ಶಿವಮೊಗ್ಗ: ದೆವ್ವ ಮೆಟ್ಕೊಂಡಿದೆ ಎಂದು ಮನಸೋ ಇಚ್ಛೆ ಥಳಿತ, ಮಹಿಳೆ ಸಾವು

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಂಬರಗಟ್ಟೆ ಗ್ರಾಮದಲ್ಲಿ ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿತಕ್ಕೊಳಗಾಗಿದ್ದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸದ್ಯ ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ದೆವ್ವ ಮೆಟ್ಕೊಂಡಿದೆ ಎಂದು ಮನಸೋ ಇಚ್ಛೆ ಥಳಿತ, ಮಹಿಳೆ ಸಾವು
ಮೃತ ಗೀತಮ್ಮ
Edited By:

Updated on: Jul 07, 2025 | 10:34 PM

ಶಿವಮೊಗ್ಗ, ಜುಲೈ 07: ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿಸಿದ್ದ ಮಹಿಳೆ (woman) ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನುರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ. ಗೀತಮ್ಮ(53) ಮೃತ ಮಹಿಳೆ. ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ  ಕೇಸ್ ದಾಖಲಾಗಿದ್ದು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಶಾ ಎಂಬ ಮಹಿಳೆ ತಮ್ಮ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಡ್ಯತೆ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ದೆವ್ವ ಬಂದಿದೆ ಎಂದು ಅವರನ್ನು ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಹೈಟೆಕ್ ವೇಶ್ಯವಾಟಿಕೆ ದಂಧೆ: ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ 6 ಪುರುಷರು, ಇಬ್ಬರು ಯುವತಿಯರು

ನಿನ್ನೆ ರಾತ್ರಿ 9 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ಆಶಾ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಿದ್ದಾರೆ. ಥಳಿತಕ್ಕೊಳಗಾದ ಗೀತಮ್ಮ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನುರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹೊಳೆಹೊನ್ನುರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹಾಸ್ಟೆಲ್​ನಲ್ಲಿ ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದ ವಿದ್ಯಾರ್ಥಿ

ಔಷಧ ತೆಗೆದುಕೊಳ್ಳುವಾಗ ನೀರು ಎಂದು ಭಾವಿಸಿ ವಿದ್ಯಾರ್ಥಿ ಆ್ಯಸಿಡ್​ ಕುಡಿದಿರುವಂತಹ ಘಟನೆ ಧಾರವಾಡದ ಗಾಂಧಿನಗರದ ಸರ್ಕಾರಿ ಹಾಸ್ಟೆಲ್​ನಲ್ಲಿ ನಡೆದಿದೆ. ಅಂಜುಮನ್ ಕಾಲೇಜಿನಲ್ಲಿ ಬಿಎ ಓದುತ್ತಿರುವ ಕುಬೇರ ಲಮಾಣಿ ಆ್ಯಸಿಡ್​ ಕುಡಿದ ವಿದ್ಯಾರ್ಥಿ. ಅಸ್ವಸ್ಥ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ತೀವ್ರ ಅನಾರೋಗ್ಯಕ್ಕೀಡಾಗಿರುವ ವಿದ್ಯಾರ್ಥಿ ಕುಬೇರ ಲಮಾಣಿ, ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನಿವಾಸಿ. ಜೂನ್ 30ರಂದು ನಡೆದ ಘಟನೆಯನ್ನು ಮುಚ್ಚಿಹಾಕಲು ಸಿಬ್ಬಂದಿ ಯತ್ನಿಸಲಾಗಿದೆ. ಕುಡಿಯುವ ನೀರಿನ ಪಕ್ಕದಲ್ಲಿ ಆ್ಯಸಿಡ್​ ಇಟ್ಟಿದ್ದವರ ವಿರುದ್ಧ ಇದುವರೆಗೆ ಧಾರವಾಡ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.