AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಡಲಿ ಮಠದ ಚಿನ್ನದ ಪಾದುಕೆ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಲ್ಲಿತ್ತು ಈ ಪಾದುಕೆ?

ಶಿವಮೊಗ್ಗದ ಪ್ರಸಿದ್ಧ ಕೂಡಲಿ ಮಠದ ಚಿನ್ನದ ಪಾದುಕೆ ಕಳ್ಳತನವಾಗಿಲ್ಲ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಎರಡು ವರ್ಷಗಳ ಕಾಲ ಕಳ್ಳತನವಾಗಿದೆ ಎಂದು ಭಾವಿಸಲಾಗಿದ್ದ ಪಾದುಕೆಗಳು ಶಿವಮೊಗ್ಗದ ಎಸ್‌ಬಿಐ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಪತ್ತೆಯಾಗಿವೆ. ಹೊಳೆಹೊನ್ನೂರು ಪೊಲೀಸರ ಸುದೀರ್ಘ ತನಿಖೆ ನಂತರ ಈ ಸತ್ಯ ಬಯಲಿಗೆ ಬಂದಿದೆ. ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ ಪೊಲೀಸರು, ಭಕ್ತರ ಆತಂಕಕ್ಕೆ ತೆರೆ ಎಳೆದಿದ್ದಾರೆ. ಪಾದುಕೆಗಳು ಸುರಕ್ಷಿತವಾಗಿರುವುದಕ್ಕೆ ಭಕ್ತರು ನಿರಾಳರಾಗಿದ್ದಾರೆ.

ಕೂಡಲಿ ಮಠದ ಚಿನ್ನದ ಪಾದುಕೆ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಲ್ಲಿತ್ತು ಈ ಪಾದುಕೆ?
ಕೂಡಲಿ ಮಠ, ಚಿನ್ನದ ಪಾದುಕೆ
Basavaraj Yaraganavi
| Edited By: |

Updated on: Sep 29, 2026 | 3:22 PM

Share

ಮುಖ್ಯಾಂಶಗಳು

  • ಕೂಡಲಿ ಮಠದ 400 ಗ್ರಾಂ ಬಂಗಾರದ ಪಾದುಕೆಗಳು ಕಳ್ಳತನ
  • 1.06 ಕೋಟಿ ರೂ. ಮೌಲ್ಯದ 702 ಗ್ರಾಂ ಚಿನ್ನ ಜಪ್ತಿ
  • ಬೇವೂರು ಬೆಟ್ಟದ ತಿಮ್ಮಪ್ಪನಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ

ಶಿವಮೊಗ್ಗ, ಸೆ.29: ಜಿಲ್ಲೆಯ ಪ್ರಸಿದ್ಧ ಕೂಡಲಿ ಮಠದ 400 ಗ್ರಾಂ ಬಂಗಾರದ ಪಾದುಕೆಗಳು ಕಳ್ಳತನವಾಗಿವೆ ಎನ್ನಲಾಗಿದ್ದ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸುದೀರ್ಘ 2 ವರ್ಷಗಳ ವಿವಾದಕ್ಕೆ ತೆರೆಬಿದ್ದಿದೆ. ಮಾಜಿ ಪೀಠಾಧಿಪತಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಪೀಠತ್ಯಾಗ ಮಾಡಿದ ಬಳಿಕ ದಾಖಲಾಗಿದ್ದ ಈ ಕಳ್ಳತನ ದೂರಿನ ಸತ್ಯಾಸತ್ಯತೆಯನ್ನು ಹೊಳೆಹೊನ್ನೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪೊಲೀಸರ ಸುದೀರ್ಘ ತನಿಖೆಯ ವೇಳೆ ಶ್ರೀಗಳ ಚಿನ್ನದ ಪಾದುಕೆಗಳು ಕಳ್ಳತನವಾಗಿಲ್ಲ, ಬದಲಿಗೆ ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿರುವ ಎಸ್‌ಬಿಐ (SBI) ಬ್ಯಾಂಕ್ ಲಾಕರ್‌ನಲ್ಲಿ ಅತ್ಯಂತ ಸುರಕ್ಷಿತವಾಗಿವೆ ಎಂಬ ಸತ್ಯ ಹೊರಬಿದ್ದಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಪಾದುಕೆಗಳು ಸುರಕ್ಷಿತವಾಗಿರುವುದು ದೃಢಪಡುತ್ತಿದ್ದಂತೆ ಮಠದ ಭಕ್ತಾದಿಗಳು ನಿರಾಳರಾಗಿದ್ದಾರೆ.

ಬೆಂಗಳೂರು: ಜ್ಯೂವೆಲ್ಲರಿ ಕೆಲಸಗಾರನ ಕೈಚಳಕ ಬಯಲು – 1.06 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ, ಆಭರಣ ಜಪ್ತಿ:

ಚಿನ್ನ ತಯಾರಿಕಾ ಸಂಸ್ಥೆ ಮತ್ತು ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.06 ಕೋಟಿ ರೂ. ಮೌಲ್ಯದ 702 ಗ್ರಾಂ ಚಿನ್ನ ಹಾಗೂ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಜ್ಯೂವೆಲ್ಲರಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ನೂರ್ ಇಸ್ಲಾಂ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದೆ. ಈತ ಗುರುಪ್ರಸಾದ್ ಎಂಬುವವರ ಜ್ಯೂವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದು, ಮಾಲೀಕರು ನೀಡುತ್ತಿದ್ದ ಚಿನ್ನದ ಗಟ್ಟಿಯಿಂದ ಆಭರಣ ಮಾಡುವಾಗ ಚಿನ್ನವನ್ನು ಕದ್ದು, ತಾನೇ ಪ್ರತ್ಯೇಕ ಆಭರಣ ಮಾಡಿ ಮನೆಯಲ್ಲಿ ಬಚಿಟ್ಟುಕೊಳ್ಳುತ್ತಿದ್ದನು. ಇತ್ತೀಚೆಗೆ ಚಿನ್ನದ ಗಟ್ಟಿ ಕೊಟ್ಟ ನಂತರ ಈತ ಕೆಲಸಕ್ಕೆ ಬರದಿದ್ದಾಗ ಅನುಮಾನಗೊಂಡ ಮಾಲೀಕರು ಚಿನ್ನವನ್ನು ತಪಾಸಣೆ ನಡೆಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವು ಮಾಡಿದ್ದ ಕೋಟ್ಯಂತರ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: “ಯಾರನ್ನು ಕೇಳಿ ನೀರು ಬಿಟ್ಟಿದ್ದೀರಾ?”: ಅಧಿಕಾರಿಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿ; ಸಚಿವ ತಂಗಡಗಿ ಆಕ್ರೋಶ

ಬೇವೂರು ತಿಮ್ಮಪ್ಪನಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಖದೀಮರ ಬಂಧನ:

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೇವೂರು ಬೆಟ್ಟದ ತಿಮ್ಮಪ್ಪನಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳನ್ನು ಎಂ.ಕೆ. ದೊಡ್ಡಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಫರ್ ಸಾದಿಕ್ ಹಾಗೂ ಸೈಯದ್ ಸಲೀಂ ಬಂಧಿತ ಆರೋಪಿಗಳು. ಇತ್ತೀಚೆಗೆ ದೇವಸ್ಥಾನದ ಬಾಗಿಲು ಒಡೆದು ಒಳನುಗ್ಗಿದ್ದ ಆರೋಪಿಗಳು, ಬೆಳ್ಳಿಯ ವಸ್ತುಗಳು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದರು. ಕಾರ್ಯಚರಣೆ ನಡೆಸಿದ ಎಂ.ಕೆ.ದೊಡ್ಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ಕಳವು ಮಾಡಲಾಗಿದ್ದ ಬೆಳ್ಳಿಯ ಆಭರಣಗಳು/ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Yaraganavi
Basavaraj Yaraganavi