ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ; ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ
ಗೃಹ ಸಚಿವರ ಸರ್ಕಾರಿ ಮನೆ ಬಳಿ ಎಬಿವಿಪಿ ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸ್ತೇನೆ. ಲಾಠಿಚಾರ್ಜ್ ಮಾಡುವುದನ್ನ ನಾನು ಒಪ್ಪುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗ: ಸಿದ್ದರಾಮಯ್ಯಗೆ (Siddaramaiah) ಮಾನ ಮರ್ಯಾದೆ ಇಲ್ಲ. ರಾಜಕೀಯ ತೆವಲಿಗೆ ಹೇಳಿಕೆಗಳನ್ನು ನೀಡಬೇಡಿ ಎಂದು ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು. ಆರ್ಎಸ್ಎಸ್ ಟೀಕಿಸಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಮೊದಲು ನಿಮ್ಮ ಬಾಯಿ ತೊಳೆದುಕೊಳ್ಳಿ. ನಿಮ್ಮಲ್ಲಿ ಕುರುಬ, ಒಕ್ಕಲಿಗ ಎಂದು ಗುಂಪುಗಾರಿಕೆ ಶುರುವಾಗಿದೆ. ಸಿದ್ದರಾಮಯ್ಯನವರೇ ಕುಡುಕರಂತೆ ಮಾತನಾಡಬೇಡಿ. ಒಂದೆರಡು ದಿನ ಆರ್ಎಸ್ಎಸ್ ಶಾಖೆಗೆ ಬನ್ನಿ. ಸ್ವಾಭಿಮಾನದಿಂದ ಬದುಕು ನಿಟ್ಟಿನಲ್ಲಿ ವಾತಾವರಣ ನಿರ್ಮಾಣ ಮಾಡಿದ್ದು ಆರ್ಎಸ್ಎಸ್. ದೇಶದಲ್ಲಿ ರಾಷ್ಟ್ರ ಭಕ್ತಿ ನಿರ್ಮಾಣ ಮಾಡಿದೆ. ಸಂಘದ ಕುರಿತು ಎಬಿಸಿ ಗೊತ್ತಿಲ್ಲ. ಕಾರ್ಯಕರ್ತನ ಪಾದದ ಧೂಳಿಗೂ ಸಮಾನ ಅಲ್ಲ. ಗಲಭೆಗೆ ಪರಿಹಾರದ ಬಿಕ್ಕಟ್ಟು ಕಾರಣ ಹೇಳಿಕೆಗೆ ನಾಚೀಗೆಡಾಗಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ‘ಸರ್ವೆ ಜನೋ ಸುಖಿನೋ ಭವಂತು’ ಎಂಬ ವಾಜಪೇಯಿ ತತ್ತ್ವವನ್ನು ಸಿಎಂ ಬೊಮ್ಮಾಯಿ ಪಾಲಿಸುತ್ತಿಲ್ಲ ಎಂದು HDK ಟ್ವೀಟ್
ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಖಂಡನೆ
ಗೃಹ ಸಚಿವರ ಸರ್ಕಾರಿ ಮನೆ ಬಳಿ ಎಬಿವಿಪಿ ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸ್ತೇನೆ. ಲಾಠಿಚಾರ್ಜ್ ಮಾಡುವುದನ್ನ ನಾನು ಒಪ್ಪುವುದಿಲ್ಲ ಎಂದು ಈಶ್ವರಪ್ಪ ಹೇಳಿದರು. ನಳಿನ್ ಕುಮಾರ್ ಕಟೀಲು ವಿರುದ್ಧ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಮಾತನಾಡಿದ ಅವರು ರಾಜಕಾರಣದಲ್ಲಿ ಇತಿಮಿತಿ ಇದೆ. ಅದನ್ನು ಬಿಟ್ಟು ಮಾತನಾಡಬಾರದು. ಆದರೆ ಸಿದ್ದರಾಮಯ್ಯನವರು ತಮ್ಮ ನಾಲಗೆ ಉದ್ದಗೆ ಚಾಚುತ್ತಿದ್ದಾರೆ. ಸಿಎಂ, ಗೃಹ ಸಚಿವರು, ಕಟೀಲು ವಿರುದ್ಧ ಟೀಕಿಸಿದ್ರೆ ನಾವು ಬಿಡಲ್ಲ. ಅಧಿಕಾರಕ್ಕಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಾಗಿವೆ. ರಮೇಶ್ ಕುಮಾರ್ ಗೂಂಡಾ ಎನ್ನುವುದು ಎಲ್ಲರಿಗೂ ಗೊತ್ತು. ಮಾಧ್ಯಮದವರ ಮೇಲೆ ರಮೇಶ್ ಕುಮಾರ್ ಹಲ್ಲೆಗೆ ಖಂಡನೆ. ಕೂಡಲೇ ರಮೇಶ್ ಕುಮಾರ್ ಬಂಧಿಸಿ ತನಿಖೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಯುವಕರಿಗೆ ಸುದೀರ್ಘ ಪತ್ರ ಬರೆದು ಉಪದೇಶ ಮಾಡಿದ ಸಿದ್ದರಾಮಯ್ಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕರ ಸರಣಿ ಹತ್ಯೆ ಹಿನ್ನೆಲೆ ನಾಡಿನ ಯುವಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಪತ್ರ ಬರೆದು ಉಪದೇಶ ಮಾಡಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಕೆಟ್ಟ ಸರ್ಕಾರದಿಂದ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ವರ್ತನೆ ಇನ್ನಷ್ಟು ಹಿಂಸೆಯನ್ನ ಸೃಷ್ಟಿಸುವಂತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದು ಯುವಕರಿಗೆ ಬುದ್ಧಿ ಮಾತು ಹೇಳಿದ್ದಾರೆ. ರಾಜ್ಯ ಸರ್ಕಾರದ ವರ್ತನೆ ಶಾಂತಿ ಸ್ಥಾಪಿಸುವ ಕಡೆಗೆ ಇಲ್ಲ. ಮುಗ್ಧರ ಹೆಣ ಬಿದ್ದರೆ ರಾಜಕೀಯ ನಡೆಯುತ್ತದೆ ಎಂದು ದುಷ್ಟರು ಭಾವಿಸಿದ್ದಾರೆ. 2018ರ ಬಿಜೆಪಿಯ ಪ್ರಣಾಳಿಕೆಯಲ್ಲಿ ಎನ್ಐಎ ಸ್ಥಾಪಿಸುತ್ತೇವೆಂದು ಆಶ್ವಾಸನೆ ಕೊಟ್ಟಿದ್ರು.
ಕ್ರೂರ ಮನಸ್ಥಿತಿಯ CM, ಬೇಜವಾಬ್ಧಾರಿ ನಡವಳಿಕೆಯ ಗೃಹಮಂತ್ರಿ ರಾಜ್ಯ ಕಂಡಿರಲಿಲ್ಲ. ಕೆಟ್ಟ ಕಾರಣಕ್ಕಾಗಿ ಕರಾವಳಿಯು ರಾಜ್ಯಕ್ಕೆ ಮಾದರಿಯಾಗುವುದು ಬೇಡ. 30 ವರ್ಷಗಳ ಹಿಂದೆ ಕರಾವಳಿಯನ್ನು ರಾಜ್ಯ- ದೇಶಗಳ ಜನರು ಪ್ರೀತಿ, ಗೌರವ ಮತ್ತು ಹೆಮ್ಮೆಯ ಭಾವನೆಗಳಿಂದ ನೋಡುತ್ತಿದ್ದರಲ್ಲ, ಅಂಥ ಕರಾವಳಿಯನ್ನು ದಯಮಾಡಿ ನಿರ್ಮಾಣ ಮಾಡಿ.