AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ ಸಾವಿನ ವಿಷಯ ತಿಳಿಯುತಿದ್ದಂತೇ ಪತ್ನಿಗೆ ಹೃದಯಾಘಾತ, ಸಾವಿನಲ್ಲೂ ಒಂದಾದ ವೃದ್ದ ದಂಪತಿ

ಪತಿ ಸಾವಿನ ವಿಷಯ ತಿಳಿಯುತಿದ್ದಂತೇ ಪತ್ನಿಗೆ ಹೃದಯಾಘಾತವಾಗಿದೆ. ಪತಿ ಮೃತಪಟ್ಟ ವಿಷಯ ಕೇಳಿ ಆಘಾತಗೊಂಡಿದ್ದ ಪತ್ನಿ ಸಹ ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ ಸುದೀರ್ಘ ದಾಂಪತ್ಯ ನಡೆಸಿ ಅನ್ಯೋನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ಪತಿ ಸಾವಿನ ವಿಷಯ ತಿಳಿಯುತಿದ್ದಂತೇ ಪತ್ನಿಗೆ ಹೃದಯಾಘಾತ, ಸಾವಿನಲ್ಲೂ ಒಂದಾದ ವೃದ್ದ ದಂಪತಿ
ಮೃತ ದಂಪತಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 11, 2024 | 3:21 PM

ಶಿವಮೊಗ್ಗ, (ಜನವರಿ 11): ಪತಿ ಸಾವಿನ ವಿಷಯ ತಿಳಿಯುತಿದ್ದಂತೇ ಪತ್ನಿಗೆ ಹೃದಯಾಘಾತವಾಗಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹೊಳೆಯಪ್ಪ (90) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪತ್ನಿ ಗಂಗಮ್ಮ (84) ಹೃದಯಾಘಾತ ಸಾವನ್ನಪ್ಪಿದ್ದಾರೆ. ಇದರೊಂದಿಗೆ ವೃದ್ದ ದಂಪತಿ ಸಾವಿನಲ್ಲೂ ಒಂದಾಗಿದೆ.

ಮೃತ ದಂಪತಿಗಳಿಗೆ ಇಬ್ಬರು ಗಂಡು ಗಂಡು ಐವರು ಹೆಣ್ಣು ಮಕ್ಕಳಿದ್ದಾರೆ. ಹಲವು ವರ್ಷಗಳಿಂದ ಸುದೀರ್ಘ ದಾಂಪತ್ಯ ನಡೆಸಿ ಅನ್ಯೋನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದೆ. ಇದೀಗ ಇಬ್ಬರ ಅಗಲಿಕೆಯಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

ಸ್ಮಶಾನ ಜಾಗಕ್ಕಾಗಿ ಗ್ರಾಮಸ್ಥರು-ಫ್ಯಾಕ್ಟರಿ ಸಿಬ್ಬಂದಿ ಮಧ್ಯೆ ಗಲಾಟೆ

ಶಿವಮೊಗ್ಗ: ಶವ ಹೂಳುವ ವಿಚಾರವಾಗಿ ಗ್ರಾಮಸ್ಥರು ಮತ್ತು ಶುಗರ್ ಫ್ಯಾಕ್ಟರಿ ಸಿಬ್ಬಂದಿ ನಡುವೆ ಗಲಾಟೆ ಆಗಿರುವ ಘಟನೆ ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದ ಹತ್ತಿರ ನಗರದಲ್ಲಿ ನಡೆದಿದೆ. ಹಾತಿ ನಗರದ ಬಸವಲಿಂಗಪ್ಫ (75) ಅವರ ಅಂತ್ಯಕ್ರಿಯೆ ವೇಳೆ ಗಲಾಟೆ ನಡೆದಿದೆ. ಗ್ರಾಮದ ಸ್ಮಶಾನ ಜಾಗ ಫ್ಯಾಕ್ಟರಿ ಗೆ ಸೇರಿದೆ ಎಂದು ಶವ ಹೂಳಲು ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತು ಫ್ಯಾಕ್ಟರಿ ಸಿಬ್ಬಂದಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಮತೆಯೇ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರದೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಒಂದು ಎಕರೆ ಜಾಗದಲ್ಲಿ ದಶಕಗಳಿಂದ ಗ್ರಾಮಸ್ಥರು ಸ್ಮಶಾನಕ್ಕೆ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿಯೇ ಅಂತ್ಯಕ್ರಿಯೆ ಮಾಡುವುದಾಗಿ ಪಟ್ಟು ಹಿಡಿದು ಕೊನೆಗೆ ಗ್ರಾಮಸ್ಥರು ಅಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Thu, 11 January 24