ಶಿವಮೊಗ್ಗ: ಬಡ ಕಾರ್ಮಿಕರಿಗೆ ಎಪಿಎಂಸಿ ಅಧಿಕಾರಿಗಳಿಂದ ಶಾಕ್, ಮನೆ ಮುಂದಿನ ಜಾಗಕ್ಕೆ ಹಣ ನೀಡಲು ನೋಟಿಸ್

ಬಡವರಿಗೆ ಈಗಾಗಲೇ ಮನೆಗಳನ್ನು ಸರಕಾರ ಕೊಟ್ಟಿದೆ. ಆದ್ರೆ 20 ಮನೆಗಳಿಗೆ ಇನ್ನೂ ನೊಂದಣಿ ಮಾಡಿಕೊಟ್ಟಿಲ್ಲ. 23 ವರ್ಷಗಳಿಂದ ಮನೆ ಕೊಟ್ಟಿಕೊಂಡು ವಾಸವಾಗಿರುವ ಕಾರ್ಮಿಕ ವರ್ಗದ ಕುಟುಂಭಕ್ಕೆ ಅಭದ್ರತೆ ಕಾಡುತ್ತಿದೆ. 10 ಕಾರ್ಮಿಕರಿಗೆ ಮನೆ ಮುಂದೆ ಇರುವ ಜಾಗಕ್ಕೆ ಹಣ ಕಟ್ಟಲು ನೋಟಿಸ್ ಕೊಟ್ಟಿದ್ದಾರೆ.

ಶಿವಮೊಗ್ಗ: ಬಡ ಕಾರ್ಮಿಕರಿಗೆ ಎಪಿಎಂಸಿ ಅಧಿಕಾರಿಗಳಿಂದ ಶಾಕ್, ಮನೆ ಮುಂದಿನ ಜಾಗಕ್ಕೆ ಹಣ ನೀಡಲು ನೋಟಿಸ್
ಶಿವಮೊಗ್ಗ: ಬಡ ಕಾರ್ಮಿಕರಿಗೆ ಎಪಿಎಂಸಿ ಅಧಿಕಾರಿಗಳಿಂದ ಶಾಕ್, ಮನೆ ಮುಂದಿನ ಜಾಗಕ್ಕೆ ಹಣ ನೀಡಲು ನೋಟಿಸ್
Follow us
| Updated By: ಗಣಪತಿ ಶರ್ಮ

Updated on: Oct 19, 2023 | 3:31 PM

ಶಿವಮೊಗ್ಗ, ಅಕ್ಟೋಬರ್ 19: ಶಿವಮೊಗ್ಗ ನರದ (Shivamogga City) ಎಪಿಎಂಸಿಯಲ್ಲಿ ಮೂರು ದಶಕಗಳಿಂದ ಬಡ ಕೂಲಿ ಕಾರ್ಮಿಕರು ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಇಷ್ಟು ವರ್ಷಗಳ ಬಳಿಕ ಈಗ ಅವರ ವಾಸ ಇರುವ ಮನೆ ಮುಂದೆ ಮತ್ತು ಹಿಂದಿನ ಜಾಗ ವಿಚಾರವಾಗಿ ವಿವಾದ ಶುರುವಾಗಿದೆ. ಮನೆ ಹಿಂದೆ ಮತ್ತು ಮುಂದೆ ಇರುವ ಜಾಗಕ್ಕೆ ಎಪಿಎಂಸಿ (APMC) ಅಧಿಕಾರಿಗಳು ಹಣ ಸಂದಾಯ ಮಾಡಲು ನೋಟಿಸ್ ಕೊಟ್ಟಿದ್ದಾರೆ. ಈ ನೋಟಿಸ್ ಬಡ ಕೂಲಿ ಕಾರ್ಮಿಕರಿಗೆ ದೊಡ್ಡ ಆಘಾತ ಮೂಡಿಸಿದೆ.

ಶಿವಮೊಗ್ಗದ ಎಪಿಎಂಸಿಯಲ್ಲಿ ದಶಕಗಳಿಂದ ಹೊಟ್ಟೆ ಪಾಡಿಗಾಗಿ ನೂರಾರು ಕುಟುಂಬಗಳು ಕೂಲಿ ಕೆಲಸ ಮಾಸಿಕೊಂಡಿವೆ. ಹೀಗೆ ಸುಮಾರು 30 ಬಡ ಕೂಲಿ ಹಮಾಲಿ ಮಾಡುವ ಕುಟುಂಬಗಳಿಗೆ ವಸತಿಯನ್ನು ಎಪಿಎಂಸಿಯು 1996ರಲ್ಲಿ ನೀಡಿತ್ತು. ಅದರಲ್ಲಿ ಕೇವಲ 10 ಮನೆಗಳು ಮಾತ್ರ ನೊಂದಣಿಯಾಗಿವೆ. ಉಳಿದ 20 ಮನೆಗಳಿಗೆ ನೊಂದಣಿ ಮಾಡಿಕೊಟ್ಟಿಲ್ಲ. ಇನ್ನೂ ಈ ಮನೆಗಳ ಹಿಂದೆ ಮತ್ತು ಮುಂದೆ ಇರುವ ಜಾಗವನ್ನು ಎಪಿಎಂಸಿ ಜಾಗವೆಂದು ನಮೂದಿಸಿದ್ದಾರೆ. ಇದರಿಂದ ಕಾರ್ಮಿಕರಿಗೆ ದೊಡ್ಡ ಸಮಸ್ಯೆ ಎದುರಾಗಿತ್ತು. ಈ ಜಾಗದ ವಿಚಾರವಾಗಿ ಈಗಾಗಲೇ ಹಮಾಲಿ ಕಾರ್ಮಿಕರು ಹೋರಾಟ ಮಾಡಿದ್ದಾರೆ. ಈ ನಡುವೆ ಅಂದಿನ ಸರಕಾರವು ಮನೆ ಹಿಂಭಾಗದ ಜಾಗ ಕೂಲಿ ಕಾರ್ಮಿಕರಿಗೆ ಉಚಿತವಾಗಿ ನೀಡಿತ್ತು. ಆದ್ರೆ ಮುಂಭಾಗದ ಜಾಗ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವುದರಿಂದ ಅದನ್ನು ನೀಡಲು ಬರುವುದಿಲ್ಲವೆಂದು ಆದೇಶ ಮಾಡಿತ್ತು. ಈಗ ಮತ್ತೆ ಎಪಿಎಂಸಿ ಅಧಿಕಾರಿಗಳು ಮನೆ ಮುಂದಿರುವ ಜಾಗಕ್ಕೆ ಅಡಿಗೆ 525 ರೂಪಾಯಿ ಅಂತೆ ಪ್ರತಿಯೊಬ್ಬರು 50 ಸಾವಿರ ರೂಪಾಯಿ ಹಣ ತುಂಬೇಕೆಂದು ನೋಟಿಸ್ ಕೊಟ್ಟಿದ್ದಾರೆ. ಇಷ್ಟೊಂದು ಹಣ ತುಂಬಲು ನಮಗೆ ಸಾಧ್ಯವಿಲ್ಲ. ಆ ಜಾಗವನ್ನು ಉಚಿತವಾಗಿ ನೀಡಬೇಕೆಂದು ಕಾರ್ಮಿಕರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಈ ನೋಟಿಸ್ ವಿರುದ್ದ ಕಾರ್ಮಿಕರು ಎಪಿಎಂಸಿಯಲ್ಲಿ ಪ್ರತಿಭಟನೆ ಕೂಡಾ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸರಕಾರವು ಬಡವರ ಸಮಸ್ಯೆಗೆ ಸ್ಪಂಧಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಬಡವರಿಗೆ ಈಗಾಗಲೇ ಮನೆಗಳನ್ನು ಸರಕಾರ ಕೊಟ್ಟಿದೆ. ಆದ್ರೆ 20 ಮನೆಗಳಿಗೆ ಇನ್ನೂ ನೊಂದಣಿ ಮಾಡಿಕೊಟ್ಟಿಲ್ಲ. 23 ವರ್ಷಗಳಿಂದ ಮನೆ ಕೊಟ್ಟಿಕೊಂಡು ವಾಸವಾಗಿರುವ ಕಾರ್ಮಿಕ ವರ್ಗದ ಕುಟುಂಭಕ್ಕೆ ಅಭದ್ರತೆ ಕಾಡುತ್ತಿದೆ. 10 ಕಾರ್ಮಿಕರಿಗೆ ಮನೆ ಮುಂದೆ ಇರುವ ಜಾಗಕ್ಕೆ ಹಣ ಕಟ್ಟಲು ನೋಟಿಸ್ ಕೊಟ್ಟಿದ್ದಾರೆ. ಮುಂದೆ ಈ ಎಲ್ಲ ಕಾರ್ಮಿಕರನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಎಪಿಎಂಸಿಯು ಹಮಾಲಿಗೆ ಕೊಟ್ಟಿರುವ ವಸತಿ ಮತ್ತು ಮನೆ ಹಿಂದೆ ಮುಂದೆ ಇರುವ ಜಾಗವನ್ನು ಯಾವುದೇ ಗೊಂದಲ ಸೃಷ್ಟಿ ಮಾಡಬಾರದು. ಹಠಾತ್ ಆಗಿ ಜಡವರಿಗೆ ನೋಟಿಸ್ ಕೊಟ್ಟು ಹಣ ತುಂಬಬೇಕೆಂದು ಸೂಚನೆ ಕೊಟ್ಟಿರುವ ಕ್ರಮ ಸರಿಯಲ್ಲ. ಸರಕಾರವು ಬಡ ಕೂಲಿ ಕಾರ್ಮಿಕರ ಪರಿಶ್ರಮಕ್ಕೆ ಬೆಲೆಕೊಡಬೇಕಿದೆ. ಅವರ ವಾಸ ಇರುವ ಮನೆ ಮತ್ತು ಹಿಂದೆ ಮುಂದೆ ಜಾಗದ ತಂಟೆಗೆ ಎಪಿಎಂಸಿ ಅಧಿಕಾರಿಗಳು ಬರಬಾರದೆಂದು ಹಮಾಲಿ ಕಾರ್ಮಿಕರು ಒತ್ತಾಯಿಸಿದ್ದಾರೆ. ಹಮಾಲಿ ಕಾರ್ಮಿಕರ ಸಮಸ್ಯೆ ಕುರಿತು ಜಿಲ್ಲಾಡಳಿತಕ್ಕೆ ಮನವಿ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಏರ್​ಪೋರ್ಟ್​ನಿಂದ ಹೈದರಾಬಾದ್‌, ತಿರುಪತಿ, ಗೋವಾಕ್ಕೂ ವಿಮಾನ ಹಾರಾಟ: ಎಂದಿನಿಂದ? ಇಲ್ಲಿದೆ ವೇಳಾಪಟ್ಟಿ

ಶ್ರೀಮಂತರು ಮತ್ತು ಅಧಿಕಾರಿಗಳ ವರ್ಗ, ಜನಪ್ರತಿನಿಧಿಗಳಿಗೆ ಸರಕಾರದ ಎಲ್ಲ ಸೌಲಭ್ಯಗಳು ಸಲೀಸಾಗಿ ಸಿಕ್ಕು ಬಿಡುತ್ತವೆ. ಆದ್ರೆ ಎಪಿಎಂಸಿಯಲ್ಲಿ ದಕಶಕಗಳಿಂದ ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಕಾರ್ಮಿಕರಿಗೆ ಮಾತ್ರ ನೆಮ್ಮದಿ ಇಲ್ಲದಂತಾಗಿದೆ. ಯಾವುದೇ ಕ್ಷಣದಲ್ಲಿ ಅವರ ವಾಸ ಇರುವ ಮನೆಯಿಂದ ಒಕ್ಕಲೆಬ್ಬಿಸುವ ಆತಂಕ ಮತ್ತು ಭಯ ಹಮಾಲಿ ಕಾರ್ಮಿಕರಿಗೆ ಶುರುವಾಗಿದೆ.. ಹಮಾಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಜಿಲ್ಲಾಡಳಿತವು ಮಾನವಿಯತೆಯ ದೃಷ್ಟಿಕೋನದಿಂದ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ