚಿಬಿದ್ದ ಜನ

ನಗರದ ಹೃದಯ ಭಾಗದಲ್ಲಿ ಕೊಲೆಗೆ ಯತ್ನ ನಡೆದಿದ್ದು, ಈ ಘಟನೆ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಕಾರ್ತಿಕ್ ಮೇಲೆ ಭರ್ಚಿಯಿಂದ ದಾಳಿ ಮಾಡಿದವರು ಯಾರು?, ಈತನ ಕೊಲೆಗೆ ಅವರು ಯತ್ನಿಸಿದ್ದು ಯಾಕೆ?, ಈ ಎಲ್ಲವೂ ಕೂಡ ನಿಗೂಢವಾಗಿದೆ. ಸದ್ಯ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಭರ್ಚಿ ಇರಿದ ಮತ್ತು ಆತನಿಗೆ ಸಾಥ್ ಕೊಟ್ಟ ಇಬ್ಬರಿಗಾಗಿ ದೊಡ್ಡಪೇಟೆ ಪೊಲೀಸರು ಹುಡುಕಾಟದಲ್ಲಿದ್ದಾರೆ. ದಾಳಿಗೊಳಗಾದ ವ್ಯಕ್ತಿಗಳ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಈತನ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇರಬಹುದು ಎನ್ನುವುದು ಪೊಲೀಸರ ಅನುಮಾನವಾಗಿದೆ.

ಈ ದಾಳಿ ಮಾಡಿದವರ ಪತ್ತೆಯ ಬಳಿಕವಷ್ಟೇ ಪ್ರಕರಣದ ಕುರಿತು ನಿಖರವಾದ ಕಾರಣ ಬಯಲಾಗಬೇಕಿದೆ. ಶಿವಮೊಗ್ಗ ನಗರದಲ್ಲಿ ಮಟ ಮಟ ಮದ್ಯಾಹ್ನ ಕೊಲೆಗೆ ಯತ್ನ ಪ್ರಕರಣ ನಡೆದಿರುವುದು ಜನರಿಗೆ ಆತಂಕ ಹುಟ್ಟಿಸಿದೆ. ದಾಳಿಕೋರರು ಪೊಲೀಸ್ ಇಲಾಖೆಯ ಭಯವೇ ಇಲ್ಲದಂತೆ ವರ್ತನೆ ಮಾಡಿದ್ದಾರೆ. ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸಿ ತಕ್ಕ ಪಾಠ ಕಲಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ