ಗ್ಯಾರಂಟಿ ಯೋಜನೆಗಳಿಗೆ ಸಾಲ, ಕರ್ನಾಟಕದ ವಿತ್ತೀಯ ಕೊರತೆ ಹೆಚ್ಚಳ: ಸಿಎಜಿ ವರದಿಯಲ್ಲಿ ಬಹಿರಂಗ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು(ಆಗಸ್ಟ್ 19) ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಿದ್ದು, 2023-24ನೇ ಸಾಲಿನಲ್ಲಿ 5 ಗ್ಯಾರಂಟಿಗಳಿಗೆ ಸಾಲ ಮಾಡಿರುವುದು ಸೇರಿದಂತೆ ಇತರೆ ಅಂಶಗಳು ವರದಿಯಿಂದ ಬಯಲಾಗಿದೆ. ಹಣಕಾಸು ನಿರ್ವಹಣೆ, ಬಜೆಟ್‌ಗೆ ಸಂಬಂಧಿಸಿದ ವಿವರ ಸಿಎಜಿ ವರಿಯಲ್ಲಿ ಉಲ್ಲೇಖವಾಗಿದ್ದು, ರಾಜಸ್ವ ವೆಚ್ಚದಲ್ಲಿ ಶೇ.15ರಷ್ಟು 5 ಗ್ಯಾರಂಟಿ ಪಾಲು ಹೊಂದಿದೆ. ಹಾಗಾದ್ರೆ, ಗ್ಯಾರಂಟಿಗಳಿಗೆ ಎಷ್ಟೆಷ್ಟು ಸಾಲ ಮಾಡಲಾಗಿದೆ ಎನ್ನುವ ಸಂಪೂರ್ವ ಮಾಹಿತಿ ಇಲ್ಲಿದೆ.

ಗ್ಯಾರಂಟಿ ಯೋಜನೆಗಳಿಗೆ ಸಾಲ, ಕರ್ನಾಟಕದ ವಿತ್ತೀಯ ಕೊರತೆ ಹೆಚ್ಚಳ: ಸಿಎಜಿ ವರದಿಯಲ್ಲಿ ಬಹಿರಂಗ
Siddaraaiah
Edited By:

Updated on: Aug 19, 2025 | 10:59 PM

ಬೆಂಗಳೂರು, (ಆಗಸ್ಟ್ 19): ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ (Karnataka) ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಕಳೆದ ಆರ್ಥಿಕ ವರ್ಷ ಅಂದ್ರೇ 2024-25ನೇ ಸಾಲಿನಲ್ಲಿ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಇಡೀ ದೇಶದಲ್ಲಿಯೇ ನಂಬರ್‌ 1 ರಾಜ್ಯವಾಗಿ ಹೊರಹೊಮ್ಮಿದೆ. ದೇಶದಲ್ಲಿಯೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಈಗ ಕರ್ನಾಟಕಕ್ಕೆ ಸಂದಿದೆ. ಇದರ ನಡುವೆ ಪಂಚ ಗ್ಯಾರಂಟಿಗಳಿಂದಾಗಿ (guarantee scheme) ಸಿದ್ದರಾಮಯ್ಯ (Siddaramaiah) ಸರ್ಕಾರದ ತ್ತೀಯ ಕೊರತೆ ಹೆಚ್ಚಳವಾಗಿದೆ. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಹಾಗೂ ಗೃಹ ಜ್ಯೋತಿಯಿಂದಾಗಿ  ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಬೆಳಕಿಗೆ ಬಂದಿದೆ. ಹೌದು…ಈ ಪಂಚ ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರ, 2023-24ರಲ್ಲಿ ಬರೋಬ್ಬರಿ 63,000 ಕೋಟಿ ರೂಪಾಯಿ ಸಾಲ ಮಾಡಿರುವುದು ಸಿಎಜಿ ವರದಿಯಿಂದ ಬಹಿರಂಗವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಆಗಸ್ಟ್ 19) ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡಿಸಿದ್ದು,
ಈ ಐದು ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕದ ಸಂಪನ್ಮೂಲಗಳ ಮೇಲೆ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.  2023-24ನೇ ಸಾಲಿನಲ್ಲಿ 5 ಗ್ಯಾರಂಟಿಗಳಿಗೆ ಸಾಲ ಮಾಡಿರುವುದು ಬೆಳಕಿಗೆ ಬಂದಿದ್ದು. ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ ಬರೋಬ್ಬರಿ 63,000 ಕೋಟಿ ಸಾಲ ಮಾಡಿದ್ದಾಗಿ CAG ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಬಿಎಂಟಿಸಿ ಆರ್ಥಿಕ ಕುಸಿತಕ್ಕೆ ಕಾರಣ ಬಹಿರಂಗ: ಸಿಎಜಿ ವರದಿಯಿಂದ ಬಯಲಾಯ್ತು ಸ್ಫೋಟಕ ಅಂಶ

ಸಿಎಜಿ ವರದಿಯಿಂದ ವಿತ್ತೀಯ ಕೊರತೆ ಬಹಿರಂಗ

5 ಗ್ಯಾರಂಟಿ ಯೋಜನೆಗೆ ಕಳೆದ ವರ್ಷದ ಸಾಲಿನಲ್ಲಿ ಹೆಚ್ಚುವರಿ ಸಾಲ ಮಾಡಲಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ವಿತ್ತೀಯ ಕೊರತೆ ಹೆಚ್ಚಳವಾಗಿದೆ. ವಿತ್ತೀಯ ಕೊರತೆ 46,623 ಕೋಟಿಯಿಂದ 65,522 ಕೋಟಿ ರೂಪಾಪಿಗೆ ಹೆಚ್ಚಳವಾಗಿದೆ ಎಂದು ಸಿಎಂ ಮಂಡಿಸಿದ ಸಿಎಜಿ ವರದಿಲ್ಲಿ ಉಲ್ಲೇಖವಾಗಿದೆ. 2023-24 ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 16,964 ಕೋಟಿ ರೂ., ಗೃಹಜ್ಯೋತಿಗೆ 8,900 ಕೋಟಿ, ಅನ್ನಭಾಗ್ಯಕ್ಕೆ 7,384 ಕೋಟಿ, ಶಕ್ತಿ ಯೋಜನೆಗೆ 3200 ಕೋಟಿ, ಯುವನಿಧಿಗೆ 88 ಕೋಟಿ ರೂ. ಹೊರೆಯಾಗಿದೆ.

ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚ ಕಡಿಮೆ

ಗ್ಯಾರಂಟಿ ಯೋಜನೆಗಳು, ಅದರಿಂದ ಉಂಟಾದ ಕೊರತೆಗಳಿಗೆ ಹಣ ಒದಗಿಸಲು 63,000 ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲ ಪಡೆಯಲಾಗಿದೆ. 2022-23ನೇ ಸಾಲಿನ ನಿವ್ವಳ ಸಾಲಕ್ಕಿಂತ 37,000 ಕೋಟಿ ರೂ. ಹೆಚ್ಚಳವಾಗಿದೆ. 2022-23ನೇ ಸಾಲಿಗೆ ಹೋಲಿಸಿದರೆ ಗ್ಯಾರಂಟಿ ಯೋಜನೆಗಳು. ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚ 5,229 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಿಎಜಿ ವರದಿ ಮಂಡಿಸಿದ್ದಾರೆ.

ತೆರಿಗೆ ಆದಾಯ ಹೆಚ್ಚಳ

2022-23ನೇ ಸಾಲಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಸ್ವಂತ ತೆರಿಗೆ ಆದಾಯ ಅಥವಾ ಸಂಪನ್ಮೂಲಗಳ ಸ್ವೀಕೃತಿಯಲ್ಲಿ ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ರಾಜ್ಯದ ಸ್ವಂತ ಸಂಪನ್ಮೂಲಗಳ ಪ್ರಮಾಣ ಶೇ. 76ರಷ್ಟಿದ್ದು, 2022-23ಕ್ಕೆ ಹೋಲಿಸಿದರೆ ಸ್ವಂತ ತೆರಿಗೆ ಆದಾಯ ಶೇ. 13.78ರಷ್ಟು ಹೆಚ್ಚಳವಾಗಿದೆ ಹಾಗೂ ಕೇಂದ್ರ ತೆರಿಗೆ ವರ್ಗಾವಣೆಯು ಶೇ. 19.07ರಷ್ಟು ಹೆಚ್ಚಳವಾಗಿದೆ. ಆದರೆ, ತೆರಿಗೇತರ ಆದಾಯವು 2022-23ರಲ್ಲಿ 13,914 ಕೋಟಿ ರು.ಗಳಷ್ಟಿದ್ದರೆ 2023-24ರಲ್ಲಿ 13,117 ಕೋಟಿ ರು.ಗೆ ಕುಸಿದಿದ್ದು, ಒಟ್ಟಾರೆ 797 ಕೋಟಿ ರೂ. ಇಳಿಕೆಯಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

2023-24ರಲ್ಲಿ ರಾಜ್ಯದ ಆದಾಯವು ಕಳೆದ ವರ್ಷಕ್ಕಿಂತ ಶೇ.1.86 ರಷ್ಟು ಹೆಚ್ಚಳವಾಗಿದೆ. ಆದ್ರೆ, ಖರ್ಚು ಶೇ.12.54 ರಷ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೇ ಮುಂದೆ ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಆರ್ಥಿಕತೆಯ ಮೇಲೆ ಒತ್ತಡ ಬೀಳುತ್ತೆ ಎಂದು ಸಿಎಜಿ ವರದಿ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:22 pm, Tue, 19 August 25