AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಆ್ಯಂಬುಲೆನ್ಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸ್ಥಳದಲ್ಲೇ ಸಾವು

ಶಿವಮೊಗ್ಗದಿಂದ ಹಾವೇರಿ ಕಡೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್​ಗೆ ಶಿಕಾರಿಪುರದ ಕಡೆಯಿಂದ ಸ್ವಗ್ರಾಮಕ್ಕೆ ಹೊರಟಿದ್ದ ಬೈಕ್​ ಡಿಕ್ಕಿ ಹೊಡೆದಿದ್ದು ಮೂವರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ: ಆ್ಯಂಬುಲೆನ್ಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸ್ಥಳದಲ್ಲೇ ಸಾವು
ಆ್ಯಂಬುಲೆನ್ಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸ್ಥಳದಲ್ಲೇ ಸಾವು
Basavaraj Yaraganavi
| Updated By: ಆಯೇಷಾ ಬಾನು|

Updated on: Jun 29, 2024 | 8:26 AM

Share

ಶಿವಮೊಗ್ಗ, ಜೂನ್.29: ಆ್ಯಂಬುಲೆನ್ಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ‌ ತಡರಾತ್ರಿ ಸಂಭವಿಸಿದೆ (Accident). ಪ್ರಸನ್ನ(25), ಕಾರ್ತಿಕ್ (27), ಅಜಯ್(25) ಮೃತ ದುರ್ದೈವಿಗಳು (Death).

ಶಿವಮೊಗ್ಗದಿಂದ ಹಾವೇರಿ ಕಡೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್​ಗೆ ಶಿಕಾರಿಪುರದ ಕಡೆಯಿಂದ ಸ್ವಗ್ರಾಮಕ್ಕೆ ಹೊರಟಿದ್ದ ಬೈಕ್​ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹೊಸ ಜೋಗದ ಮೂವರು ಸವಾರರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಊಟಕ್ಕೆ ಕುಳಿತಾಗಲೇ ಹೃದಯಾಘಾತ

ಊಟ ಮಾಡುವಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟನೆ ನಡೆದಿದ್ದು, ಚನ್ನಪಟ್ಟಣ ಮೂಲದ ಡಿ‌ ಗ್ರುಪ್ ನೌಕರ 45 ವರ್ಷದ ಯೋಗೀಶ್​ ಕಚೇರಿಯಲ್ಲಿ ಊಟ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆಗೆ ಫಲಿಸದೇ ಯೋಗೀಶ್​ ಸಾವನಪ್ಪಿದ್ದಾರೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿವೃತ್ತಿ ದಿನವೇ ಲೋಕಾ ಕೈಯಲ್ಲಿ RTO ಲಾಕ್

ನಿವೃತ್ತಿ ದಿನವೇ ಆರ್ ಟಿಒ ಅಧಿಕಾರಿಗೆ ಲೋಕಾ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ರಾಮನಗರ RTO ಅಧಿಕಾರಿ ಶಿವಕುಮಾರ್ ಸೇರಿ ಮೂವರನ್ನ ಬಂಧಿಸಲಾಗಿದೆ. ಹಳೇ ಟ್ರ್ಯಾಕ್ಟರ್​​ಗಳಿಗೆ ಹೊಸ ದಾಖಲೆ ಸೃಷ್ಟಿಸಿ ಸುಮಾರು 2 ಸಾವಿರ ಟ್ರ್ಯಾಕ್ಟರ್​ಗಳಿಗೆ ಹೊಸ ದಾಖಲೆಗಳನ್ನ ಅಧಿಕಾರಿಗಳು ನೀಡಿದ್ರು ಎಂಬುದು ಬಯಲಾಗಿದೆ.

ಇದನ್ನೂ ಓದಿ: ‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?

ಮಾವು ಕೀಳುವಾಗ ವಿದ್ಯುತ್ ಸ್ಪರ್ಶ.. ಕಾರ್ಮಿಕ ಬಲಿ

ಮಾವಿನಕಾಯಿ ಕೀಳುವಾಗ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹ್ಯಾಡಾಳು ಗ್ರಾಮದ ಸೋಮಶೇಖರ್ ಎಂಬುವರ ತೋಟದಲ್ಲಿ ಘಟನೆ ನಡೆದಿದ್ದು, ಯಾದಗಿರಿ ಮೂಲದ ಕಾರ್ಮಿಕ ರತ್ನಪ್ಪ ಸಾವನ್ನಪ್ಪಿದ್ದಾನೆ. ಕಂಬಿಯಿಂದ ಮಾವು ಕೀಳುವಾಗ ಶೆಡ್ ಗೆ ಅಳವಡಿಸಿದ್ದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಓಮಿನಿಗೆ ಮಿನಿ ಬಸ್​ ಡಿಕ್ಕಿ.. ಓರ್ವ ಸಾವು

ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್​ ಒಂದು ಓಮಿನಿಗೆ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪದ ಡ್ಯಾಂ ಬಳಿ ಘಟನೆ ನಡೆದಿದ್ದು, ಭಟ್ಕಳದ ಮಗ್ದೂಮ್ ಕಾಲೋನಿ ನಿವಾಸಿ ಅಬ್ದುಲ್ ವಾಜೀದ್ ಮೃತಪಟ್ಟಿದ್ದಾನೆ. ಅಬ್ದುಲ್ ದಂಪತಿ ಓಮಿನಿಯಲ್ಲಿ ಹೊನ್ನಾವರದಿಂದ ಸಾಗರದತ್ತ ತೆರಳುತ್ತಿದ್ರು. ವಿರುದ್ಧ ದಿಕ್ಕಿನಿಂದ ಬಂದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಓಮಿನಿಗೆ ಡಿಕ್ಕಿ ಹೊಡೆದು ದುರಂತ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ