ಪ್ರತ್ಯೇಕ ಘಟನೆ: ಹಾಸನ, ಶಿವಮೊಗ್ಗದಲ್ಲಿ ಹೊತ್ತಿ ಉರಿದ ಎರಡು ಡಸ್ಟರ್ ಕಾರುಗಳು
ಆಶ್ಚರ್ಯ ಎನ್ನುವಂತೆ ಒಂದೇ ದಿನ ರಾಜ್ಯದ ಎರಡು ಜಿಲ್ಲೆಗಳಾದ ಹಾಸನ ಮತ್ತು ಶಿವಮೊಗ್ಗದಲ್ಲಿ ಪ್ರತಿಷ್ಠಿತ ಕಂಪನಿಯ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಕೂಡಲೇ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.
ಹಾಸನ, ಸೆ.10: ದಂಪತಿ ಡಸ್ಟರ್ (Duster) ಕಾರಿನಲ್ಲಿ ಬೆಂಗಳೂರಿನಿಂದ ಹಾಸನದತ್ತ ತೆರಳುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಗೌಡಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಆಕಸ್ಮಿಕ ಬೆಂಕಿ (Fire) ಕಾಣಿಸಿಕೊಂಡಿದೆ. ಕೂಡಲೇ ಕಾರು ನಿಲ್ಲಿಸಿ ಇಬ್ಬರು ಕೆಳಗಿಳಿದಿದ್ದಾರೆ. ನೋಡ ನೋಡುತ್ತಲೇ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೈವೇಯಲ್ಲಿ ಕಾರ್ಗೆ ಆಕಸ್ಮಿಕ ಬೆಂಕಿ; ಹೊರಬಂದು ಬಚಾವ್
ಶಿವಮೊಗ್ಗ: ಶಿವಮೊಗ್ಗ-ಸಾಗರ ನಡುವಿನ 206 ರಾಷ್ಟೀಯ ಹೆದ್ದಾರಿಯ ಮುದ್ದಿನಕೊಪ್ಪ ಬಳಿ ಚಲಿಸುತ್ತಿದ್ದ ಡಸ್ಟರ್ ಕಾರ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿ ಕಾಣುತ್ತಿದ್ದಂತೆ ಕಾರು ನಿಲ್ಲಿಸಿ, ಒಳಗೆ ಇದ್ದ ವ್ಯಕ್ತಿ ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ವೇಳೆ ಎರಡು ಬದಿಯ ರಸ್ತೆ ಟ್ರಾಫಿಕ್ ಜಾಮ್ ಆಗಿದ್ದು, ಕುಂಸಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:Gadag News: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಮನೆಗಳು: ಲಕ್ಷಾಂತರ ರೂ. ಹಾನಿ
ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ
ಬಾಗಲಕೋಟೆ: ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಾಗಲಕೋಟೆ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಗಲಕೋಟೆ ತಾಲೂಕಿನವರಾದ ಸಂಗಾಪುರ ಗ್ರಾಮದ ಗೋಪಿ ಕುರಿ(22) ಹಾಗೂ ಬೇವೂರ್ ಗ್ರಾಮಸ್ಥ ಸಚೀನ್ ಪಾಟೀಲ್(25) ಬಂಧಿತ ಆರೋಪಿಗಳು. ಇನ್ನು ಈ ಇಬ್ಬರು ಸಂಬಂಧಿಗಳಾಗಿದ್ದು, ಇಲ್ಲಿಯವರೆಗೆ ಒಟ್ಟು 11 ಬೈಕ್ ಕದ್ದಿದ್ದರು. ಈ ಕುರಿತು ಮುತ್ತಪ್ಪ ಕಂಬಾರ ಅವರು ದೂರು ನೀಡಿದ್ದರು. ಇದೀಗ ಬಂಧಿತರಿಂದ 5ಎಚ್ಎಫ್ ಡಿಲಕ್ಸ್ ಬೈಕ್, 4 ಸ್ಪ್ಲೆಂಡರ್, 2 ಪಲ್ಸರ್ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಂಬುವರ ಬೈಕ್ ಕಳ್ಳತನದ ದೂರಿನ ಮೇರೆಗೆ ಕಾರ್ಯಾಚರಣೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ